ನಮಗೆ ಮೇಟಿ, ರಮೇಶ್ ಜಾರಕಿಹೊಳಿ ಅವರದ್ದೇ ಪಾಠ | ಎಸ್.ಟಿ.ಸೋಮಶೇಖರ್
16/03/2021
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೊರೆ ಹೋಗಿದ್ದ ಸಚಿವ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ನಾಯಕ ಮೇಟಿ ಪ್ರಕರಣ ಹಾಗೂ ರಮೇಶ್ ಜಾರಕಿಹೊಳಿ ಪ್ರಕರಣ ನಮಗೆ ಪಾಠ ಎಂದು ಹೇಳಿದ್ದಾರೆ.
ಮೇಟಿ ಅವರು ರಾಸಲೀಲೆ ಪ್ರಕರಣದ ಬಳಿಕ ಅವರು ರಾಜೀನಾಮೆ ನೀಡಿದರು. ರಾಜೀನಾಮೆ ನೀಡಿ 3 ತಿಂಗಳ ಬಳಿಕ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತು. ಆದರೆ ಅಷ್ಟರಲ್ಲಿ ಅವರ ಮಾನ, ಮರ್ಯಾದೆ ಎಲ್ಲ ಹೋಗಿತ್ತು. ಚುನಾವಣೆಯಲ್ಲಿ ಕೂಡ ಅವರು ಸೋತಿದ್ದರು ಎಂದು ಸೋಮಶೇಖರ್ ಹೇಳಿದರು.
ನಾವೆಲ್ಲ ಸಿಡಿ ಇದೆ ಎಂದು ಕೋರ್ಟ್ ಮೊರೆ ಹೋಗಿಲ್ಲ. ಅನಗತ್ಯವಾಗಿ ಯಾರು ಕೂಡ ತೇಜೋವಧೆ ಮಾಡಬಾರದು ಎಂದು ನ್ಯಾಯಾಲಯದ ಮೊರೆ ಹೋಗಿದ್ದೇವೆ. ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಬಗ್ಗೆ ಪ್ರಸ್ತಾಪಿಸಿದ ಅವರು, ಇಡೀ ಜಗತ್ತಿಗೆ ರಮೇಶ್ ಮರ್ಯಾದೆ ಹರಾಜು ಆಯಿತು. ದೂರು ಕೊಟ್ಟವರು ವಾಪಸ್ ಪಡೆದುಕೊಂಡಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಅವರ ಹೋದ ಮರ್ಯಾದೆ ಯಾರು ತಂದು ಕೊಡುತ್ತಾರೆ ಎಂದು ವಿಧಾನ ಪರಿಷತ್ ನಲ್ಲಿ ಅವರು ಪ್ರಶ್ನಿಸಿದರು.