ಭೇದಭಾವದ ಕೊಂಪೆಯಾಗ್ತಿದೆ ‘ನಮ್ಮ ಮೆಟ್ರೋ’: ಕಾರ್ಮಿಕನಿಗೆ ಅವಮಾನಿಸಿದ ಸಿಬ್ಬಂದಿ!

ಬೆಂಗಳೂರು: ನಮ್ಮ ಮೆಟ್ರೋ ಭೇದಭಾವದ ಕೊಂಪೆಯಾಗಿ ಪರಿವರ್ತಿತವಾಗುತ್ತಿದೆಯೇ ಎನ್ನುವ ಅನುಮಾನಗಳು ಕಾಡುತ್ತಿದ್ದು, ಇತ್ತೀಚೆಗಷ್ಟೇ ರೈತನೋರ್ವನನ್ನು ಬಟ್ಟೆ ಕೊಳೆಯಾಗಿದೆ ಎಂದು ಸಿಬ್ಬಂದಿ ಒಳಗೆ ಬಿಟ್ಟಿರಲಿಲ್ಲ, ಇದೀಗ ಕಾರ್ಮಿಕನೋರ್ವನನ್ನು ತಡೆದು ನಿಲ್ಲಿಸಿ ಅವಮಾನಿಸಿರುವ ಘಟನೆ ಬೆಳಕಿಗೆ ಬಂದಿದೆ.
ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಶರ್ಟ್ ನ ಗುಂಡಿಯನ್ನ ಹಾಕಿಕೊಂಡು ನೀಟಾಗಿ ಬಾ, ಇಲ್ಲದಿದ್ದರೆ ಒಳಗೆ ಪ್ರವೇಶವಿಲ್ಲ ಎಂದು ಮೆಟ್ರೋ ಸಿಬ್ಬಂದಿ ಅವಮಾನಿಸಿದ್ದಾರೆ.
ಮೆಟ್ರೋ ಸಿಬ್ಬಂದಿಗಳನ್ನು ನೇಮಕ ಮಾಡುವ ವೇಳೆ ಭೇದಭಾವದ ಸ್ವಭಾವ ಹೊಂದಿರುವ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುತ್ತಿದೆಯೇ? ಪ್ರಯಾಣಿಕರ ಬಳಿ ಹೇಗೆ ವರ್ತಿಸಬೇಕು ಎನ್ನುವ ಟ್ರೈನಿಂಗ್ ಕೂಡ ಕೊಡುತ್ತಿಲ್ಲವೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಮೆಟ್ರೋ ಆಡಳಿತ ವಿಭಾಗವು ಜನರಲ್ಲಿ ಸೌಜನ್ಯಯುತವಾಗಿ ವರ್ತಿಸುವ ಸಿಬ್ಬಂದಿಯನ್ನು ಅಲೆದು ತೂಗಿ ನೇಮಕ ಮಾಡಬೇಕು. ಒಂದರ ಹಿಂದೊಂದರಂತೆ ಇಂತಹ ಘಟನೆಗಳು ನಡೆಯುತ್ತಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth