ನಾಳೆ ಕರ್ನಾಟಕ ಬಂದ್ ಗೆ ಮುಸ್ಲಿಂ ಸಂಘಟನೆ ಕರೆ
ಬೆಂಗಳೂರು: ಹಿಜಾಬ್ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿ ನೀಡಿದ್ದ ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಹೊರ ಹಾಕಿರುವ ಅಮೀರ್-ಇ-ಶರಿಯತ್ ಮಾ. 17ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದೆ.
ತ್ರಿ ಸದಸ್ಯ ನ್ಯಾಯಪೀಠವೂ , ಫೆ. 5ರಂದು ಹೊರಡಿಸಿದ್ದ ಸರ್ಕಾರದ ಏಕರೂಪ ಸಮವಸ್ತ್ರ ಕಡ್ಡಾಯ ಆದೇಶವನ್ನು ಎತ್ತಿ ಹಿಡಿದಿದ್ದು, ಕಾನೂನುಬದ್ಧವಾಗಿದೆ ಎಂದು ಒಟ್ಟು 129 ಪುಟಗಳ ತೀರ್ಪು ಪ್ರಕಟಿಸಿತ್ತು.
ಅಮೀರ್-ಇ-ಶರಿಯತ್ ಮುಖಂಡ ಮೌಲಾನಾ ಸಗೀರ್ ಅಹಮದ್ ಅವರು, ಹೈಕೋರ್ಟ್ ಕೋರ್ಟ್ ತೀರ್ಪು ನಿರಾಶಾದಾಯಕವಾಗಿದ್ದು, ನಾಳೆ ಶಾಂತಿಯುತವಾಗಿ ಬಂದ್ ನಡೆಸಬೇಕು ಎಂದು ಕರೆ ನೀಡಿದ್ದಾರೆ. ಈ ಸಂದರ್ಭ ಬಲವಂತದ ಬಂದ್ ಅಥವಾ ಜಾಥಾ , ಮೆರವಣಿಗೆ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಫಾಲ್ಸ್ ನಲ್ಲಿ ಮುಳುಗಿ ಆರೆಸ್ಸೆಸ್ ಕಾರ್ಯಕರ್ತ ಸಾವು
ಹೋಳಿ ಹಬ್ಬದ ನಂತರ ಹಿಜಾಬ್ ಭವಿಷ್ಯ: ಸುಪ್ರೀಂ ಕೋರ್ಟ್
ಬೇಸಿಗೆಯಲ್ಲಿ ಕಬ್ಬಿನ ಹಾಲು ಸೇವಿಸಿ, ಈ ಎಲ್ಲ ಆರೋಗ್ಯ ಪ್ರಯೋಜನ ಪಡೆಯಿರಿ
ಫೇಸ್ ಬುಕ್, ಟ್ವಿಟ್ಟರ್ ಸಾಮಾಜಿಕ ಜಾಲತಾಣಗಳ ಬಗ್ಗೆ ಸೋನಿಯಾ ಗಾಂಧಿ ಗಂಭೀರ ಆರೋಪ
ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿರಾಕರಣೆ