ಎನ್.ಮಹೇಶ್ ಗೆ ಬಿಎಸ್ ಪಿಯಿಂದ ಅನ್ಯಾಯ ಆಗಿಲ್ಲ | ಬಿಎಸ್ ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ
ಮೈಸೂರು: ಬಿಎಸ್ ಪಿಯನ್ನು ತಾಯಿ ಎಂದು ತಿಳಿದಿದ್ದೆ, ಆದರೆ ತಾಯಿಯೇ ಮೋಸ ಮಾಡಿದ್ದಾಳೆ ಎಂದು ಎನ್.ಮಹೇಶ್ ಹೇಳಿದ್ದಾರೆ. ಆದರೆ, ಎನ್.ಮಹೇಶ್ ಗೆ ಬಿಎಸ್ ಪಿಯಿಂದ ದ್ರೋಹವಾಗಿಲ್ಲ. ಬಿಎಸ್ ಪಿಗೆ ಎನ್.ಮಹೇಶ್ ಅವರಿಂದ ವಿಶ್ವಾಸ ದ್ರೋಹವಾಗಿದೆ ಎಂದು ಎಂದು ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ) ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.
ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್.ಮಹೇಶ್ ಸತತ 7 ಚುನಾವಣೆಗಳಲ್ಲಿ ಸೋತರೂ ಬಿಎಸ್ ಪಿ ಅವರಿಗೆ ಓಡಾಡಲು ಕಾರು ನೀಡಿತು. ಮತ್ತೆ ಮತ್ತೆ ಟಿಕೆಟ್ ಕೊಟ್ಟಿತು. ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಮಾಯಾವತಿ ಒತ್ತಡ ಹೇರಿ ಸಚಿವ ಸ್ಥಾನ ಕೊಡಿಸಿದರು. ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವಾಗ ಸದನದಲ್ಲಿ ಹಾಜರಿದ್ದು ತಟಸ್ಥರಾಗಿರಿ ಎಂದು ಪಕ್ಷ ಸೂಚಿಸಿತ್ತು. ಆದರೆ, ಸದನಕ್ಕೆ ಗೈರಾಗಿ ತಲೆಮರೆಸಿಕೊಂಡಿದ್ದು ಏಕೆ ಎಂಬ ಪ್ರಶ್ನೆಗೆ ಮಹೇಶ್ ಉತ್ತರಿಸಬೇಕು ಎಂದು ಅವರು ಪ್ರಶ್ನಿಸಿದರು.
ಬಿ.ಎಸ್.ಯಡಿಯೂರಪ್ಪ ಅವರ ಬೆನ್ನಿಗೆ ಅವರೆ ಕರೆದುಕೊಂಡು ಬಂದ ಶಾಸಕರು, ಮಠಾಧೀಶರು, ರಾಜ್ಯದಲ್ಲಿ ಪ್ರಬಲವಾಗಿದ್ದ ಸಮುದಾಯ ಇತ್ತು. ಆದರೂ, ಹೈಕಮಾಂಡ್ ಹೇಳಿದ ತಕ್ಷಣ ರಾಜೀನಾಮೆ ನೀಡಿ ತಮ್ಮ ನಿಯತ್ತನ್ನು ಪ್ರದರ್ಶಿಸಿದ್ದಾರೆ. ಅವರನ್ನು ನೋಡಿಯಾದರೂ ಮಹೇಶ್ ಕಲಿಯಬೇಕು ಎಂದು ಕೃಷ್ಣಮೂರ್ತಿ ಹೇಳಿದರು.
ಹೆಚ್ಚು ಸುಳ್ಳು ಹೇಳಿದವರಿಗೆ ನೀಡಲಾಗುವ ನೊಬೆಲ್ ಬಹುಮಾನವನ್ನು ನರೇಂದ್ರ ಮೋದಿಗೆ ನೀಡಬೇಕು ಎಂದು ಹಿಂದೆ ಮಹೇಶ್ ಹೇಳಿದ್ದರು. ಈಗ ಅವರ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಒಂದು ವೇಳೆ ತಾಕತ್ತು ಇದ್ದರೆ ಅಂದು ಹೇಳಿದ ಮಾತನ್ನು ಈಗ ಮತ್ತೆ ಹೇಳಲಿ. ವಚನಭ್ರಷ್ಟ ಪ್ರಧಾನಿ ಎಂಬ ಹೇಳಿಕೆಯನ್ನು ಪುನರುಚ್ಚರಿಸಲಿ ಎಂದು ಕೃಷ್ಣಮೂರ್ತಿ ಸವಾಲು ಹಾಕಿದರು.
ಇನ್ನಷ್ಟು ಸುದ್ದಿಗಳು…
ಮರಣ ಪ್ರಮಾಣ ಪತ್ರಗಳಲ್ಲಿಯೂ ಮೋದಿ ಫೋಟೋ ಹಾಕಿಸಿ | ಪ್ರಧಾನಿ ಮೋದಿ ವಿರುದ್ಧ ಮಮತಾ ಆಕ್ರೋಶ
ತನಗೆ ಕಚ್ಚಿದ ಹಾವನ್ನು ಕಚ್ಚಿ ಕಚ್ಚಿಯೇ ಕೊಂದ ಭೂಪ: ಅಷ್ಟಕ್ಕೂ ಅಲ್ಲಿ ನಡೆದ್ದದ್ದೇನು ಗೊತ್ತಾ?
ಗಾಂಜಾ, ಕುಡಿದು ಗಾಡಿ ಚಲಾಯಿಸಿ ಪ್ರಾಣ ಬಲಿ ಪಡೆಯುವುದು ಸಿ.ಟಿ ರವಿ, ಬಿಜೆಪಿ ಸಂಸ್ಕೃತಿ | ರಾಮಲಿಂಗಾರೆಡ್ಡಿ ತಿರುಗೇಟು
ಬಿಜೆಪಿ ಸರ್ಕಾರದ ವಿರುದ್ಧವೇ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರತಿಭಟನೆ | ಕಾರಣ ಏನು ಗೊತ್ತಾ?
ನೀವು ಬೆಳೆದ ಬೆಳೆಗಳನ್ನು ಕೊಟ್ಟು, ಐಶಾರಾಮಿ ಕಾರು ಕೊಂಡುಹೋಗಿ: ಟೊಯೋಟಾದಿಂದ ರೈತರಿಗೆ ಆಫರ್