ಶಾಕಿಂಗ್ ನ್ಯೂಸ್: ನಡೆದುಕೊಂಡು ಹೋಗುತ್ತಿದ್ದ ಯುವತಿಯ ಖಾಸಗಿ ಅಂಗ ಮುಟ್ಟಿ ಹಾಡಹಗಲೇ ಲೈಂಗಿಕ ಕಿರುಕುಳ!
ಬೆಂಗಳೂರು: ಹಾಡಹಗಲೇ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಖಾಸಗಿ ಅಂಗಗಳನ್ನು ಮುಟ್ಟಿ ಹಲ್ಲೆ ನಡೆಸಿ, ಕಿರುಕುಳ ನೀಡಲಾಗಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಇಲ್ಲಿನ ಲ್ಯಾಂಗ್ ಫೋರ್ಡ್ ರಸ್ತೆಯಲ್ಲಿ ಜಯನಗರದ ಕಂಪೆನಿಯೊಂದರ ಉದ್ಯೋಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬಾಲಿಸಿದ ದುಷ್ಕರ್ಮಿ, ಏಕಾಏಕಿ ಯುವತಿಯನ್ನು ಬಲವಂತವಾಗಿ ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹೇಳಲಾಗಿದೆ.
ಘಟನೆ ಸಂಬಂಧ ಇಲ್ಲಿನ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದುಮ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ ಮಹಿಳೆಯರ ಮೇಲಿನ ಕಿರುಕುಳ ಪ್ರಕರಣಗಳು ಮಿತಿ ಮೀರುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದವರೇ, ಅತ್ಯಾಚಾರಗಳಂತಹ ಘಟನೆಗಳು ನಡೆದಾಗ, ಸಂತ್ರಸ್ತರನ್ನೇ ತಪ್ಪಲ್ಲಿ ಹಿಡಿದು ಮಾತನಾಡಿರುವುದು ಮೈಸೂರು ಪ್ರಕರಣದಲ್ಲಿ ಸಾಬೀತಾಗಿದೆ. ಹಾಗಿದ್ದರೆ, ಕಿರುಕುಳ ಪ್ರಕರಣಗಳ ನಿಯಂತ್ರಣದ ಜವಾಬ್ದಾರಿ ಯಾರದ್ದು? ಎಲ್ಲವನ್ನೂ ಪೊಲೀಸರೇ ನಿರ್ವಹಿಸುತ್ತಿದ್ದರೆ, ರಾಜಕಾರಣಿಗಳ ಅವಶ್ಯಕತೆ ಏನು ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.
ಇನ್ನಷ್ಟು ಸುದ್ದಿಗಳು…
ದೇವಸ್ಥಾನ ತೆರವಿನಿಂದ ಕೋಟ್ಯಂತರ ಜನರ ಮನಸ್ಸಿಗೆ ನೋವಾಗಿದೆ: ಸಿ.ಟಿ.ರವಿ
ಹೃದಯ ವಿದ್ರಾವಕ ಘಟನೆ: ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಕ್ಕಳ ಮೇಲೆಯೇ ಉರುಳಿ ಬಿತ್ತು ಕಟ್ಟಡ!
ಶಾಕಿಂಗ್ ನ್ಯೂಸ್: ಹಫ್ತಾ ನೀಡಲು ನಿರಾಕರಿಸಿದ ವ್ಯಕ್ತಿಯ ಪತ್ನಿಯ ಮೇಲೆ ರೌಡಿಗಳಿಂದ ಗ್ಯಾಂಗ್ ರೇಪ್
ಹೈದರಾಬಾದ್: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ | ಸಿಡಿದೆದ್ದ ಜನರು
ಅಜ್ಜಿಯ ಮನೆಗೆ ಬಂದ ಮಹಿಳೆ, ತನ್ನ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ!
ಎತ್ತಿನಗಾಡಿಯಿಂದ ಕೆಳಕ್ಕೆ ಉರುಳಿದ ಕಾಂಗ್ರೆಸ್ ನಾಯಕರು
ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿ, ಅಂಗಾಂಗ ಮುಟ್ಟಿ ವಿಕೃತವಾಗಿ ಥಳಿಸಿದ ತಂಡ: ವಿಡಿಯೋ ವೈರಲ್