ನಡು ರಸ್ತೆಯಲ್ಲಿ ಯುವತಿಯ ಕತ್ತು ಕೊಯ್ದು, ತಾನೂ ಕತ್ತು ಸೀಳಿಕೊಂಡ ಯುವಕ - Mahanayaka
10:13 PM Tuesday 16 - December 2025

ನಡು ರಸ್ತೆಯಲ್ಲಿ ಯುವತಿಯ ಕತ್ತು ಕೊಯ್ದು, ತಾನೂ ಕತ್ತು ಸೀಳಿಕೊಂಡ ಯುವಕ

udupi
31/08/2021

ಉಡುಪಿ: ಯುವಕನೋರ್ವ, ಯುವತಿಯನ್ನು ಅಡ್ಡಗಟ್ಟಿ ಆಕೆಯ ಕುತ್ತಿಗೆಗೆ ಚೂರಿಯಿಂದ ಇರಿದು ಬಳಿಕ ತಾನೂ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಕೂಡ ಗಂಭೀರವಾಗಿ ಗಾಯಗೊಂಡು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸಂತೆಕಟ್ಟೆಯ ಪೆಟ್ರೋಲ್ ಬಂಕ್ ಬಳಿಯಲ್ಲಿ ಹಾಡಹಗಲೇ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಯುವತಿ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಯುವಕ ಆಕೆಯನ್ನು ಅಡ್ಡಗಟ್ಟಿ ಕುತ್ತಿಗೆ ಸೀಳಿದ್ದು, ಬಳಿಕ ತನ್ನ ಕುತ್ತಿಗೆಯನ್ನೂ ಚೂರಿಯಿಂದ ಸೀಳಿಕೊಂಡಿದ್ದಾನೆ ಎನ್ನಲಾಗಿದೆ.

ಇಬ್ಬರಿಗೂ ತೀವ್ರವಾಗಿ ಗಾಯವಾಗಿದ್ದು, ಇಬ್ಬರನ್ನೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಡುಗಿಯು ಅಂಬಾಗಿಲು ಮೂಲದವರೆಂದು ತಿಳಿದು ಬಂದಿದೆ. ಯುವತಿ ದ್ವಿಚಕ್ರವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಡ್ಡಗಟ್ಟಿದ ಯುವಕ ಆಕೆಯ ಕುತ್ತಿಗೆ ಸೀಳಿದ್ದು ಬಳಿಕ ತಾನೂ ಕುತ್ತಿಗೆ ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ 7 ಬಾಲಕರಿಂದ ಸಾಮೂಹಿಕ ಅತ್ಯಾಚಾರ!

ಆಕ್ಸಿಜನ್ ದುರಂತದ ಸಂದರ್ಭದಲ್ಲಿ ನಾನು ಹುಚ್ಚನಂತೆ ಅಳ್ತಾ ಇದ್ದೆ: ರಮೇಶ್ ಕುಮಾರ್

ನಾಯಿ ಮೂತ್ರ ಮಾಡಿದ ವಿಚಾರ: ಕಾರ್ ನ ಮಾಲಿಕನಿಗೆ ನಾಯಿಯ ಮಾಲಿಕರಿಂದ ಹಿಗ್ಗಾಮುಗ್ಗಾ ಥಳಿತ!

ತಲಾಖ್ ನೀಡಿದ ಬಳಿಕವೂ ಪತ್ನಿಯ ಅಶ್ಲೀಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪತಿ!

ಪ್ರೇಯಸಿಯ ತಂದೆಯನ್ನೇ ಕೊಂದಿದ್ದವ ಮೈಸೂರು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಆರೋಪಿಗಳಲ್ಲಿ ಓರ್ವ!

ಇತ್ತೀಚಿನ ಸುದ್ದಿ