ನಾಳೆಯೇ ಬಿಜೆಪಿಗೆ ರಾಜೀನಾಮೆ ನೀಡುತ್ತಾರಾ ಆನಂದ್ ಸಿಂಗ್? | ಬೊಮ್ಮಾಯಿ ಹಚ್ಚಿದ ಮುಲಾಮು ಫಲಕೊಡಲಿಲ್ಲವೇ?
ಬೆಂಗಳೂರು: ನಿರೀಕ್ಷಿತ ಖಾತೆ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಕ್ಕೊಳಗಾಗಿರುವ ಸಚಿವ ಆನಂದ್ ಸಿಂಗ್ ತಮ್ಮ ಸಚಿವ ಸ್ಥಾನ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳು ಕಂಡು ಬರುತ್ತಿದೆ ಎಂದು ಹೇಳಲಾಗುತ್ತಿದ್ದು, ನಿರೀಕ್ಷಿತ ಸ್ಥಾನ ಮಾನದ ಭರವಸೆಗಳು ಇನ್ನೂ ಪಕ್ಷದಿಂದ ದೊರೆಯದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಯಾವುದೇ ಸಮಯದಲ್ಲಿ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ ಆನಂದ್ ಸಿಂಗ್, ಅಬಿ ಪಿಕ್ಚರ್ ಬಾಕಿ ಹೈ ಎಂದು ಪ್ರತಿಕ್ರಿಯಿಸಿದ್ದರು. ಈ ಹೇಳಿಕೆ ಇದೀಗ ಬಿಜೆಪಿಯೊಳಗೆ ತಳಮಳ ಸೃಷ್ಟಿಸಿದೆ. ಖಾತೆ ಬದಲಾವಣೆ ವಿಚಾರವಾಗಿ ಸಕರಾತ್ಮಕ ಆಶ್ವಾಸನೆ ದೊರಕಿದರೆ, ಬಿಜೆಪಿಯಲ್ಲಿ ಮುಂದುವರಿಯಲು ಆನಂದ್ ಸಿಂಗ್ ಮುಂದಾಗುತ್ತಾರೆ, ಇಲ್ಲವಾದರೆ, ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗಿದೆ.
ನನಗೆ ಬಿಜೆಪಿಯಿಂದ ಸಾಕಷ್ಟು ಅವಮಾನವಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದೆ. ಆದರೆ ನನ್ನ ಸ್ಥಾನಮಾನಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ನನಗೆ ಇದರಿಂದ ಮನಸ್ಸಿಗೆ ನೋವಾಗಿದ್ದು, ಪಕ್ಷವನ್ನೇ ಬಿಡುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ನನಗೆ ಎಲ್ಲ ರೀತಿಯಲ್ಲೂ ಸಹಕಾರ ಕೊಟ್ಟಿದ್ದರು. ಆದರೆ ಈಗ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾಗಿದ್ದು, ಸಂಪುಟ ರಚನೆ ನಂತರ ನಮ್ಮನ್ನು ಕೇವಲವಾಗಿ ನೋಡಲಾಗುತ್ತಿದೆ. ಹೀಗಾಗಿ ನನಗೆ ರಾಜಕಾರಣದ ಸಹವಾಸವೇ ಬೇಡ. ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಆನಂದ್ ಸಿಂಗ್ ಹೇಳಿದ್ದಾರೆನ್ನಲಾಗುತ್ತಿದೆ.
ಆನಂದ್ ಸಿಂಗ್ ಬಿಜೆಪಿಗೆ ರಾಜೀನಾಮೆ ನೀಡುವುದರಿಂದ ಬಿಜೆಪಿ ಸರ್ಕಾರಕ್ಕೆ ಯಾವುದೇ ಹಾನಿಯಾಗುದಿಲ್ಲ. ಆದರೆ, ಬಿಜೆಪಿ ಬೇರೆ ಪಕ್ಷದವರನ್ನು ನಂಬಿಸಿ, ಪಕ್ಷಕ್ಕೆ ಕರೆತಂದು ಅವಮಾನಿಸಿದೆ ಎನ್ನುವ ಕಳಂಕ ಪಕ್ಷಕ್ಕೆ ಅಂಟಿಕೊಳ್ಳುತ್ತದೆ. ಹೀಗಾಗಿ ಬಿಜೆಪಿ ನಾಯಕರು ಆನಂದ್ ಸಿಂಗ್ ಅವರನ್ನು ಸಮಾಧಾನಪಡಿಸಲು ಮುಂದಾಗುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಹಚ್ಚಿದ ಮುಲಾಮು, ಆನಂದ್ ಸಿಂಗ್ ಗಾಯವನ್ನು ಈವರೆಗೆ ಗುಣಪಡಿಸಿಲ್ಲ. ದಿನದಿಂದ ದಿನಕ್ಕೆ ಗಾಯ ಉಲ್ಬಣವಾಗುತ್ತಲೇ ಹೋಗುತ್ತಿದೆ. ಇನ್ನೊಂದು ಮಾಹಿತಿಯ ಪ್ರಕಾರ ನಾಳೆಯೇ ಆನಂದ್ ಸಿಂಗ್ ಬಿಜೆಪಿಗೆ ರಾಜೀನಾಮೆ ನೀಡಿದರೂ ನೀಡಬಹುದು ಎನ್ನಲಾಗುತ್ತಿದೆ.
ಇನ್ನಷ್ಟು ಸುದ್ದಿಗಳು…
ವೀರ ಸಾರ್ವರ್ಕರ್ ರಥಯಾತ್ರೆ ನಡೆಸುತ್ತೇವೆ ತಾಕತ್ ಇದ್ದರೆ ತಡೆಯಿರಿ | ಎಸ್ ಡಿಪಿಐಗೆ ಹಿಂದುತ್ವ ಸಂಘಟನೆಗಳ ಸವಾಲು
ಧ್ವಜಾರೋಹಣದ ವೇಳೆ ರಾಷ್ಟ್ರಗೀತೆ ಮರೆತ ಸಂಸದ, ಕೊನೆಗೆ ಮಾಡಿದ್ದೇನು? | ವಿಡಿಯೋ ವೈರಲ್
ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸದೊಳಗೆ ಮೊಬೈಲ್ ಬಳಕೆ ನಿಷೇಧ | ಕಾರಣ ಏನು ಗೊತ್ತಾ?
ಅಪ್ರಾಪ್ತ ವಯಸ್ಸಿನ ಬಾಲಕನಿಂದ 3 ತಿಂಗಳ ಮಗುವಿನ ಮೇಲೆ ಅತ್ಯಾಚಾರ!
ಸ್ವಾತಂತ್ರ್ಯ ರಥ ತಡೆದು ಪ್ರತಿಭಟಿಸಿದ ಎಸ್ ಡಿಪಿಐ ಕಾರ್ಯಕರ್ತರು | ಸಾರ್ವರ್ಕರ್ ಫೋಟೋಗೆ ಬಳಸಿದ್ದಕ್ಕೆ ವಿರೋಧ
ಸಿದ್ದರಾಮಯ್ಯನವರ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂದ ಸಿ.ಟಿ.ರವಿ




























