ಹಿಂದೂ ಯುವತಿಯನ್ನು ನಂಬಿಸಿ ದೈಹಿಕ ಸಂಬಂಧ ಹೊಂದಿದ ಮುಸ್ಲಿಮ್ ಯುವಕ | ಆ ಬಳಿಕ ತಿಳಿಯಿತು ಆತನ ಅಸಲಿ ಪುರಾಣ!
ರಾಂಚಿ: ಹಿಂದೂ ಯುವತಿಯೊಬ್ಬಳನ್ನು ವಿವಾಹಿತ ಮುಸ್ಲಿಮ್ ಯುವಕ ತಾನು ಹಿಂದೂ ಎಂದು ಹೇಳಿ ಮದುವೆಯಾಗಲು ಯತ್ನಿಸಿದ್ದು, ಯುವತಿಯ ಜೊತೆಗೆ ದೈಹಿಕ ಸಂಬಂಧವನ್ನು ಹೊಂದಿದ ಘಟನೆ ನಡೆದಿದೆ.
ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಪಾಲ್ಜೋರಿಯ 30 ವರ್ಷದ ಟಿಪ್ಪು ಸುಲ್ತಾನ್ ಎಂಬಾತ ವಿವಾಹಿತನಾಗಿದ್ದು, ಈಗಾಗಲೇ ಈತನಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಈತ 6 ತಿಂಗಳ ಹಿಂದೆ ಸ್ಥಳೀಯ ಮಾಲ್ ವೊಂದರಲ್ಲಿ ಪ್ಯಾಟ್ಜಿಮ್ಲಾದ ಹಳ್ಳಿಯ 19 ವರ್ಷದ ಹಿಂದೂ ಯುವತಿಯನ್ನು ಭೇಟಿಯಾಗಿದ್ದು, ಹೀಗಾಗಿ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿದೆ. ವಿವಾಹಿತನಾಗಿದ್ದ ಟಿಪ್ಪು ಈ ವಿಚಾರವನ್ನು ಯುವತಿಗೆ ಹೇಳಿಯೇ ಇಲ್ಲ. ಈ ನಡುವೆ ಇವರ ನಡುವೆ ಎಲ್ಲವೂ ನಡೆದುಹೋಗಿದೆ.
ಟಿಪ್ಪು ಸುಲ್ತಾನ್, ತನ್ನ ಹೆಸರು ಸತೀಶ್ ರಾಯ್ ಎಂದು ಯುವತಿಯೊಂದಿಗೆ ಪರಿಚಯ ಮಾಡಿಕೊಂಡಿದ್ದ. ತನಗೆ ಪೆಟ್ರೋಲ್ ಪಂಪ್ ಇದೆ, ಹಾರ್ಲಿಕ್ಸ್ ವ್ಯಾಪಾರವೂ ಇದೆ ಎಂದು ಈತ ಹೇಳಿದ್ದ. ಇದರಿಂದಾಗಿ ಯುವತಿ ಈತನ ಬಲೆಗೆ ಬಿದ್ದಿದ್ದಾಳೆ.
ತನ್ನ ಧರ್ಮ ಹಾಗೂ ವಿವಾಹಿತ ಎನ್ನುವುದನ್ನು ಮುಚ್ಚಿಟ್ಟಿದ್ದ ಟಿಪ್ಪು, ಯುವತಿಯೊಂದಿಗೆ ಕೊನೆಗೂ ನಿಶ್ಚಿತಾರ್ಥವಾಗಲು ಮುಂದಾಗಿದ್ದಾನೆ. ಈ ವೇಳೆ ಮನೆಯವರು ಕೂಡ ಒಪ್ಪಿಗೆ ನೀಡಿದ್ದಾರೆ. ಆದರೆ ಈ ನಡುವೆ ಮನೆಯವರು ನಿನ್ನ ದಾಖಲೆ ಬಹಿರಂಗಪಡಿಸು ಎಂದು ಪ್ರಶ್ನಿಸಿದ್ದು, ಈ ವೇಳೆ ಈತ ಸಿಕ್ಕಿ ಬಿದ್ದಿದ್ದು, ಸುಳ್ಳಿನ ಸರಮಾಲೆಯೂ ಬಯಲಾಗಿದೆ.
ಈತನ ಸುಳ್ಳನ್ನು ನಂಬಿ ಸರ್ವಸ್ವವನ್ನೂ ನೀಡಿದ ಹಿಂದೂ ಯುವತಿ ಇದೀಗ ಕಂಗಾಲಾಗಿದ್ದಾಳೆ. ಇದೀಗ ಆರೋಪಿಯ ವಿರುದ್ಧ ಅತ್ಯಾಚಾರ, ಮೋಸದ ಮದುವೆಗೆ ಯತ್ನ ಮೊದಲಾದ ಪ್ರಕರಣಗಳಡಿಯಲ್ಲಿ ದೂರು ದಾಖಲಾಗಿದೆ.