ನಾಗ್ಪುರ ಹಿಂಸಾಚಾರ ಕೇಸ್: ಮುಖ್ಯ ಆರೋಪಿಯ ಮನೆ ಧ್ವಂಸ

ನಾಗ್ಪುರ ಹಿಂಸಾಚಾರದ ಮುಖ್ಯ ಆರೋಪಿ ಎಂದು ಗುರುತಿಸಲಾಗಿರುವ ಫಾಹಿಮ್ ಖಾನ್ ಅವರ ಮನೆಯನ್ನು ಧ್ವಂಸಗೊಳಿಸಲಾಗಿದೆ. ನಾಗಪುರ ಮುನ್ಸಿಪಲ್ ಕಾರ್ಪೊರೇಷನ್ ಜೆಸಿಬಿ ಬಳಸಿ ಈ ಮನೆಯನ್ನ ದ್ವಂಸ ಗೊಳಿಸಿದೆ. ಫಾಹಿಂ ಖಾನ್ ಅವರು ಮೈನಾರಿಟಿ ಡೆಮೊಕ್ರೆಟಿಕ್ ಪಾರ್ಟಿಯ ಮುಖ್ಯಸ್ಥರಾಗಿದ್ದಾರೆ ಮತ್ತು ಅವರ ವಿರುದ್ಧ ದೇಶದ್ರೋಹವೂ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ.
ಅಧಿಕಾರಿಗಳ ಪ್ರಕಾರ ಸಂಜಯ್ ಭಾಗ್ ಕಾಲೋನಿಯಲ್ಲಿ ನಿರ್ಮಿಸಿರುವ ಖಾನ್ ಅವರ ಎರಡು ಅಂತಸ್ತಿನ ಮನೆ ಕಾನೂನು ಬಾಹಿರವಾಗಿದೆ. ಈ ಮನೆಯು ಖಾನ್ ಅವರ ತಾಯಿಯ ಹೆಸರಲ್ಲಿದೆ ಮತ್ತು ಲೀಸ್ ಗೆ ಪಡೆದುಕೊಳ್ಳಲಾಗಿದ್ದ ಭೂಮಿಯಲ್ಲಿ ಈ ಮನೆಯನ್ನು ಕಟ್ಟಲಾಗಿದ್ದು ಅದರ ಅವಧಿ 2020ಕ್ಕೆ ಮುಗಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj