ನಾಳೆಯಿಂದ ಶಾಲಾ ಕಾಲೇಜು ಆರಂಭ | ಕೊವಿಡ್ ಗೆ ಸೆಡ್ಡು ಹೊಡೆಯಲು ಸರ್ಕಾರದ ನಡೆಸಿರುವ ಸಿದ್ಧತೆ ಹೇಗಿದೆ ಗೊತ್ತಾ?
ಬೆಂಗಳೂರು: ಒಂದೂವರೆ ವರ್ಷಗಳಿಂದ ಮುಚ್ಚಿದ್ದ ಶಾಲಾ ಕಾಲೇಜುಗಳು ನಾಳೆಯಿಂದ ತೆರೆಯಲಿದೆ ಎಂದು ಶಿಕ್ಷಣ ಇಲಾಖೆ ಹೇಳಿದ್ದು, ಈ ಹಿನ್ನೆಲೆಯಲ್ಲಿ 9 ಹಾಗೂ 10 ಮತ್ತು ಪ್ರಥಮ ಪಿಯುಸಿ ಬೌದ್ಧಿಕ ತರಗತಿಗಳ ಪುನಾರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
ಕೊವಿಡ್ ಸೋಂಕು ಪಾಸಿಟಿವಿಟಿ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಭೌತಿಕ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಕೊವಿಡ್ ಹರಡದಂತೆ ಎಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸುವ ಮೂಲಕ, ಕೊವಿಡ್ ಮಾರ್ಗದರ್ಶಿ ನಿಯಮಗಳನ್ನು ಪಾಲಿಸಿಕೊಂಡು ತರಗತಿ ತೆರೆಯಲು ಅವಕಾಶ ನೀಡಲಾಗಿದೆ.
ವಿದ್ಯಾರ್ಥಿಗಳು ಊಟದ ಬಾಕ್ಸ್, ಬಾಟಲಿಯಲ್ಲಿ ಬಿಸಿ ನೀರು ತೆಗೆದುಕೊಂಡು ಹೋಗಬೇಕು. ಶಾಲೆಯಲ್ಲಿ ಕೂಡ ಬಿಸಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಶಾಲಾ ಆರಂಭದ ಮೊದಲಿಗೆ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಮಾತ್ರವೇ ತರಗತಿಗಳು ನಡೆಯಲಿದೆ. ಆ ಬಳಿಕ ಸ್ಥಿತಿಗತಿಗಳನ್ನು ಗಮನಿಸಿಕೊಂಡು ಪೂರ್ತಿ ತರಗತಿಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ಕುಸಿತ ಕಂಡರೆ, ಶಾಲೆಗಳಲ್ಲಿ ತರಗತಿಗಳು ಮುಂದುವರಿಯಬಹುದು. ಪಾಸಿಟಿವಿಟಿ ಆಧಾರದಲ್ಲಿ ಶಾಲೆಗಳನ್ನು ತೆರೆಯಲು ಸರ್ಕಾರ ಮುಂದಾಗಿರುವುದು ಉತ್ತಮವಾದ ಕ್ರಮವಾಗಿದೆ. ಯಾವ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗುತ್ತದೋ ಆ ಜಿಲ್ಲೆಗಳಲ್ಲಿ ಅಥವಾ ತಾಲೂಕುಗಳಲ್ಲಿ ಮಾತ್ರವೇ ಶಾಲೆ ಮುಚ್ಚಲು ಶಿಕ್ಷಣ ಇಲಾಖೆ ಮುಂದಾಗಬಹುದು ಎಂದು ಹೇಳಲಾಗಿದೆ.
ಕಳೆದ ವರ್ಷಗಳ ಕೊವಿಡ್ 19ನಿಂದ ಉಂಟಾಗಿರುವ ಅನುಭವಗಳನ್ನು ಗಮನಿಸಿಕೊಂಡು ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಜ್ಞಾನದ ಕೇಂದ್ರವಾದ ಶಾಲೆಗಳನ್ನು ಮುಚ್ಚುವುದು ದ್ರಾರಿದ್ರ್ಯದ ಸಂಕೇತವಾಗಿದೆ. ಹಾಗಾಗಿ ಶಾಲೆ ಆರಂಭದ ಬಗ್ಗೆ ರಾಜ್ಯ ಬಿಜೆಪಿ ತೆಗೆದುಕೊಂಡಿರುವ ಕ್ರಮ ಪ್ರಸಂಶನಿಯವಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ.
ಇನ್ನಷ್ಟು ಸುದ್ದಿಗಳು…
ಆಗಸ್ಟ್ 23ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ಚಿಂತನೆ- ಪರ್ಯಾಯ ರಾಜಕಾರಣದ ಕುರಿತು ಒಂದು ಸಂವಾದ ಕಾರ್ಯಕ್ರಮ
ಕೊವಿಡ್ ಮಾರ್ಗಸೂಚಿಗೆ ಅಂಜದೇ ಗಣೇಶೋತ್ಸವ ನಡೆಸಲು ಶಾಸಕ ಯತ್ನಾಳ್ ಕರೆ!
ವಿಡಿಯೋ ಮುಂದಿಟ್ಟುಕೊಂಡು ಬಿಜೆಪಿ ಮುಖಂಡ ಚಿ.ನಾ.ರಾಮು ವಿರುದ್ಧ ಮಹಿಳೆಯಿಂದ ಬ್ಲ್ಯಾಕ್ ಮೇಲ್ | ದೂರು ದಾಖಲು
ಬೆಂಗಳೂರು-ಮೈಸೂರು 6 ಪಥದ ರಸ್ತೆ ನಿರ್ಮಾಣ ಪ್ರತಾಪ್ ಸಿಂಹ ಸಾಧನೆಯಲ್ಲ | ಹೆಚ್.ವಿಶ್ವನಾಥ್
ಮತ್ತೆ ಅಖಾಡಕ್ಕಿಳಿಯಲಿದ್ದಾರೆ WWE ಸೂಪರ್ ಸ್ಟಾರ್ ಸಿಎಂ ಫಂಕ್ | ಖುಷಿಯಲ್ಲಿ ಕಣ್ಣೀರು ಹಾಕಿದ ಅಭಿಮಾನಿಗಳು
ಪಾನಿಗೆ ಮೂತ್ರ ಮಾಡಿದ ಜಗ್ ಮುಳುಗಿಸಿದ ಪಾನಿಪುರಿ ಮಾರಾಟಗಾರ: ಈ ವೈರಲ್ ವಿಡಿಯೋದ ಘಟನೆ ಎಲ್ಲಿ ನಡೆದದ್ದು ಗೊತ್ತೆ?
ನೋ ಪಾರ್ಕಿಂಗ್ ನಲ್ಲಿದ್ದ ಸವಾರ ಸಹಿತ ಬೈಕ್ ನ್ನು ಹೊತ್ತೊಯ್ದ ಟ್ರಾಫಿಕ್ ಪೊಲೀಸರು!
ಕೊಲೆ ಆರೋಪಿ ವಿನಯ್ ಕುಲಕರ್ಣಿ ಜಾಮೀನಿನಲ್ಲಿ ಬಿಡುಗಡೆ | ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ