ಸ್ವಾಭಿಮಾನಿ ಬದುಕಿನ ಹಾದಿಯಲ್ಲಿ ನಾಗಮ್ಮ ಅಜ್ಜಿ

ಚಿಲುಕೂರು ಹೊಸಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ನಾಗಮ್ಮ, 75 ವರ್ಷಗಳ ವಯಸ್ಸಿನಲ್ಲೂ ದುಡಿಯುತ್ತಾ ಸ್ವಾಭಿಮಾನಿ ಬದುಕಿನ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾಳೆ.
60 ವರ್ಷಗಳಿಂದ ಸೊಪ್ಪು ಮತ್ತು ತರಕಾರಿಗಳನ್ನು ಮಾರಾಟ ಮಾಡುತ್ತಿರುವ ಇವರು, ಪ್ರತಿದಿನವೂ 60 ಕಿಲೋಮೀಟರ್ ಬಸ್ಸಿನಲ್ಲಿ ಪ್ರಯಾಣ ಮಾಡಿ ಬಂದು ಮಾರಾಟ ಮಾಡುತ್ತಾರೆ. ದಿನಕ್ಕೆ ಸುಮಾರು 500 ರೂಪಾಯಿ ಆದಾಯ ಮಾಡಿಕೊಳ್ಳುವ ನಾಗಮ್ಮ, ಈ ವಯಸ್ಸಿನಲ್ಲೂ ತಮ್ಮ ದುಡಿಮೆಯಿಂದ ಬದುಕು ಸಾಗಿಸುತ್ತಿದ್ದಾರೆ.
ಐದು ಮಂದಿ ಮಕ್ಕಳಿದ್ದರೂ, “ನೀನು ದುಡಿಯಬೇಡಮ್ಮಾ, ಮನೆಯಲ್ಲಿ ಇರು” ಎಂಬ ಮಕ್ಕಳ ಮಾತುಗಳನ್ನು ಕೇಳದೆ, ಅವರ ಅನುಕಂಪವನ್ನು ತಳ್ಳಿಹಾಕಿ, ತಾನು ದುಡಿದು ಜೀವನ ನಡೆಸುವ ನಿರ್ಧಾರವನ್ನು ಮಾಡಿಕೊಂಡಿದ್ದಾರೆ. 10 ಎಕರೆ ಜಮೀನಿದ್ದರೂ, ಆಸ್ತಿಯ ಆಸರೆಯಿಲ್ಲದೆ ತಮ್ಮ ಶ್ರಮದಿಂದ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಂಡಿದ್ದಾರೆ.
ನಾಗಮ್ಮನ ಈ ಹಂಬಲ, ಬದುಕಿನ ಹೋರಾಟ ಮತ್ತು ಆತ್ಮಗೌರವ ಅವಳಿಗೆ ಶಕ್ತಿ ತುಂಬಿದವು. ಸುಲಭದ ದಾರಿಗೆ ತಿರುಗದೆ, ತಾನು ಮಾಡಬಹುದಾದುದನ್ನು ಮಾಡಿ, ಆರ್ಥಿಕ ಸ್ವಾತಂತ್ರ್ಯವನ್ನು ಉಳಿಸಿಕೊಂಡು, ಸ್ವಂತ ಜೀವನ ಶೈಲಿಯನ್ನು ನಿರ್ವಹಿಸುತ್ತಿದ್ದಾಳೆ. ಇದು ಈಗಿನ ಯುವಪೀಳಿಗೆಗೆ ಸಹ ಸ್ಫೂರ್ತಿದಾಯಕ ಕಥೆಯಾಗುತ್ತದೆ.
ನಾಗಮ್ಮನವರು ದುಡಿಮೆಯ ಮೌಲ್ಯವನ್ನು ಅರಿತು, ಜೀವನವನ್ನು ಗೌರವದಿಂದ ನಡೆಸುವವರಿಗಾಗಿ ಪ್ರೇರಣೆಯಾಗಿರಬಹುದು. ಸ್ವಾಭಿಮಾನ ಮತ್ತು ದುಡಿಮೆ ಅವರ ಜೀವನದ ಮಂತ್ರ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: