ನಮ್ಮ ಮಗನ ಸಾವಿಗೆ ಈ ಸರ್ಕಾರವೇ ಕಾರಣ: ಮೃತ ನವೀನ್ ತಂದೆ ಶೇಖರಗೌಡ - Mahanayaka
5:34 PM Wednesday 5 - February 2025

ನಮ್ಮ ಮಗನ ಸಾವಿಗೆ ಈ ಸರ್ಕಾರವೇ ಕಾರಣ: ಮೃತ ನವೀನ್ ತಂದೆ ಶೇಖರಗೌಡ

naveen
02/03/2022

ಹುಬ್ಬಳ್ಳಿ: ನಮ್ಮ ಮಗನ ಸಾವಿಗೆ ಈ ಸರ್ಕಾರವೇ ಕಾರಣ. ನಮ್ಮ ಮಗ ರಾಯಭಾರಿ ಕಚೇರಿಗೆ ಪೋನ್ ಮಾಡಿದರೆ ಅಲ್ಲಿಂದ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ ಎಂದು ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ತಂದೆ ಶೇಖರಗೌಡ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮಗನ ಜೊತೆಗೆ ಬೆಳಗ್ಗೆ 10 ಗಂಟೆಗೆ ಮಾತನಾಡಿದ್ದೇನೆ. ನಂತರ ಫೋನ್​ ಮಾಡಿದಾಗ ರಿಂಗ್ ಆಯಿತು, ಆದರೆ ಕರೆ ಸ್ವೀಕರಿಸಲಿಲ್ಲ. ಇದಾದ ಕೆಲವೇ ಗಂಟೆಯಲ್ಲಿ ನಮ್ಮ ಮಗನ ಸಾವಿನ ಸುದ್ದಿಯನ್ನ ರಾಯಭಾರಿ ಕಚೇರಿ ತಿಳಿಸಿತು. ನಮ್ಮ ಮಗನ ಸಾವಿಗೆ ಈ ಸರ್ಕಾರವೇ ಕಾರಣ. ನಮ್ಮ ಮಗ ರಾಯಭಾರಿ ಕಚೇರಿಗೆ ಪೋನ್ ಮಾಡಿದರೆ ಅಲ್ಲಿಂದ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲಿಂದ ಪ್ರತಿಕ್ರಿಯೆ ಬಂದಿದ್ದರೆ ನಮ್ಮ ಸಾಯುತ್ತಿರಲಿಲ್ಲ. ನಾವು ನಮ್ಮ ಮಗನನ್ನ ಕಳೆದುಕೊಂಡಿದ್ದೇವೆ. ನಮಗಾದ ಸ್ಥಿತಿ ಬೇರೆ ಪೋಷಕರಿಗೆ ಆಗೋದು ಬೇಡ‌. ಆ‌ ಮಕ್ಕಳನ್ನಾದರೂ ಸರ್ಕಾರ ಸುರಕ್ಷಿತವಾಗಿ ಕರೆತರಲಿ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಕಾಪಾಡಿದ ಬೌದ್ಧ ಧರ್ಮದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ: ಸಿಎಂಗೆ ಮನವಿ

ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಭೀಕರ ಹತ್ಯೆ

ಪ್ರವಾಸಕ್ಕೆ ಬಂದ ಇಬ್ಬರು ವಿದ್ಯಾರ್ಥಿಗಳು ನದಿನೀರು ಪಾಲು

ಎರಡೂವರೆ ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ: ಅಪರಾಧಿಗೆ ಮರಣದಂಡನೆ

ಸಿಬಿಐ ಅಧಿಕಾರಿಗಳು ಎಂದು ಹೇಳಿ ಲಕ್ಷಾಂತರ ರೂ. ನಗದು, ಚಿನ್ನಾಭರಣ ದರೋಡೆ

ಇತ್ತೀಚಿನ ಸುದ್ದಿ