ಹೊಟೇಲ್ ನ ಮೆನು ನೋಡಿ ಬಿದ್ದು ಬಿದ್ದು ನಕ್ಕ ಜನ: ಅಷ್ಟಕ್ಕೂ ಅಲ್ಲಿ ನಡೆದದ್ದೇನು? - Mahanayaka
11:40 PM Sunday 22 - December 2024

ಹೊಟೇಲ್ ನ ಮೆನು ನೋಡಿ ಬಿದ್ದು ಬಿದ್ದು ನಕ್ಕ ಜನ: ಅಷ್ಟಕ್ಕೂ ಅಲ್ಲಿ ನಡೆದದ್ದೇನು?

naidus menu
02/05/2022

ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೆಲವು ಅಂಗಡಿಗಳ ಬೋರ್ಡ್ ಕಂಡರೆ, ಇದೇನು ಕನ್ನಡವೋ ಅಥವಾ ಯಾವ ಭಾಷೆ  ಅನ್ನೋ ಅನುಮಾನ ಕಾಡುವುದು ಸಹಜ. ಇಂತಹ ಹಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರನ್ನು ನಗೆಗಡಲಲ್ಲಿ ತೇಲಿಸುತ್ತದೆ.

ಕೊವಿಡ್ ಕಾಲದಲ್ಲಿ ಇಂತಹ ಸಾಕಷ್ಟು ಬೋರ್ಡ್ ಗಳು ನಗೆ ಉಕ್ಕಿಸಿದ್ದು, ನೀವೂ ನೋಡಿದ್ದೀರಿ. ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ಹರಿದಾಡುತ್ತಿದ್ದು, ನೆಟ್ಟಿಗರು ಈ ಫೋಟೋವನ್ನು ಕಂಡು ಬಿದ್ದು ಬಿದ್ದು ನಗುವಂತಾಗಿದೆ.

ಸಾಮಾನ್ಯವಾಗಿ ಹೊರ ರಾಜ್ಯಗಳ ವ್ಯಾಪಾರಿಗಳು ಕನ್ನಡದಲ್ಲಿ ಬೋರ್ಡ್ ಹಾಕುವುದು ಫನ್ನಿಯಾಗಿರುತ್ತದೆ. ಇಲ್ಲೊಬ್ಬರು ಕನ್ನಡ ಬಾರದವರು ಇಂಗ್ಲಿಷ್ ನಿಂದ ಕನ್ನಡಕ್ಕೆ ನೇರವಾಗಿ ಟ್ರಾನ್ಸ್ ಲೇಟ್ ಮಾಡಿ, ಊಟದ ಮೆನು ಹಾಕಿದ್ದಾರೆ.  ಈ ಮೆನು ಕಂಡರೆ ಕ್ಷಣ ಕಾಲ ನೀವು ದಂಗಾಗಬಹುದು. ಆದರೆ ಇಂಗ್ಲಿಷ್ ನಲ್ಲಿ ಓದಿದ ಬಳಿಕ ನೀವು ಬಿದ್ದು ಬಿದ್ದು ನಗುವುದು ಖಂಡಿತಾ.

ಇದು ಬೆಂಗಳೂರಿನ ನಾಯ್ಡು ಎಂಬ ನಾನ್ ವೆಜ್ ಹೊಟೇಲ್ ನ ಮೆನುವಾಗಿದೆ. ನಾಯ್ಡು ಹೊಟೇಲ್ ನ ಸ್ಪೆಷೆಲ್ ಎಂದು ಗ್ರಾಹಕರಿಗೆ ತೋರಿಸಲು ಪ್ರತಿ ಡಿಶ್ ನಲ್ಲಿಯೂ ನಾಯ್ಡು ಎನ್ನುವ ಹೆಸರನ್ನು ಬಳಸಲಾಗಿದೆ.

ಈ ಮೆನುವಲ್ಲಿ ಇಂಗ್ಲಿಷ್ ನಲ್ಲಿ ನಾಯ್ಡು ನೂಡಲ್ಸ್, ನಾಯ್ಡು ಪ್ರೈಡ್ ರೈಸ್, ನಾಯ್ಡು ಮಂಚೂರಿ, ನಾಯ್ಡು ಕಬಾಬ್ ಎಂದು ಬರೆಯಲಾಗಿದೆ. ಆದರೆ ಇದನ್ನೇ ಕನ್ನಡದಲ್ಲಿ ಬರೆಯುವ ವೇಳೆ ಟ್ರಾನ್ಸ್ ಲೇಷನ್ ಮಾಡಲಾಗಿದ್ದು, ನಾಯ್ಡು ಎನ್ನುವ ಶಬ್ದ ನಾಯಿದು ಎಂದಾಗಿದ್ದು,  ಕನ್ನಡದಲ್ಲಿ ಈ ರೀತಿಯಾಗಿ ಬರೆಯಲಾಗಿದೆ: ನಾಯಿದು ನೂಡಲ್ಸ, ನಾಯಿದು ಪ್ರೈಡ್ ರೈಸ, ನಾಯಿದು ಮಂಚೂರಿ, ನಾಯಿದು ಕಬಾಬ್ ಎಂದು ಬರೆಯಲಾಗಿದೆ. ಈ ಫೋಟೋ ಕಂಡ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ, ಬಿಟ್ಟಿ ಮನೋರಂಜನೆ ಪಡೆದುಕೊಳ್ಳುವಂತಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ಬಿ.ಎಲ್.ಸಂತೋಷ್ ಹೇಳಿಕೆ: ಹಾಲಿ ಶಾಸಕರಿಗೂ ಭೀತಿ!

ಶಾವರ್ಮಾ ಸೇವಿಸಿ 16 ವರ್ಷದ ಬಾಲಕಿ ಸಾವು: 36 ಮಂದಿ ಅಸ್ವಸ್ಥ

ಆ್ಯಸಿಡ್ ದಾಳಿ ಆರೋಪಿ ನಾಗೇಶ್ ನ ಬೈಕ್ ಪತ್ತೆ!

ಕುಟುಂಬ ರಾಜಕಾರಣವನ್ನು ಏಡ್ಸ್ ಗೆ ಹೋಲಿಸಿದ ಯತ್ನಾಳ್!

ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಶಾಕಿಂಗ್ ನ್ಯೂಸ್!

ಇತ್ತೀಚಿನ ಸುದ್ದಿ