ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ | ತಾಯಿ, ಮಗಳು ದಾರುಣ ಸಾವು
ಗದಗ: ತಾಯಿಯೋರ್ವಳು ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದ ಬಳಿಯಲ್ಲಿ ನಡೆದಿದ್ದು, ಪರಿಣಾಮವಾಗಿ 8 ವರ್ಷದ ಮಗು ಹಾಗೂ ತಾಯಿ ಸಾವನ್ನಪ್ಪಿದ್ದು, ಇನ್ನಿಬ್ಬರು ಮಕ್ಕಳು ಸುರಕ್ಷಿತವಾಗಿದ್ದಾರೆ.
ತಾಯಿ ಉಮಾದೇವಿ ತನ್ನ ಮೂವರು ಮಕ್ಕಳನ್ನು ಮಲಪ್ರಭಾ ನದಿಯ ಬಳಿಗೆ ಕರೆತಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದಾಳೆ. ಈ ವೇಳೆ ತಾಯಿಯೊಂದಿಗೆ 8 ವರ್ಷದ ಬಾಲಕಿ ನದಿಗೆ ಹಾರಿದ್ದಾಳೆ. ಆದರೆ ಇನ್ನಿಬ್ಬರು ಮಕ್ಕಳು ನದಿಗೆ ಹಾರಲು ಭಯಗೊಂಡು ಅಮ್ಮನಿಂದ ತಪ್ಪಿಸಿಕೊಂಡಿದ್ದು, ಇದರಿಂದಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಮಾಹಿತಿಗಳ ಪ್ರಕಾರ ಈ ಕುಟುಂಬವು ಕೊರೊನಾದ ಬಳಿಕ ತೀವ್ರವಾಗಿ ಸಂಕಷ್ಟಕ್ಕೀಡಾಗಿತ್ತು. ಉಮಾದೇವಿ ಅವರ ಪತಿ ಮೂರು ತಿಂಗಳ ಹಿಂದೆ ಕೊರೊನಾಕ್ಕೆ ಬಲಿಯಾಗಿದ್ದರು. ಇದಾದ ಬಳಿಕ ಅವರು ತೀವ್ರವಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ಆರ್ಥಿಕ ಸಂಕಷ್ಟವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
“ದೇವಸ್ಥಾನ ತೆರವಿಗೆ ಆದೇಶ ನೀಡಿದ್ದು ಜಿಲ್ಲಾಧಿಕಾರಿ, ವರ್ಗಾವಣೆಯಾಗಿದ್ದು ತಹಶೀಲ್ದಾರ್!”
ಶಾಕಿಂಗ್ ನ್ಯೂಸ್: ಅಪರಿಚಿತ ತಂಡದಿಂದ ಬೀಡಿ ಬ್ರ್ಯಾಂಚ್ ಗೆ ಹೋಗುತ್ತಿದ್ದ ಬಾಲಕನ ಅಪಹರಣಕ್ಕೆ ಯತ್ನ
ಅತ್ಯಾಚಾರದಿಂದ ಬಾಲಕಿ ಗರ್ಭಿಣಿ: ತಂದೆಗೆ ವಿಷಯ ಹೇಳುತ್ತೇನೆ ಎಂದಿದ್ದಕ್ಕೆ ಯುವಕನಿಂದ ಘೋರ ಕೃತ್ಯ
ಚಿಕ್ಕಮಗಳೂರು: ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳನ್ನು ತಡೆದು ಸಂಘಪರಿವಾರದ ಸದಸ್ಯರಿಂದ ಹಲ್ಲೆ
ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಅಪರಿಚಿತ ವಾಹನ | ನರ್ಸಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಗೋಶಾಲೆ ನಿರ್ಮಾಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 98 ಎಕರೆ ಪ್ರದೇಶಕ್ಕೆ ಗುರುತು | ಸಚಿವ ಎಸ್.ಅಂಗಾರ
ಸೊಂಟಕ್ಕೆ ವೇಲ್ ಕಟ್ಟಿಕೊಂಡು ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು




























