ನಳಿನ್ ಕುಮಾರ್ ಕಟೀಲ್ ಆಡಿಯೋ ಸೋರಿಕೆ ಮಾಡಿದ್ದು ಇವರಂತೆ!
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರುವ ಆಡಿಯೋ ವೈರಲ್, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ ನಡುವೆ ಬಿಎಸ್ ವೈ ವಿರೋಧಿ ಬಣಕ್ಕೆ ಆಡಿಯೋ ವೈರಲ್ ಹಿನ್ನಡೆ ಸೃಷ್ಟಿಸಿದೆ.
ನಳಿನ್ ಕುಮಾರ್ ಕಟೀಲ್ ಆಡಿಯೋ ವೈರಲ್ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ, ಈ ಆಡಿಯೋ ಮಾಡಿದ್ದು ಯಾರು ಎನ್ನುವ ವಿಚಾರಕ್ಕೆ ನಳಿನ್ ಕುಮಾರ್ ಕಟೀಲ್ ಬಣ ಇದೀಗ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಯಡಿಯೂರಪ್ಪನವರನ್ನು ಕಟುವಾಗಿ ವಿರೋಧಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಆಡಿಯೋ ವೈರಲ್ ಹಿಂದೆ ಬಿಎಸ್ ವೈ ಪುತ್ರ ವಿಜಯೇಂದ್ರ ಅವರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ವಿಜಯೇಂದ್ರ ಅವರಿಗೆ ಆಪ್ತರಾಗಿರುವವರ ಸಿಸಿಬಿಯಯಲ್ಲಿದ್ದಾರೆ. ಹೀಗಾಗಿ ಎಲ್ಲವೂ ಸೋರಿಕೆಯಾಗುತ್ತಿದೆ ಎಂದು ವಿಜಯಪುರದಲ್ಲಿ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಅಪರಾಧ ಕೃತ್ಯವಾಗಿದೆ. ವ್ಯಕ್ತಗತ ಗೌಪ್ಯತೆಗೆ ರಾಜ್ಯದಲ್ಲಿ ಅವಕಾಶವೇ ಇಲ್ಲದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಏನು ಬೇಕಾದರೂ ನಡೆಯುತ್ತಿದೆ. ಸಿಸಿಬಿಯವರು ಏನು ಮಾಡುತ್ತಿದ್ದಾರೆ? ರಾಜ್ಯದ ಡ್ರಗ್ಸ್ ಕೇಸ್, ಯುವರಾಜ್ ಸ್ವಾಮಿ ಪ್ರಕರಣದ ತನಿಖೆಯನ್ನೂ ಕೂಡ ಅರ್ಧಕ್ಕೆ ನಿಲ್ಲಿಸಿ ಬಿಟ್ಟಿದ್ದಾರೆ. ಸಿಸಿಬಿಯ ಹಿರಿಯ ಅಧಿಕಾರಿಗಳು ಕಣ್ಣುಬಿಟ್ಟು ನೋಡಬೇಕು ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಟೀಲ್ ಯಾಕೆ ಇನ್ನೂ ದೂರು ನೀಡಿಲ್ಲ?
ಇತ್ತೀಷೆಗಷ್ಟೇ ಖಾಸಗಿ ಚಾನೆಲ್ ವೊಂದ ಆಡಿಯೋವನ್ನು ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನ್ ಕುಮಾರ್ ಕಟೀಲ್ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ, ಈ ಬಾರಿ ತಮ್ಮದೇ ಧ್ವನಿಯನ್ನು ಹೋಲುವ ಆಡಿಯೋವೊಂದು ವೈರಲ್ ಆದರೂ, ನಳಿನ್ ಕುಮಾರ್ ಕಟೀಲ್ ದೂರು ನೀಡಲು ಯಾಕೆ ಇನ್ನೂ ಮುಂದಾಗಿಲ್ಲ? ಎನ್ನು ಪ್ರಶ್ನೆಗಳು ಕೇಳಿ ಬಂದಿವೆ.
ನಳಿನ್ ಕುಮಾರ್ ಕಟೀಲ್ ಅವರು, ಈ ಆಡಿಯೋ ನನ್ನದಲ್ಲ, ಇದೊಂದು ಫೇಕ್ ಆಡಿಯೋ ಎಂದು ಹೇಳಿದ್ದಾರೆ. ಆದರೆ, ಈ ಬಗ್ಗೆ ಯಾಕೆ ಇನ್ನೂ ಕೂಡ ದೂರು ನೀಡಿಲ್ಲ ಎನ್ನುವುದು ಇದೀಗ ರಾಜ್ಯದಾದ್ಯಂತ ಚರ್ಚೆಯಾಗುತ್ತಿರುವ ನಡುವೆಯೇ, ಯತ್ನಾಳ್ ಅವರು, ಕಟೀಲ್ ಮಾತನಾಡಿರುವ ಆಡಿಯೋ ಸೋರಿಕೆ ಮಾಡಲಾಗಿದೆ. ಸಿಸಿಬಿಯನ್ನು ಬಳಸಿಕೊಂಡು ಬಿಎಸ್ ವೈ ಪುತ್ರ ಈ ಆಡಿಯೋ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಿದ್ದರೆ, ಈ ಆಡಿಯೋ ಅಸಲಿ ಆಡಿಯೋವೇ? ಎನ್ನುವ ಪ್ರಶ್ನೆಗಳು ಇದೀಗ ಕೇಳಿ ಬಂದಿದೆ.
ಇನ್ನಷ್ಟು ಸುದ್ದಿಗಳು…
ಅಶ್ಲೀಲ ಚಿತ್ರ ಪ್ರಸಾರ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್
ಬಿಜೆಪಿ ಹೈಕಮಾಂಡ್ ಅಂಗಳ ಸೇರಿತೇ “ಯಾರಿಗೂ ಹೇಳ್ಬೇಡಿ!” ಆಡಿಯೋ ?
ಪತಿವ್ರತೆ ಎಂದು ಸಾಬೀತು ಪಡಿಸಲು ಮಹಿಳೆಯನ್ನು ಕುದಿಯುವ ಎಣ್ಣೆಗೆ ಕೈ ಹಾಕಿಸಿದರು!
“ನಾಯಕತ್ವ ಬದಲಾವಣೆ ಸಂಚಿನ ಸೂತ್ರದಾರನೇ ನಳಿನ್ ಕುಮಾರ್ ಕಟೀಲ್!”
ಸೇತುವೆ ಇಲ್ಲ: ತೋಡಿನಲ್ಲಿ ವೃದ್ಧೆಯನ್ನು ಸ್ಟ್ರೆಚರ್ ಮೂಲಕ ಸಾಗಿಸುವ ದುಸ್ಥಿತಿ