ನಾಳೆಯಿಂದ ಸಾಲು ಸಾಲು ರಜೆ: ಬ್ಯಾಂಕ್ ವ್ಯವಹಾರ ಇಂದೇ ಮುಗಿಸಿಕೊಳ್ಳಿ - Mahanayaka
10:12 PM Tuesday 4 - February 2025

ನಾಳೆಯಿಂದ ಸಾಲು ಸಾಲು ರಜೆ: ಬ್ಯಾಂಕ್ ವ್ಯವಹಾರ ಇಂದೇ ಮುಗಿಸಿಕೊಳ್ಳಿ

bank
09/04/2021

ಬೆಂಗಳೂರು: ವಿವಿಧ ಕಾರಣಗಳಿಗಾಗಿ ನಾಳೆ(ಏಪ್ರಿಲ್ 10)ಯಿಂದ ಸಾಲು ಸಾಲು ರಜೆಗಳು ಬರಲಿದ್ದು, ಹೀಗಾಗಿ ಸಾರ್ವಜನಿಕರು ತಮ್ಮ ಕೆಲಸಗಳನ್ನು ಇಂದೇ ಮುಗಿಸಿಕೊಂಡರೆ ಉತ್ತಮವಾಗಿದೆ.

ಬ್ಯಾಂಕ್, ಕಚೇರಿ ವ್ಯವಹಾರಗಳಿದ್ದರೆ ಸಾರ್ವಜನಿಕರು ಇಂದೇ ಮುಗಿಸಿಕೊಳ್ಳಿ ನಾಳೆಯಿಂದ  5 ದಿನಗಳ ಕಾಲ ಸಾಲು ಸಾಲು ರಜೆಗಳು ಬರಲಿವೆ. ಹಬ್ಬದ ಖರ್ಚು ವೆಚ್ಚಗಳಿಗಾಗಿ ಹಣ ಡ್ರಾ ಮಾಡುವವರು ಈಗಲೇ ಮಾಡಿಕೊಳ್ಳುವುದು ಉತ್ತಮ.  ಆ ಬಳಿಕ ಎಟಿಎಂಗಳಲ್ಲಿಯೂ ಹಣ ಇರುತ್ತೋ ಇಲ್ಲವೋ ಎಂದು ನಿರೀಕ್ಷಿಸುವುದು ಕೂಡ ಈಗಿನ ಕಾಲದಲ್ಲಿ ಕಷ್ಟ ಸಾಧ್ಯ.

ಏಪ್ರಿಲ್ 10 ಎರಡನೇ ಶನಿವಾರ, ಏಪ್ರಿಲ್ 11 ಭಾನುವಾರ, ಏಪ್ರಿಲ್ 13 ಯುಗಾದಿ, ಏಪ್ರಿಲ್ 14 ಅಂಬೇಡ್ಕರ್ ಜಯಂತಿ ಪ್ರಯುಕ್ತ ರಜೆ ಇರುತ್ತದೆ. ಏಪ್ರಿಲ್ 12 ರಂದು ಸೋಮವಾರ ಯುಗಾದಿ ಅಮಾವಾಸ್ಯೆ ಇರುವುದರಿಂದ ಹೆಚ್ಚಿನ ಸಂಖ್ಯೆಯ ಜನ ಬ್ಯಾಂಕ್, ಕಚೇರಿಗೆ ಬರುವುದಿಲ್ಲ. ಹೀಗಾಗಿ ಬ್ಯಾಂಕ್, ಕಚೇರಿಗಳಿಗೆ ಸತತ ರಜೆ ಇರುತ್ತದೆ.

ಇತ್ತೀಚಿನ ಸುದ್ದಿ