ಅಂತಾರಾಷ್ಟ್ರೀಯ ಓಟದ ಸ್ಪರ್ಧೆಯಲ್ಲಿ 3 ಚಿನ್ನ ಗೆದ್ದ ನಾಗೇಂದ್ರ ಅವರಿಗೆ ಅಕ್ಕ IAS ಅಕಾಡೆಮಿಯಲ್ಲಿ ಅಭಿನಂದನೆ
ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಓಟದ ಸ್ಪರ್ಧೆಯಲ್ಲಿ 100, 200, 400 ಮೀಟರ್ ಓಟಗಳಲ್ಲಿ ಗೋಲ್ಡ್ ಮೆಡಲ್ ಪಡೆದ ಮೈಸೂರಿನ ಪೊಲೀಸ್ ಇಲಾಖೆಯ ನಾಗೇಂದ್ರ ಅವರನ್ನು ಅಕ್ಕ IAS ಅಕಾಡೆಮಿ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಅಕ್ಕ IAS ಅಕಾಡೆಮಿಯ ಮುಖ್ಯಸ್ಥರಾದ ಡಾ.ಶಿವಕುಮಾರ್ ಅವರು ಮೂರು ಪದಕಗಳನ್ನೂ ನಾಗೇಂದ್ರ ಅವರಿಗೆ ಹಾಕುವ ಮೂಲಕ ತಮ್ಮ ಕಚೇರಿಯಲ್ಲಿ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಸಂದೀಪ್ ಆರ್.ಎಸ್. ಜೊತೆಗಿದ್ದರು.
ಅಂತಾರಾಷ್ಟ್ರೀಯ ಓಟದ ಸ್ಪರ್ಧೆಯಲ್ಲಿ ವಿಜೇತರಾದ ಸಂದರ್ಭ ಪ್ರಶಸ್ತಿ ಸ್ವೀಕರಿಸುತ್ತಿರುವುದು
ಅಕ್ಕ AIS ಅಕಾಡೆಮಿಯ ಅಭಿನಂದನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ನಾಗೇಂದ್ರ ಅವರು, ಡಾ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿರುವುದು ಬಹಳ ಸಂತೋಷವಾಗಿದೆ ಎಂದಿದ್ದಾರೆ.
ನಿಮ್ಮೆಲ್ಲರ ಶುಭ ಹಾರೈಕೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಾನು ಭಾರತೀಯ ವಿದ್ಯಾರ್ಥಿ ಸಂಘ(BVS) ಪ್ರೇರಣೆಯಿಂದ ಬೆಳೆಯುತ್ತಿರುವ ಕ್ರೀಡಾಪಟು ಎಂದು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka