ನಾಳೆಯಿಂದಲೇ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರು ತರಗತಿಗೆ ಬರಲಿ: ಶಾಸಕ ರಘುಪತಿ ಭಟ್ - Mahanayaka
8:25 AM Thursday 12 - December 2024

ನಾಳೆಯಿಂದಲೇ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರು ತರಗತಿಗೆ ಬರಲಿ: ಶಾಸಕ ರಘುಪತಿ ಭಟ್

ragupathi baht
15/03/2022

ಉಡುಪಿ: ಹಿಜಾಬ್‌ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ ಆರು ಮಂದಿ ವಿದ್ಯಾರ್ಥಿನಿಯರು ನಾಳೆಯಿಂದಲೇ ತರಗತಿಗೆ ಬರಬೇಕು. ಅವರೆಲ್ಲರಿಗೂ ಸಮವಾದ ಶಿಕ್ಷಣ ನೀಡುತ್ತೇವೆ. ಇಷ್ಟು ದಿನ ಅವರ ಶಿಕ್ಷಣಕ್ಕೆ ಸಮಸ್ಯೆ ಆಗಿದ್ರೆ, ಅವರಿಗೆ ಪ್ರತ್ಯೇಕ ನೋಟ್ಸ್ ನೀಡಲಾಗುತ್ತದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಶಾಸಕ ರಘುಪತಿ ಭಟ್, ‘ಸತ್ಯ‌ಮೇವ ಜಯತೇ’ ಉಚ್ಚ ನ್ಯಾಯಾಲಯದ‌ ತೀರ್ಪಿನ ಮೂಲಕ ಭಾರತದ ಸಂಸ್ಕೃತಿಗೆ ಜಯವಾಗಿದೆ, ಈ ಮಣ್ಣಿನ ವಿರೋಧಿಗಳು ಸೋಲು ಕಂಡಿದ್ದಾರೆ. ಸಮವಸ್ತ್ರದ ಕುರಿತು ಕರ್ನಾಟಕ ಹೈಕೋರ್ಟ್‌ ಹೊರಡಿಸಿದ ತೀರ್ಪನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತೇನೆ. ಇದು ನಮ್ಮ ಸಂವಿಧಾನಕ್ಕೆ ಲಭಿಸಿದ ಜಯ. ಮತಾಂಧತೆ ಕೊನೆಯಾಗಲಿ, ಕಾನೂನಿನ ಪಾಲನೆಯಾಗಲಿ ಎಂದು ತಿಳಿಸಿದ್ದಾರೆ.

ಕೆಲವರು ಸಂವಿಧಾನ ಬದ್ದವಾದ ನಿಯಮವನ್ನೇ ಧಿಕ್ಕರಿಸಲು ಹೊರಟ್ಟಿದ್ದರು. ಅವರಿಗೆ ನ್ಯಾಯಾಲಯವೇ ತಕ್ಕ ಉತ್ತರ ನೀಡಿದೆ. ಮತಾಂಧತೆ ಕೊನೆಯಾಗಲಿ, ಕಾನೂನಿನ ಪಾಲನೆಯಾಗಲಿ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಹಿಜಾಬ್​ ವಿವಾದದ ಬಗ್ಗೆ ಸುರ್ಧೀರ್ಘ ವಿಚಾರಣೆ ನಡೆಸಿರುವ ಸಿಜೆ‌ ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ಎಸ್. ದೀಕ್ಷಿತ್, ‌ನ್ಯಾ.ಖಾಜಿ ನೇತೃತ್ವದ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಿದ್ದು, ಹಿಜಾಬ್ ಧರಿಸಲು ಅವಕಾಶ ಕೋರಿದ್ದ ಅರ್ಜಿಗಳನ್ನು ವಜಾ ಮಾಡಿದೆ. ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ ಎಂದು ತಿಳಿಸಿದೆ.

ಹಿಜಾಬ್ ಇಸ್ಲಾಂ ಧರ್ಮದದಲ್ಲಿ ಧಾರ್ಮಿಕ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ಸಂಹಿಂತೆ ಆದೇಶ ಕಾನೂನು ಬದ್ಧವಾಗಿದೆ ಎಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇನ್ಸ್ಟಾಗ್ರಾಮ್ ಬಳಸದಂತೆ ಆದೇಶ : ರಷ್ಯಾ ಸರ್ಕಾರ

ಹಿಜಾಬ್ ವಿಚಾರ: ಹೈಕೋರ್ಟ್ ತೀರ್ಪಿಗೆ ಎಲ್ಲರೂ ತಲೆಬಾಗಬೇಕು; ಸಿಎಂ ಬಸವರಾಜ ಬೊಮ್ಮಾಯಿ

ನಮ್ಮ ಪ್ರಾಂಶುಪಾಲರು ಪ್ರತಿದಿನ ಕುರಾನ್, ಬೈಬಲ್, ಭಗವದ್ಗೀತೆ ಓದಿಸುತ್ತಿದ್ದರು: ಮುಸ್ಕಾನ್

ವಿಪರೀತ ಶಾಖದಲ್ಲಿ ದೇಹವನ್ನು ತಂಪಾಗಿಸಲು ಏನು ಕುಡಿಯಬೇಕು?  ಏನು ತಪ್ಪಿಸಬೇಕು?

ಸರ್ಕಾರದ ‘ವಸ್ತ್ರ ಸಂಹಿತೆ’ ಆದೇಶ ಕಾನೂನುಬದ್ಧವಾಗಿದೆ  ಎಂದ ಹೈಕೋರ್ಟ್

 

ಇತ್ತೀಚಿನ ಸುದ್ದಿ