ನಾಡು ಕಟ್ಟಿದ ನಾಲ್ವಡಿ  ಕೃಷ್ಣರಾಜ ಒಡೆಯರ್ ಜಯಂತಿ ಬಿಜೆಪಿಗೆ ಬೇಕಿಲ್ಲ: ಪ್ರೊ.ಪಿ.ವಿ.ನಂಜರಾಜ ಅರಸ್

nalwadi krishnaraja odeyar
07/09/2022

ಮೈಸೂರು: ಬಿಜೆಪಿ ಸರ್ಕಾರ ಮತಕ್ಕಾಗಿ ಸಾವರ್ಕರ್, ಗೋಡ್ಸೆ ಜಯಂತಿ ಬೇಕಾದರೂ ಆಚರಿಸುತ್ತದೆ. ಆದರೆ ನಾಡನ್ನು ಕಟ್ಟಿದ ನಾಲ್ವಡಿ  ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ ಬಿಜೆಪಿಗೆ ಬೇಕಿಲ್ಲ ಎಂದು ಇತಿಹಾಸಕಾರ ಪ್ರೊ.ಪಿ.ವಿ.ನಂಜರಾಜ ಅರಸ್ ವಾಗ್ದಾಳಿ ನಡೆಸಿದರು.

ಮೈಸೂರು ದಸರಾಗೂ ಮುನ್ನ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸುವಂತೆ ಒತ್ತಾಯಿಸಿ ಭಾರತೀಯ ಪರಿವರ್ತನ ಸಂಘ(BPS) ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಪ್ರತಿ ವರ್ಷ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಮಾಡಬೇಕೆಂದು ಸರ್ಕಾರದ ಆದೇಶವಿದ್ದರೂ, ಎಂಎಲ್ ಸಿ ಚುನಾವಣಾ ನೆಪ ಹೇಳಿ ಜಯಂತಿಯನ್ನು ಮುಂದೂಡಲಾಯಿತು. ಇದಾದ ನಂತರ ಸುಮಾರು ಮೂರು ಜಯಂತಿಗಳು ಜಿಲ್ಲಾಡಳಿತದ ವತಿಯಿಂದ ನಡೆದಿದೆ. ಆದರೆ ನಾಲ್ವಡಿಯವರ ಜಯಂತಿಯನ್ನು ಆಚರಿಸದಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ತಿಂಗಳೊಳಗೆ  ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮವನ್ನು ನಡೆಸಬೇಕು. ಜಿಲ್ಲಾಡಳಿತ ನಡೆಸದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ  ಭಾರತೀಯ ಪರಿವರ್ತನ ಸಂಘ(BPS)ದ ರಾಜ್ಯ ಸಂಚಾಲಕ ಸೋಸಲೆ ಸಿದ್ದರಾಜು, ಮಾಜಿ ಮಹಾಪೌರ ಎಂ.ಪುರುಷೋತ್ತಮ್, ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷರಾದ ಯಮುನಾ, ಬಿಪಿಎಸ್ ಸಂಯೋಜಕ ನಾರಾಯಣ, ಸೋಸಲೆ ಗಂಗಾಧರ್, ಜಯ ಶಂಕರ್ ಮೇಸ್ತ್ರಿ, ಮಹಾದೇವ್, ಪ್ರತಾಪ್, ದಿನಾಕರ್ ಮತ್ತಿತರರು ಇದ್ದರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version