ನಾಗರಪಂಚಮಿ ಪೂಜೆಗೆ ಹೋಗುತ್ತಿದ್ದ ಮಹಿಳೆ ಬೈಕ್ ನಿಂದ ಬಿದ್ದು ದಾರುಣ ಸಾವು - Mahanayaka

ನಾಗರಪಂಚಮಿ ಪೂಜೆಗೆ ಹೋಗುತ್ತಿದ್ದ ಮಹಿಳೆ ಬೈಕ್ ನಿಂದ ಬಿದ್ದು ದಾರುಣ ಸಾವು

releted photo
02/08/2022

ಶಿರ್ವ: ನಾಗರಪಂಚಮಿ ಪ್ರಯುಕ್ತ ದೇವಸ್ಥಾನಕ್ಕೆ ತನ್ನ ತಮ್ಮನ ಬೈಕಿನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಬೈಕಿನಿಂದ ಬಿದ್ದು ಮೃತಪಟ್ಟ ಘಟನೆ ಆ.2ರಂದು ಬೆಳಗ್ಗೆ ಪಳ್ಳಿ- ಸೂಡಾ ರಸ್ತೆಯ ಮಕ್ಕೇರಿಬೈಲು ಎಂಬಲ್ಲಿ ನಡೆದಿದೆ.

ಕಣಂಜಾರು ಗುಂಡಳಿಕೆ ನಿವಾಸಿ ಪುಷ್ಪ(49) ಮೃತ ಮಹಿಳೆ. ಇವರು ತನ್ನ ತಮ್ಮ ರಾಜೇಶ್ ಬೈಕಿನಲ್ಲಿ ಮನೆಯಿಂದ ನಾಗರಪಂಚಮಿಯ ಪ್ರಯುಕ್ತ ಸೂಡಾ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ವೇಳೆ ಹಿಂಬದಿ ಸವಾರಳಾಗಿ ಕುಳಿತಿದ್ದ ಪುಷ್ಪಾಆಯತಪ್ಪಿ ಬೈಕ್ನಿಂದ ರಸ್ತೆಗೆ ಮಗುಚಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಅವರನ್ನು ಉಡುಪಿ ಅಜ್ಜರಕಾಡು ಸರಕಾರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಇವರು ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ