ನಾಗಲ್ಯಾಂಡ್: ನಾಯಿ ಮಾಂಸದ ಮೇಲಿನ ನಿಷೇಧ ರದ್ದು: ಪ್ರಾಣಿ ಪ್ರಿಯರಿಗೆ ನಿರಾಸೆ
ನಾಯಿ ಮಾಂಸ ಮಾರಾಟದ ಮೇಲಿನ ನಿಷೇಧವನ್ನು ಗೌಹಾಟಿ ಹೈಕೋರ್ಟ್ ತೆಗೆದು ಹಾಕಿದ್ದು, ಇದರಿಂದಾಗಿ ಪ್ರಾಣಿ ಪ್ರಿಯ ಕಾರ್ಯಕರ್ತರು ನಿರಾಶೆ ಹೊಂದಿದ್ದಾರೆ. ಇನ್ನೊಂದೆಡೆ ನಾಯಿ ಮಾಂಸ ಮಾರಾಟ ಮಾಡುವ ವ್ಯಾಪಾರಿಗಳು ಕೋರ್ಟ್ ನ ತೀರ್ಪನ್ನು ಶ್ಲಾಘಿಸಿದ್ದಾರೆ.
ಗೋಣಿ ಚೀಲಗಳಲ್ಲಿ ಕಟ್ಟಿದ ಸ್ಥಿತಿಯಲ್ಲಿರುವ ನಾಯಿಗಳ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ನಾಗಲ್ಯಾಂಡ್ ಸರ್ಕಾರವು 2020ರಲ್ಲಿ ನಾಯಿ ಮಾಂಸ ಮಾರಾಟವನ್ನು ನಿಷೇಧಿಸುವುದಾಗಿ ಘೋಷಿಸಿತ್ತು.
ಈ ಬಗ್ಗೆ ಕೊಹಿಮಾ ಮುನ್ಸಿಪಲ್ ಕೌನ್ಸಿಲ್ ಅಡಿಯಲ್ಲಿ ಪರವಾನಗಿ ಪಡೆದ ವ್ಯಾಪಾರಿಗಳು ನಾಯಿಗಳನ್ನು ಆಮದು ಮಾಡಿಕೊಳ್ಳಲು ಮತ್ತು ನಾಯಿ ಮಾಂಸವನ್ನು ಮಾರಾಟ ಮಾಡಲು ಕಾನೂನು ಆಧಾರ ಮತ್ತು ಬ್ಯಾಯ ವ್ಯಾಪ್ತಿ ಬಗ್ಗೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಸ್ಟಿಸ್ ಮಾರ್ಲಿ ವ್ಯಾಂಕನ್ ಅವರ ಏಕಪೀಠ ಜುಲೈ 4, 2020ರಂದು ನೀಡಲಾಗಿದ್ದ ನಿಷೇಧ ಆದೇಶವನ್ನು ರದ್ದುಗೊಳಿಸಿತು. ನಾಯಿ ಮಾಂಸದ ಸೇವನೆ ಆಧುನಿಕ ಕಾಲದಲ್ಲೂ ನಾಗಾಗಳ ನಡುವೆ ಸ್ವೀಕಾರಾರ್ಹ ಆಹಾರವಾಗಿದೆ, ಅರ್ಜಿದಾರರು ನಾಯಿಗಳನ್ನು ಸಾಗಿಸುವ ಮತ್ತು ನಾಯಿ ಮಾಂಸವನ್ನು ಮಾರಾಟ ಮಾಡುವ ಮೂಲಕ ಜೀವನೋಪಾಯ ಮಾಡಲು ಸಾಧ್ಯವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw