ನಾಮಪತ್ರ ಸಲ್ಲಿಸಲು ಎಮ್ಮೆ ಏರಿ ಬಂದ ಪಂಚಾಯತ್ ಅಭ್ಯರ್ಥಿ!
ಪಾಟ್ನಾ: ಬಿಹಾರದಲ್ಲಿ ಪಂಚಾಯತ್ ಚುನಾವಣೆ ರಂಗೇರುತ್ತಿದ್ದು, ಪ್ರಚಾರ ಮಾಡುವುದರಲ್ಲಿ ನಾವು ದಿಲ್ಲಿಯಲ್ಲಿ ಕುಳಿತ ರಾಜಕಾರಣಿಗಳನ್ನೂ ಮೀರಿಸಿದವರು ಎಂದು ಪಂಚಾಯತ್ ಅಭ್ಯರ್ಥಿಗಳು ಸಾಬೀತು ಮಾಡಿದ್ದಾರೆ. ಇದೀಗ ಅಭ್ಯರ್ಥಿಯೋರ್ವರು ಎಮ್ಮೆಯ ಮೇಲೆ ಕುಳಿತುಕೊಂಡು ಬಂದು ನಾಮಪತ್ರ ಸಲ್ಲಿಸಿದ್ದಾರೆ.
ಕತಿಹಾರ್ ಜಿಲ್ಲೆಯ ರಾಮ್ ಪುರ ಪಂಚಾಯತ್ ನ ಅಭ್ಯರ್ಥಿ ಅಜಾದ್ ಆಲಂ ಅವರು ಎಮ್ಮೆ ಮೇಲೆ ಕುಳಿತುಕೊಂಡು ಬಂದು ನಾಮಪತ್ರ ಸಲ್ಲಿಸಿದರು. ಇನ್ನೂ ಎಮ್ಮೆಯ ಮೇಲೆ ಕುಳಿತು ಕೊಂಡು ಬಂದಿರುವುದಕ್ಕೆ ಕಾರಣ, ಪೆಟ್ರೋಲ್ ಡೀಸೇಲ್ ಬೆಲೆ ಏರಿಕೆಯಾಗಿದೆ ಎಂದು ಅವರು ಸಾರ್ವಜನಿಕರಿಗೆ ವಿವರಿಸಿದರು.
ಇದೀಗ ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಎನ್ ಐ ಸುದ್ದಿ ಸಂಸ್ಥೆ ಈ ವಿಡಿಯೋವನ್ನ ಟ್ವೀಟ್ ಮಾಡಿದೆ. ಅಜಾದ್ ಆಲಂ ಎಮ್ಮೆ ಏರಿ ಬಂದು ನಾಮಪತ್ರ ಸಲ್ಲಿಸುವುದನ್ನು ನೋಡಲು ಜನರು ಸಾಲುಗಟ್ಟಿ ನಿಂತಿದ್ದಾರೆ. ಜೊತೆಗೆ ಅಜಾದ್ ಆಲಂ ಅವರನ್ನು ಸುತ್ತುವರಿದು ಕುತೂಹಲದಿಂದ ನೋಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಇನ್ನಷ್ಟು ಸುದ್ದಿಗಳು…
ಹೃದಯ ವಿದ್ರಾವಕ ಘಟನೆ: ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಕ್ಕಳ ಮೇಲೆಯೇ ಉರುಳಿ ಬಿತ್ತು ಕಟ್ಟಡ!
ಶಾಕಿಂಗ್ ನ್ಯೂಸ್: ಹಫ್ತಾ ನೀಡಲು ನಿರಾಕರಿಸಿದ ವ್ಯಕ್ತಿಯ ಪತ್ನಿಯ ಮೇಲೆ ರೌಡಿಗಳಿಂದ ಗ್ಯಾಂಗ್ ರೇಪ್
ಶಾಲೆಯ ಪ್ರಯೋಗಾಲಯದಲ್ಲಿದ್ದ ಆ್ಯಸಿಡ್ ಬಾಟಲಿ ಒಡೆದು ನಾಲ್ವರು ವಿದ್ಯಾರ್ಥಿನಿಯರಿಗೆ ಗಾಯ!
ಹೈದರಾಬಾದ್: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ | ಸಿಡಿದೆದ್ದ ಜನರು
ಪ್ರಾಣ ಸ್ನೇಹಿತರು ಜೊತೆಯಾಗಿ ಪ್ರಾಣ ಬಿಟ್ಟರು: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು ಪ್ರಾಣಕ್ಕೆ ಕುತ್ತು ತಂದಿತು!
ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ | ನಟ ಚೇತನ್
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ಸಂಖ್ಯೆಯನ್ನು ಸೇರಿಸಿಕೊಳ್ಳಿ. ಮಾಧ್ಯಮದ ಬೆಳವಣಿಗೆಗೆ ನಿಮ್ಮ ಸಹಕಾರವಿರಲಿ.