ನಿಲ್ಲಿಸಿದ್ದ ಬೈಕ್ ಕಳ್ಳತನ: ನಕಲಿ ಕೀ ಬಳಸಿ ಮನೆಯ ಬಾಗಿಲು ತೆರೆದು ಲಕ್ಷಾಂತರ ರೂ., ಚಿನ್ನಾಭರಣ ಕಳವು
ಕುಂದಾಪುರ: ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಯಡ್ತರೆ ಗ್ರಾಮದ 32 ವರ್ಷದ ಪ್ರವೀಣ ಬೈಕ್ ಕಳೆದುಕೊಂಡ ವ್ಯಕ್ತಿ. ಇವರ ತಂದೆ ಅಸೌಖ್ಯದಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಹೀಗಾಗಿ ಆಸ್ಪತ್ರೆಗೆ ಹೋಗುವ ವೇಳೆ ತ್ರಾಸಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನ ಬಳಿ ಬೈಕ್ ನಿಲ್ಲಿಸಿ, ಬೈಸ್ ನಲ್ಲಿ ಹೋಗಿದ್ದರು.
ಮರುದಿನ ಬಂದು ನೋಡುವಾಗ ಬೈಕ್ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಬೈಕ್ ಮೌಲ್ಯ 35 ಸಾವಿರ ಆಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಕೀ ಬಳಸಿ ಬಾಗಿಲು ತೆರೆದು ಲಕ್ಷಾಂತರ ರೂ, ಚಿನ್ನಾಭರಣ ಕಳವು
ಕಾಪು: ನಕಲಿ ಕೀ ಬಳಸಿ ಮನೆಯ ಬಾಗಿಲು ತೆರೆದು ಒಳಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರೆ ಉಪಕರಣ ಕಳವು ಮಾಡಿರುವ ಘಟನೆ ಕಾಪು ತಾಲೂಕಿನ ಮೂಳುರು ಗ್ರಾಮದ ಶ್ರೀ ಸಾಯಿ ವಾಚ೯ರ್ ಪ್ಲಾಟ್ ನಲ್ಲಿ ಆ.10ರಂದು ಬೆಳಕಿಗೆ ಬಂದಿದೆ.
ಮೂಳುರು ಗ್ರಾಮದ ಶ್ರೀ ಸಾಯಿ ವಾಚ೯ರ್ ಪ್ಲಾಟ್ ನಿವಾಸಿ ಆರ್ಜ್ಯೂ ಸರ್ಪರಾಜ್ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಆ.8ರಂದು ರಾತ್ರಿ 8:30ಕ್ಕೆ ಸುಮಾರಿಗೆ ಮಗನೊಂದಿಗೆ ಅವರ ಉಡುಪಿಯ ಕಿನ್ನಿಮೂಲ್ಕಿಯ ತನ್ನ ತಂಗಿ ಮನೆಗೆ ಹೋಗಿದ್ದರು.
ಆಭರಣಗಳನ್ನು ಕಪಾಟಿನಲ್ಲಿಟ್ಟು ಬೀಗ ಹಾಕಿ ಹೋಗಿದ್ದರು. ಆ.10ರಂದು ಬೆಳಿಗ್ಗೆ ಮನೆಗೆ ಬಂದು ಕಪಾಟನ್ನು ತೆರೆದು ನೋಡಿದಾಗ ಆಭರಣ ಕಳವಾಗಿರುವುದು ಗೊತ್ತಾಗಿದೆ.
12 ಗ್ರಾಂ ತೂಕದ ಕರಿಮಣಿ ಸರ, 12 ಗ್ರಾಂ ತೂಕದ ಬ್ರಾಸ್ ಲೈಟ್, 8 ಗ್ರಾಂ ತೂಕದ ಬ್ರಾಸ್ ಲೈಟ್, 12 ಗ್ರಾಂ ತೂಕದ 6 ಚಿನ್ನದ ಉಂಗುರ, ಸ್ಮಾಟ೯ ವಾಚ್, ಡ್ರಿಲ್ಲಿಂಗ್ ಮಿಷಿನ್, ಐರನ್ ಬಾಕ್ಸ್ ಸಹಿತ 1.98ಲಕ್ಷ ರೂ ಮೌಲ್ಯದ ಸೊತ್ತುಗಳು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka