ನಾಗರ ಪಂಚಮಿ: ಕೊವಿಡ್ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ - Mahanayaka
12:33 PM Friday 20 - September 2024

ನಾಗರ ಪಂಚಮಿ: ಕೊವಿಡ್ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ

nagrara panchami
13/08/2021

ಮಂಗಳೂರು: ಸಾಂಕ್ರಾಮಿಕ ರೋಗ ಕೊವಿಡ್ 19 ನಡುವೆಯೇ ಇಂದು ಮಂಗಳೂರಿನಾದ್ಯಂತ ಸರಳವಾಗಿ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಈ ಬಾರಿ ದೇವಸ್ಥಾನಗಳಲ್ಲಿ ಹಿಂದಿನ  ಜನ ಜಂಗುಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆ ಕಡಿಮೆ ಇತ್ತು.

ಇನ್ನೂ ಕೊವಿಡ್ ಹಿನ್ನೆಲೆಯಲ್ಲಿ ಜನಜಂಗುಳಿ ಸೇರದಂತೆ ಎಚ್ಚರವಹಿಸಿ ನಾಗರ ಪಂಚಮಿಯಿಂದ ದಸರಾವರೆಗಿನ ಎಲ್ಲ ಹಬ್ಬಗಳನ್ನು ಆಚರಿಸಬೇಕು, ಗ್ರಾಮೀಣ ಪ್ರದೇಶಗಳಲ್ಲಿ ನಾಗಬನಗಳಲ್ಲಿ ಹೆಚ್ಚು ಜನರು ಸೇರದಂತೆ ನಿಗಾವಹಿಸಲು ಪಿಡಿಒಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಾಗರ ಪಂಚಮಿ ಆಚರಣೆಯಲ್ಲಿ ಹಿಂದಿನ ಉತ್ಸಾಹ ಕಂಡು ಬರಲಿಲ್ಲ. ಜನರು ತಮ್ಮ ಮನೆಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪೂಜೆ ಸಲ್ಲಿಸುತ್ತಿರುವುದು ಕಂಡು ಬಂದಿದೆ.

ಮಂಗಳೂರಿನ ಇತಿಹಾಸ ಪ್ರಸಿದ್ಧ ಶರವು ದೇವಾಲಯದಲ್ಲಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ ನಾಗರ ಪಂಚಮಿ ಆಚರಿಸಲಾಯಿತು. ಭಕ್ತರ ಸಂಖ್ಯೆ ಬೆರಳೆಣಿಕೆಯಲ್ಲಿತ್ತು. ಇನ್ನಿತರ ದೇವಸ್ಥಾನಗಳಲ್ಲಿಯೂ ಭಕ್ತರ ಸಂಖ್ಯೆ ತೀರಾ ವಿರಳ ಇತ್ತು ಎಂದು ವರದಿಯಾಗಿದೆ.


Provided by

ಇನ್ನಷ್ಟು ಸುದ್ದಿಗಳು…

ತನಗೆ ಕಚ್ಚಿದ ಹಾವನ್ನು ಕಚ್ಚಿ ಕಚ್ಚಿಯೇ ಕೊಂದ ಭೂಪ:  ಅಷ್ಟಕ್ಕೂ ಅಲ್ಲಿ ನಡೆದ್ದದ್ದೇನು ಗೊತ್ತಾ?

ಪೇರಳೆ ಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ಏನಾಗುತ್ತೆ ಗೊತ್ತಾ?

ಆಹಾರದಲ್ಲಿ ವಿಷ ಬೆರೆಸಿ ತಂದೆ, ಅಣ್ಣ, ತಂಗಿಯನ್ನು ಕೊಂದ 15 ವರ್ಷದ ಬಾಲಕಿ

ಕಾಂಗ್ರೆಸ್ ನವರು ಬೇಕಿದ್ದರೆ ‘ನೆಹರೂ ಹುಕ್ಕಾ ಬಾರ್’ ತೆರೆಯಲಿ: ಸಿ.ಟಿ.ರವಿ ಹೇಳಿಕೆ

ಇಳೆಯದಳಪತಿ ನಟ ವಿಜಯ್-ಎಂ.ಎಸ್.ಧೋನಿ ಭೇಟಿ | ಕಾರಣ ಏನು ಗೊತ್ತಾ?

ಕಾಂಗ್ರೆಸ್ ನವರು ಕುಡುಕ ಸೂ*** ಮಕ್ಕಳು ಎಂದು ಹೇಳಿಕೆ ನೀಡಿದ ಸಚಿವ ಈಶ್ವರಪ್ಪ

ಇತ್ತೀಚಿನ ಸುದ್ದಿ