ದಶಪಥ ರಸ್ತೆಯಲ್ಲಿ ಜನಸಾಮಾನ್ಯರ ಆಟೋ, ಬೈಕ್ ಗಳಿಗೆ ನೋ ಎಂಟ್ರಿ!
ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಬಗ್ಗೆ ಸದ್ಯ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಫೆಬ್ರವರಿ ಅಂತ್ಯಕ್ಕೆ ಮೈಸೂರು—ಬೆಂಗಳೂರು ದಶಪಥ ರಸ್ತೆಯಲ್ಲಿ ಪ್ರಯಾಣಿಸಲು ಜನರು ಸಿದ್ಧರಾಗುತ್ತದ್ದಂತೆಯೇ ಸಂಸದ ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆ ಜನಸಾಮಾನ್ಯರನ್ನು ನಿರಾಸೆಗೊಳಿಸಿದೆ.
ಮೈಸೂರು—ಬೆಂಗಳೂರು ದಶಪಥ ರಸ್ತೆಯಲ್ಲಿ ಬೈಕ್ ಹಾಗೂ ಆಟೋಗಳಿಗೆ ಅವಕಾಶವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಬೈಕ್ , ಆಟೋಗಳಿಗೆ ಅವಕಾಶವಿಲ್ಲ ಎಂದಿದ್ದಾರೆ.
ಬೈಕ್ ಆಟೋಗಳಲ್ಲಿ ಜನ ಸಾಮಾನ್ಯರು ಹೆಚ್ಚಾಗಿ ಪ್ರಯಾಣಿಸುತ್ತಾರೆ. ಜನ ಸಾಮಾನ್ಯರು ಹಿಂದಿನ ಅದೇ ಹೊಂಡಗುಂಡಿಗಳ ರಸ್ತೆಗಳಲ್ಲಿ ಪ್ರಯಾಣಿಸಬೇಕು? ತೇಪೆ ಹಾಕಿದ ರೋಡ್ ಗಳಲ್ಲಿಯೇ ಪ್ರಯಾಣಿಸಬೇಕು, ಶ್ರೀಮಂತರ ನಾಲ್ಕು ಚಕ್ರಗಳ ವಾಹನಗಳಿಗೆ ಮಾತ್ರವೇ ಹೈವೇಗಳಲ್ಲಿ ಓಡಾಡಲು ಅವಕಾಶ ನೀಡಲಾಗಿದೆ ಅನ್ನೋ ಸಹಕವಾದ ಕೋಪ ಜನರಿಂದ ವ್ಯಕ್ತವಾಗಿದೆ.
ನಾವು ಕೂಡ ಸರ್ಕಾರಕ್ಕೆ ತೆರಿಗೆ ಕಟ್ಟುತ್ತೇವೆ. ಆದ್ರೆ, ಕೇವಲ ಶ್ರೀಮಂತರ ವಾಹನಗಳು ಮಾತ್ರವೇ ಉತ್ತಮ ಗುಣಮಟ್ಟದ ರಸ್ತೆಯಲ್ಲಿ ಓಡಾಡಬೇಕೇ? ಜನ ಸಾಮಾನ್ಯರು ಅಂತಹ ರಸ್ತೆಗಳಲ್ಲಿ ಓಡಾಡ ಬಾರದೇ? ಅನ್ನೋ ಪ್ರಶ್ನೆಗಳು ಕೇಳಿ ಬಂದಿದೆ.
ವೇಗವಾಗಿ ಸಂಚರಿಸುವ ದಶಪಥ ರಸ್ತೆಯಲ್ಲಿ ಬೈಕ್, ಆಟೋಗಳು ನಿಧಾನವಾಗಿ ಸಂಚರಿಸಿದರೆ, ಅಪಘಾತವಾಗುತ್ತದೆ ಎಂದು ಹೇಳುತ್ತೀರಿ, ಅಂದ್ರೆ, ನಮ್ಮಿಂದ ಮಾತ್ರವೇ ಅಪಘಾತವಾಗುತ್ತಿತ್ತಾ? ಶ್ರೀಮಂತರ ಮಕ್ಕಳು ಕಂಠಮಟ್ಟ ಕುಡಿದು ವಾಹನ ಚಲಾಯಿಸಿ ಎಷ್ಟೋ ಬಡವರ ಜೀವ ತೆಗೆದು ಈಗಲೂ ಪಶ್ಚಾತಾಪವಿಲ್ಲದೇ ಓಡಾಡುತ್ತಿದ್ದಾರೆ. ಯಾರು ಕೆಟ್ಟವರು? ಅನ್ನೋ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ.
ಪೂನಾ, ದೆಹಲಿ, ಮುಂಬೈಯಲ್ಲಿ ಕೂಡ ಹೈವೇ ಇದೆ. ಅಲ್ಲಿ ಎಲ್ಲಾ ವಾಹನಗಳು ಹೈವೇಗಳಲ್ಲಿಯೇ ಸಂಚರಿಸುತ್ತದೆ. ಆದರೆ ಇಲ್ಲಿ ಹೊಸ ನಿಯಮಗಳನ್ನು ಹೇರಲಾಗ್ತಿದೆ. ಜನ ಸಾಮಾನ್ಯರು ಹೊಂಡ ಗುಂಡಿಗಳ ರಸ್ತೆಯಲ್ಲಿ ಪ್ರಯಾಣಿಸಿ, ರಸ್ತೆ ಸರಿಪಡಿಸಿ ಎಂದು ಮನವಿ ಪತ್ರ ನೀಡುತ್ತ ಇರುವ ಸ್ಥಿತಿಯಲ್ಲೇ ಇರುತ್ತಾರೆ. ಶ್ರೀಮಂತರು ನಾವು ತೆರಿಗೆ ಕಟ್ಟಿದ ಹಣದಲ್ಲಿ ತಮ್ಮ ಐಶಾರಾಮಿ ವಾಹನ ಓಡಿಸುತ್ತಾರೆ ಅನ್ನೋ ಆಕ್ರೋಶದ ಮಾತುಗಳು ಕೇಳಿ ಬಂದಿವೆ.
ಅಂತೂ ಇಂತು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಬೇಕಾಗಿದ್ದ ದಶಪಥ ರಸ್ತೆ ಇದೀಗ ಶ್ರೀಮಂತರ ಪಾಲಾಗಿದ್ದು, ಎಲ್ಲರೂ ಸಂತೋಷದಿಂದ ಈ ರಸ್ತೆಯನ್ನು ಸ್ವಾಗತಿಸುವ ಹೊತ್ತಿನಲ್ಲೇ ಹೊಸತೊಂದು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw