ನಮ್ಮ ಮನೆಯಲ್ಲಿಯೂ ಹೆಂಡತಿ ಗದರುತ್ತಾರೆ | ಸಿಎಂ ಬಸವರಾಜ್ ಬೊಮ್ಮಾಯಿ - Mahanayaka
1:17 PM Wednesday 11 - December 2024

ನಮ್ಮ ಮನೆಯಲ್ಲಿಯೂ ಹೆಂಡತಿ ಗದರುತ್ತಾರೆ | ಸಿಎಂ ಬಸವರಾಜ್ ಬೊಮ್ಮಾಯಿ

basavaraj bommai
09/10/2021

ಸಿನಿಡೆಸ್ಕ್: ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಟಿವಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಕಲರ್ಸ್ ಕನ್ನಡದ ‘ಅನುಬಂಧ ಅವಾರ್ಡ್’(Anubandha Awards 2021) ನಲ್ಲಿ ಕೂಡ ಸಿಎಂ ಭಾಗವಹಿಸಿದ್ದು, ಮನೆ, ಸಂಸಾರ ತಾಪತ್ರಯಗಳ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.

ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ, ನಿರೂಪಕ ಅಕುಲ್ ಬಾಲಾಜಿ, ಎಲ್ಲರ ಮನೆಯಲ್ಲಿ ನಳ್ಳಿ ರಿಪೇರಿ ಇಂತಹ ಸಣ್ಣಸಣ್ಣ ಕಾರಣಕ್ಕೆ ಜಗಳವಾಗುತ್ತದೆ. ಹಾಗೆಯೇ  ನಿಮ್ಮ ಮನೆಯಲ್ಲಿ ಕೂಡ ಜಗಳವಾಗುತ್ತಾ? ಎಂದು ಪ್ರಶ್ನಿಸಿದರು.

ಅಕುಲ್  ಪ್ರಶ್ನೆಗೆ ಉತ್ತರಿಸಿದ ಸಿಎಂ, ನಮ್ಮ ಮನೆಯೂ ಸಾಮಾನ್ಯರ ಸಂಸಾರ ಇದ್ದಂತೆ. ಎಲೆಕ್ಟ್ರಿಸಿಟಿ ಎಲ್ಲಾ ಕಡೆ ಹೇಗಿದೆಯೋ ನಮ್ಮ ಮನೆಯಲ್ಲೂ ಹಾಗೆಯೇ ಇದೆ. ನಾನು ಸಿಎಂ ಆದ ಮಾತ್ರಕ್ಕೆ ಅವು ಬದಲಾಗುವುದಿಲ್ಲ. ನಿಮ್ಮ ಮನೆಯಲ್ಲಿ ಹೆಂಡತಿ ಗದರಬಹುದು. ನಮ್ಮ ಮನೆಯಲ್ಲಿಯೂ ಹಾಗೆಯೇ ಹೆಂಡತಿ ಗದರುತ್ತಾರೆ ಎಂದಿದ್ದಾರೆ.

ಈ ಕಾರ್ಯಕ್ರಮವು ಕಲರ್ಸ್ ಕನ್ನಡದಲ್ಲಿ ಅಕ್ಟೋಬರ್ 15, 16, 17ರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಕೊವಿಡ್ ಹಾವಳಿ ತಗ್ಗಿರುವ ಕಾರಣ ಈ ಬಾರಿ ಕಳೆದ ಬಾರಿಗಿಂತ ಅದ್ದೂರಿಯಾಗಿಯೇ ಅನುಬಂಧ ಅವಾರ್ಡ್ ಕಾರ್ಯಕ್ರಮ ನಡೆದಿದೆ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ದಸರ ಮುಗಿದ ತಕ್ಷಣವೇ 1ರಿಂದ 5ರವರೆಗೆ ಶಾಲೆ ಆರಂಭ | ಸಚಿವ ಬಿ.ಸಿ.ನಾಗೇಶ್

ರೈತರ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸದಿದ್ದರೆ, ಪ್ರಧಾನಿ ನಿವಾಸಕ್ಕೆ ಮುತ್ತಿಗೆ | ಭೀಮ್ ಆರ್ಮಿ ಎಚ್ಚರಿಕೆ

ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ: 100ಕ್ಕೂ ಅಧಿಕ ಮಂದಿ ಸಾವು

ಏರ್ ಇಂಡಿಯಾ ಟಾಟಾ ಸನ್ ಪ್ರೈವೇಟ್ ಲಿಮಿಟೆಡ್ ಪಾಲು | ಶೇ.100ರಷ್ಟು ಷೇರು ಮಾರಾಟ

ಮಕ್ಕಳು ಜ್ಯೂಸ್ ಕುಡಿದ ಬಳಿಕ ಜ್ಯೂಸ್ ಗೆ ವಿಷ ಬೆರೆಸಿದ್ದೇನೆ, ನಾನೂ ವಿಷ ಕುಡಿದ್ದೇನೆ ಎಂದ ತಂದೆ!

ವಿದ್ಯಾರ್ಥಿನಿ ನೀನಾಳ ಆತ್ಮಹತ್ಯೆಯ ಹಿಂದಿದೆ ಹಲವು ಅನುಮಾನಗಳು | ಸೂಕ್ತ ತನಿಖೆಗೆ ಆಗ್ರಹ

ಬಿಜೆಪಿ ನಾಯಕರು ಕಾರಿನಲ್ಲಿ ಬರುವ ವೇಳೆ ಎಚ್ಚರವಾಗಿರಿ | ಸಾರ್ವಜನಿಕರಿಗೆ ಡಿ.ಕೆ.ಶಿವಕುಮಾರ್ ಸಲಹೆ

ಇತ್ತೀಚಿನ ಸುದ್ದಿ