ಎನ್ ಎಸ್ ಯುಐ ಕಾರ್ಯಕರ್ತರ ಬಿಡುಗಡೆ: “ನಾಡಿಗಾಗಿ ಜೈಲಿಗೆ ಹೋಗಿದ್ದಕ್ಕೆ ಹೆಮ್ಮೆಯಿದೆ” - Mahanayaka
2:16 AM Wednesday 5 - February 2025

ಎನ್ ಎಸ್ ಯುಐ ಕಾರ್ಯಕರ್ತರ ಬಿಡುಗಡೆ: “ನಾಡಿಗಾಗಿ ಜೈಲಿಗೆ ಹೋಗಿದ್ದಕ್ಕೆ ಹೆಮ್ಮೆಯಿದೆ”

nsui
09/06/2022

ತುಮಕೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿ ಬಂಧಿತರಾಗಿದ್ದ ಎನ್ ಎಸ್ ಯುಐ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಾಗಿದೆ.

ಪಠ್ಯಪುಸ್ತಕ ಪರಿಷ್ಕರಣೆಯನ್ನು ವಿರೋಧಿಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆ ಮುಂಭಾಗದಲ್ಲಿ ಎನ್ ಎಸ್ ಯುಐ ಕಾರ್ಯಕರ್ತರು ಆರೆಸ್ಸೆಸ್ ಚಡ್ಡಿಗೆ ಬೆಂಕಿ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಬಂಧಿಸಿ 9 ದಿನಗಳ ಬಳಿಕ  ಬಿಡುಗಡೆ ಮಾಡಲಾಗಿದೆ.

ಬಿಡುಗಡೆಯ ಬಳಿ ಮಾತನಾಡಿದ ಎನ್ ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ದೇಶಕ್ಕೋಸ್ಕರ ಹೋರಾಟ ಮಾಡಿ ಜೈಲಿಗೆ ಹೋಗಿದ್ದಕ್ಕೆ ಖುಷಿ ಇದೆ. ಆರೆಸ್ಸೆಸ್ ಮಾತು ಕೇಳಿ ಬಿಜೆಪಿಯವರು ಅಂಬೇಡ್ಕರ್, ಬಸವಣ್ಣ, ಕುವೆಂಪು ವಿಚಾರಗಳನ್ನು ಸುಟ್ಟು ಹಾಕಲು ಪ್ರಯತ್ನಿಸುತ್ತಿತ್ತು. ಹಾಗಾಗಿ ನಾವು ಆರೆಸ್ಸೆಸ್ ಚಡ್ಡಿ ಸುಟ್ಟಿದ್ದೇವೆ ಎಂದು ಹೇಳಿದರು.

ನಾಡಿಗಾಗಿ ಈ ಹೋರಾಟದಲ್ಲಿ ಭಾಗವಹಿಸಿದ್ದು, ನಮಗೆ ಹೆಮ್ಮೆ ಅನ್ನಿಸುತ್ತಿದೆ. ಕಾಂಗ್ರೆಸ್ ನಾಯಕರು ಸದಾ ನಮ್ಮ ಜೊತೆಗೆ ಇದ್ದರು ಎಂದು ಕೀರ್ತಿ ಗಣೇಶ್ ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉದ್ಘಾಟನೆ ವೇಳೆಯೇ ಕುಸಿದು ಬಿದ್ದ ಸೇತುವೆ: ಮೇಯರ್ ಸಹಿತ 8 ಮಂದಿಗೆ ಗಾಯ!

ತರಗತಿಯಲ್ಲಿ ಸಾವರ್ಕರ್ ಫೋಟೋ: ಮಂಗಳೂರಿನ  ಕಾಲೇಜಿನಲ್ಲಿ ಮತ್ತೊಂದು ವಿವಾದ!

ಕೊನೆಗೂ ತನ್ನನ್ನು ತಾನೇ ಮದುವೆಯಾಗಿ ಸಪ್ತಪದಿ ತುಳಿದ ಯುವತಿ

ಸ್ವಾಮೀಜಿಗಳ ವೇಷ ತೊಟ್ಟು ದುಡ್ಡು ಕಲೆಕ್ಷನ್: ಮೂವರ ಬಂಧನ

ಮಗುವಿನ ಕೈಕಾಲು ಕಟ್ಟಿ ಬಿರುಬಿಸಿಲಿನಲ್ಲಿ ಮಲಗಿಸಿದ ಪಾಪಿ ತಾಯಿ!

ಇತ್ತೀಚಿನ ಸುದ್ದಿ