ನಿದ್ದೆಯಿಂದ ಎಚ್ಚೆತ್ತು ನದಿಯ ಬದಿಗೆ ಹೋದ ಮಗುವಿನ ದುರಂತ ಸಾವು - Mahanayaka
8:06 AM Thursday 12 - December 2024

ನಿದ್ದೆಯಿಂದ ಎಚ್ಚೆತ್ತು ನದಿಯ ಬದಿಗೆ ಹೋದ ಮಗುವಿನ ದುರಂತ ಸಾವು

baindur udupi news
27/07/2021

ಬೈಂದೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ 2 ವರ್ಷ ವಯಸ್ಸಿನ ಮಗು ನಿದ್ದೆಯಿಂದ ಎಚ್ಚೆತ್ತು ನದಿಯ ಬಳಿಗೆ ಹೋಗಿದ್ದು, ಈ ವೇಳೆ ಆಯತಪ್ಪಿ ನದಿಗೆ ಬಿದ್ದು, ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಪ್ಪುಂದ ಗ್ರಾಮದ ಕರ್ಕಿಕಳಿ ಎಂಬಲ್ಲಿ ನಡೆದಿದೆ.

 

ಉಪ್ಪುಂದ ಗ್ರಾಮದ ಕರ್ಕಿಕಳಿ ಚೌಕಿಮನೆ ವಿಶ್ವನಾಥ ಖಾರ್ವಿ ಅವರ ಮಗ 2 ವರ್ಷ ವಯಸ್ಸಿನ ಸರ್ವದ ಮೃತಪಟ್ಟ ಮಗು ಎಂದು ತಿಳಿದು ಬಂದಿದೆ. ಸೋಮವಾರ ಮಧ್ಯಾಹ್ನ ಮನೆಯ ಕೋಣೆಯಲ್ಲಿ ಮಗುವನ್ನು ಮಲಗಿಸಿ ಉಪ್ಪುಂದ ಪೇಟೆಗೆ ಮನೆಯವರು ಹೋಗಿದ್ದು, ಈ ಮಧ್ಯೆ ಮಗುವಿಗೆ ನಿದ್ದೆಯಿಂದ ಎಚ್ಚರವಾಗಿದ್ದು, ಮಗು ಕೋಣೆಯಿಂದ ಹೊರಗೆ ಬಂದಿದೆ ಎನ್ನಲಾಗಿದೆ.

 

ಬಳಿಕ ಮನೆಯ ಸಮೀಪದಲ್ಲೇ ಹರಿಯುತ್ತಿರುವ ಎಡಮಾವಿನ ಹೊಳೆಯ ಬದಿಗೆ ನಡೆದುಕೊಂಡು ಹೋಗಿದೆ. ಈ ವೇಳೆ ಕಾಲು ಜಾರಿ ನದಿಗೆ ಬಿದ್ದು, ಮಗು ಸಾವನ್ನಪ್ಪಿದ್ದು, ಮಗುವಿನ ಮೃತದೇಹ ಉಪ್ಪುಂದ-ಕರ್ಕಿಕಳಿ ಬ್ರೇಕ್ ವಾಟರ್ ಸಮೀಪದಲ್ಲಿ ದೊರೆತಿದೆ. ಘಟನೆ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

 

ಇನ್ನಷ್ಟು ಸುದ್ದಿಗಳು…

ಬೆಳಗ್ಗೆ ಅಕ್ಕನ ಯೋಗದ ಭಂಗಿ, ಭಾವನಿಂದ ರಾತ್ರಿಯ ಭಂಗಿ | ಶಿಲ್ಪಾ ಶೆಟ್ಟಿಯ ತಂಗಿ ವಿರುದ್ಧ ಟ್ರೋಲ್

ಪತ್ನಿಯ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದ ಯುವಕನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಪತಿ!

ಅಶ್ಲೀಲ ಚಿತ್ರ ನಿರ್ಮಾಣ: ಮಧ್ಯಂತರ ಜಾಮೀನು ಕೋರಿದ ಬಾಲಿವುಡ್ ನ ಮತ್ತೋರ್ವಳು ನಟಿ

ಯಡಿಯೂರಪ್ಪ ಕಣ್ಣೀರು ನೋಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ರಾಜಾಹುಲಿ!

ಹೊಳೆದಾಟಿದ ಮೇಲೆ ಅಂಬಿಗನ ಹಂಗೇಕೆ? | ಸಿಎಂಗೆ ಕನಿಷ್ಠ ಗೌರವವನ್ನೂ ಕೊಡದೆ ಹೊರಗೆ ತಳ್ಳಲಾಗಿದೆ | ಜಿ.ಪರಮೇಶ್ವರ್

 

ಇತ್ತೀಚಿನ ಸುದ್ದಿ