40% ಕಮಿಷನ್ ಗೆ ಸಾಕ್ಷಿ ಏನಿದೆ?: ಪುರಾವೆ ಕೊಟ್ಟರೆ ನಾವು ನೋಡ್ತೇವೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
40% ಕಮಿಷನ್ ವಿಚಾರದಲ್ಲಿ ಸಾಕ್ಷಿಗಳು ಏನಿದೆ, ಇದ್ದರೆ ಕೊಡಲಿ. ಜಯಮಾಲಾ ಅವರು ಕಾಂಗ್ರೆಸ್ ಗೆ ಹಣ ಕೊಡಲು ಮೊಟ್ಟೆಯಲ್ಲಿ ಹಣ ಮಾಡಿದವರು ಎಂದು
ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನೆರೆ ಸಂಗ್ರಹದ ಹಣದಲ್ಲೇ ಲೂಟಿ ಮಾಡಿದ 80% ಪಕ್ಷವಾಗಿದೆ. ಈ ಪಕ್ಷಕ್ಕೆ ನೈತಿಕತೆ ಇದ್ರೆ ಸಾಕ್ಷ್ಯ ಕೊಡಲಿ, ಕೆಂಪಣ್ಣನೂ ಸಾಕ್ಷ್ಯ ಕೊಡಲಿ. ಕೆಂಪಣ್ಣ ಸುಮ್ಮನೆ ಮಾತನಾಡೋ ಬದಲು ಪುರಾವೆ ಕೊಟ್ಟರೆ ನಾವು ನೋಡ್ತೇವೆ ಅಂದ್ರು.
ಇನ್ನು ಮಾಜಿ ಸಚಿವ ಈಶ್ವರಪ್ಪರಿಗೆ ಬೆದರಿಕೆ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಘಟನೆ ಆಗ್ತಾ ಇದೆ, ಸರ್ಕಾರ ಈಶ್ವರಪ್ಪನವರಿಗೆ ಭದ್ರತೆ ಕೊಡುತ್ತೆ ಎಂದರು.
ಈದ್ಗಾ ಮೈದಾನ ಸರ್ಕಾರಿ ಜಾಗ, ಅಲ್ಲಿ ಗಣೇಶ ಪ್ರತಿಮೆ ಇಡಬಹುದು. ಸ್ಥಳೀಯ ಆಡಳಿತಕ್ಕೆ ಅರ್ಜಿ ಕೊಟ್ಟರೆ ಗಣೇಶೋತ್ಸವಕ್ಕೆ ಅವಕಾಶ ಕೊಡ್ತಾರೆ. ಸರ್ಕಾರಿ ಜಾಗದಲ್ಲಿ ಮಾಡಲು ಬಿಡಲ್ಲ ಅನ್ನೋದಕ್ಕೆ ಅದು ಯಾರಪ್ಪನ ಆಸ್ತಿಯೂ ಅಲ್ಲ. ಸರ್ಕಾರಿ ಜಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಲು ಅವಕಾಶ ಕೊಡಲೇಬೇಕು ಅಂದ್ರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka