ನದಿ ಬಿದ್ದ ಬಾಲಕಿಯನ್ನು ರಕ್ಷಿಸಲು ಹೋದ ಅತ್ತೆಯೂ ನೀರುಪಾಲು | ನೀರು ಕುಡಿಯಲು ಹೋದ ವೇಳೆ ನಡೆದದ್ದೇನು?
ಮುದ್ದೆಬಿಹಾಳ: ನೀರು ಕುಡಿಯಲೆಂದು ಕೃಷ್ಣಾ ನದಿಗೆ ಇಳಿದಿದ್ದ ಬಾಲಕಿಯೋರ್ವಳು ಕಾಲು ಜಾರಿ ನೀರಿಗೆ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಹೋದ ಅವಳ ಅತ್ತೆ ಕೂಡ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹುನಕುಂಟಿ ಗ್ರಾಮದ 20 ವರ್ಷ ವಯಸ್ಸಿನ ಅತ್ತೆ ಶಾಂತಮ್ಮ ಭೀಮನಗೌಡ ನಾಗೋಡ ಹಾಗೂ 8 ವರ್ಷ ವಯಸ್ಸಿನ ಬಾಲಕಿ ಗುರುಸಂಗಮ್ಮ ಭೀಮಪ್ಪ ಮದೂರ ಸಾವಿಗೀಡಾದವರು ಎಂದು ಗುರುತಿಸಲಾಗಿದ್ದು, ಈಗಾಗಲೇ ಮೃತದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮೇಲೆತ್ತಿದ್ದಾರೆ.
ದನ ಮೇಯಿಸಲೆಂದು ಇವರಿಬ್ಬರು ತೆರಳಿದ್ದು, ಈ ವೇಳೆ ಬಾಯಾರಿತೆಂದು ಬಾಲಕಿ ಗುರುಸಂಗಮ್ಮ ನೀರು ಕುಡಿಯಲು ನದಿಗೆ ಇಳಿದಿದ್ದಾಳೆ. ಈ ವೇಳೆ ಆಳವಾಡ ಗುಂಡಿ ನೀರಿನಲ್ಲಿರುವುದು ತಿಳಿಯದೇ ನೀರಿಗೆ ಕಾಲಿಟ್ಟಿದ್ದು, ಈ ವೇಳೆ ಬಾಲಕಿ ನೀರಿನಲ್ಲಿ ಮುಳುಗಿದ್ದಾಳೆ. ಆಕೆಯನ್ನು ರಕ್ಷಿಸಲು ಆಕೆಯ ಅತ್ತೆ ಶಾಂತಮ್ಮ ಕೂಡ ನೀರಿಗೆ ಇಳಿದಿದ್ದು, ಇಬ್ಬರು ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪಿಎಸ್ಸೈ ಎಂ.ಬಿ. ಬಿರಾದಾರ, ಗ್ರಾಮ ಲೆಕ್ಕಾಧಿಕಾರಿ ವಿ. ಸುನೀಲ್ ಚವ್ಹಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುದ್ದೆಬಿಹಾಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ಸುದ್ದಿಗಳು…
ನಾಲ್ಕು ಪ್ರಕರಣಗಳ ಆರೋಪಿಯನ್ನು ನಡು ರಸ್ತೆಯಲ್ಲೇ ಭೀಕರವಾಗಿ ಹತ್ಯೆ ನಡೆಸಿದ ದುಷ್ಕರ್ಮಿಗಳು
ಅಶ್ಲೀಲ ಚಿತ್ರ ವಿಚಾರ: ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ನಡುವೆ ಅವರ ಮನೆಯಲ್ಲಿಯೇ ಜಟಾಪಟಿ
ಏರ್ಟೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ | ನಾಳೆಯಿಂದ ಹೊಸ ಬದಲಾವಣೆ
ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೇಲೆ ಕಾರಿನಲ್ಲೇ ಅತ್ಯಾಚಾರ | ಬಾಡಿಗೆ ಮನೆ ಮಾಲಿಕನಿಂದ ಕೃತ್ಯ
ಪ್ರವಾಹದ ಬೆನ್ನಲ್ಲೇ ಮನೆಯ ತಾರಸಿ, ರಸ್ತೆಯಲ್ಲಿ ಪತ್ತೆಯಾಗ್ತಿವೆ ಮೊಸಳೆಗಳು!