ತೆಪ್ಪದಲ್ಲಿ ಎನ್.ಮಹೇಶ್ ಪ್ರವಾಹ ವೀಕ್ಷಣೆ ವಿಡಿಯೋ: ಕಾರ್ಯಕರ್ತರು ಹೇಳಿದ್ದು ಹೀಗೆ…
ಕೊಳ್ಳೇಗಾಲ: ಶಾಸಕ ಎನ್.ಮಹೇಶ್ ಅವರು ಪ್ರವಾಹದ ಅರ್ಧ ಅಡಿ ನೀರಿನಲ್ಲಿ ತೆಪ್ಪದಲ್ಲಿ ಹೋಗಿದ್ದಾರೆ ಎಂಬ ವರದಿಗೆ ಸಂಬಂಧಿಸಿದಂತೆ ಕಾರ್ಯಕರ್ತರೊಬ್ಬರು ಪ್ರತಿಕ್ರಿಯಿಸಿದ್ದು, ವಾಸ್ತವ ಸ್ಥಿತಿ ತಿಳಿಯದೇ ಈ ಘಟನೆಯ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಎನ್.ಮಹೇಶ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಆದರೂ ಪ್ರವಾಹ ಸ್ಥಿತಿಯಲ್ಲಿ ಜನಪ್ರತಿನಿಧಿಯಾಗಿದ್ದುಕೊಂಡು ಅವರು ಪ್ರವಾಹ ವೀಕ್ಷಣೆಗೆ ಆಗಮಿಸಿದ್ದಾರೆ. ನೀರಿನ ಆಳ ಎಷ್ಟಿದೆ ಅನ್ನೋದು ತಿಳಿದಿರಲಿಲ್ಲ. ಹೀಗಾಗಿ ತೆಪ್ಪದಲ್ಲಿ ಅವರನ್ನು ಕರೆತರಲಾಯಿತು. ಎನ್.ಮಹೇಶ್ ಒಬ್ಬರೇ ತೆಪ್ಪದಲ್ಲಿ ಇರಲಿಲ್ಲ, ಅಧಿಕಾರಿಗಳು ಕೂಡ ತೆಪ್ಪದಲ್ಲಿದ್ದರು ಎಂದು ತಿಳಿಸಿದ್ದಾರೆ.
ಜ್ವರದ ಕಾರಣದಿಂದಾಗಿ ಅವರು ತೆಪ್ಪದಲ್ಲಿ ಬರುವುದು ಅನಿವಾರ್ಯವಾಗಿತ್ತು. ಅರ್ಧ ಅಡಿ ನೀರಿನಲ್ಲಿ ತೆಪ್ಪದಲ್ಲಿ ಎನ್.ಮಹೇಶ್ ಬಂದಿದ್ದಾರೆ ಅಂತ ಕೆಲವರು ಅಪಪ್ರಚಾರ ಮಾಡ್ತಿದ್ದಾರೆ. ಯಾರಾದ್ರು, ಎದೆ ಮಟ್ಟದ ನೀರಿನಲ್ಲಿ ತೆಪ್ಪ ಹತ್ತುತ್ತಾರಾ? ನೀರು ಕಡಿಮೆ ಇದ್ದ ಸ್ಥಳದಿಂದತೆಪ್ಪ ಹತ್ತುತ್ತಾರೆ? ಎಂದು ಪ್ರಶ್ನಿಸಿದ ಅವರು, ಈ ವಿಚಾರ ಗೊತ್ತಿಲ್ಲದಿದ್ದರೆ, ತೆಪ್ಪ ಚಲಾಯಿಸುವವರ ಬಳಿ ಕೇಳಿ ನೋಡಲಿ ಎಂದರು.
ಮುಂದೆ ನೀರು ಎಷ್ಟು ಆಳದವರೆಗೆ ಇದೆ. ಎಲ್ಲಿ ಹೊಂಡ ಗುಂಡಿಗಳಿವೆ ಎನ್ನುವುದು ತಿಳಿದಿರಲಿಲ್ಲ. ಹೀಗಾಗಿ ತೆಪ್ಪ ಹತ್ತಿದ್ದಾರೆ ಇದೊಂದು ವಿವಾದ ಮಾಡುವ ವಿಷಯವೇ? ಎಂದು ಪ್ರಶ್ನಿಸಿದ್ದಾರೆ.
ರಾಜಕೀಯ ವಿರೋಧಿಗಳು ಎಂದಿಗೂ ಒಳ್ಳೆಯ ಕೆಲಸಕ್ಕೆ ಬೆಂಬಲವಾಗಿ ನಿಲ್ಲಲ್ಲ, ಅಪಪ್ರಚಾರ ಮಾತ್ರವೇ ಅವರ ಅಸ್ತ್ರ ಇದಕ್ಕೆಲ್ಲ ಎನ್.ಮಹೇಶ್ ಅವರ ಪ್ರಾಮಾಣಿಕ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವುದಿಲ್ಲ. ಜನರಿಗೆ ಸತ್ಯ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka