ತುಳುವರ ಪಕ್ಷದಿಂದ 'ನಮ್ಮ ಪ್ರಧಾನಿಗೆ ತುಳುವರ ಪೋಸ್ಟ್ ಕಾರ್ಡ್' ಅಭಿಯಾನ - Mahanayaka
5:24 AM Wednesday 11 - December 2024

ತುಳುವರ ಪಕ್ಷದಿಂದ ‘ನಮ್ಮ ಪ್ರಧಾನಿಗೆ ತುಳುವರ ಪೋಸ್ಟ್ ಕಾರ್ಡ್’ ಅಭಿಯಾನ

tuluvere paksha
01/09/2022

ಬೆಳ್ತಂಗಡಿ : “ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್”(ನಮ್ಮ ಪ್ರಧಾನಿಗೆ ತುಳುವರ ಪೋಸ್ಟ್ ಕಾರ್ಡ್) ಅಭಿಯಾನವನ್ನು  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಡಿ ಪ್ರದೇಶವಾದ ಬಂಜಾರು ಮಲೆಯ ತುಳುನಾಡಿನ ಮೂಲ ಜನಾಂಗದ ಆದಿವಾಸಿಗಳು ವಾಸಿಸುವಂತಹ ಪ್ರದೇಶದಲ್ಲಿ ಚಾಲನೆ ನೀಡಲಾಯಿತು.

ಈ ಅಭಿಯಾನ ಇಂದಿನಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದ್ದು ಸುಮಾರು ಒಂದು ಲಕ್ಷಕ್ಕೂ ಮೀರಿದ ಪೋಸ್ಟ್ ಕಾರ್ಡ್ ತುಳು ಭಾಷೆಯ ಮಾನ್ಯತೆಗಾಗಿ ಮಾನ್ಯ ಪ್ರಧಾನಿ ಯವರಿಗೆ ಕಳುಹಿಸುವ ಗುರಿಯನ್ನು ಹೊಂದಿದೆ.

tuluvere paksha

ಮೂಲ ಜನಾಂಗದ ಪ್ರದೇಶವಾದ ಬಂಜಾರು ಮಲೆಯಿಂದ ಸಾಂಕೇತಿಕವಾಗಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಬಂಜಾರು ಮಲೆಯ ಮೂಲಜನಾಂಗದವರು ತುಳು ಭಾಷೆಯ ಮಾನ್ಯತೆಗಾಗಿ ನಡೆಯುವ  ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ತಮ್ಮ ಬೆಂಬಲವಿದೆ ಎಂದು ಎಲ್ಲಾ ಮನೆಗಳಿಂದ ಪೋಸ್ಟ್ ಕಾರ್ಡ್ ಬರೆಯುವ ಮುಖಾಂತರ ಈ ಅಭಿಯಾನಕ್ಕೆ ಚಾಲನೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತುಳುವೆರ್ ಕುಡ್ಲ(ರಿ) ಸಂಘಟನೆಯ ಅಧ್ಯಕ್ಷರಾದ ಪ್ರತೀಕ್ ಯು. ಪೂಜಾರಿ, ಉಪಾಧ್ಯಕ್ಷರಾದ ಸಂತೋಷ್ ಮತ್ತು ಸದಸ್ಯರಾದ  ಪ್ರಜ್ವಲ್, ಹಾಗೂ ಮಹಿಳಾ ವಿಭಾಗದ ಅಧ್ಯಕ್ಷರಾದ ಪೂಜಾ ಶೆಟ್ಟಿ, ಸದಸ್ಯರಾದ ನಿಕ್ಷಿತಾ, ತುಳುನಾಡು ವಾರ್ತೆ ವಾರ ಪತ್ರಿಕೆಯ ಸಂಪಾದಕರಾದ ಪುನೀತ್, ಮತ್ತು ತುಳುವೆರ್ ಪಕ್ಷದ ಅಧ್ಯಕ್ಷ ಶೈಲೇಶ್ ಆರ್. ಜೆ. ಉದ್ಘಾಟಿಸುವ ಮೂಲಕ ಅಭಿಯಾನಕ್ಕೆ ಚಾಲನೆ ದೊರೆಯಿತು.

ತುಳುವೆರೆ ಪಕ್ಷದಿಂದ ಅಭಿಯಾನಕ್ಕೆ ಚಾಲನೆ

ತುಳುವೆರೆ ಪಕ್ಷವು  ಕಳೆದ 10 ವರ್ಷಗಳಿಂದ ತುಳು ಭಾಷೆ, ಸಂಸ್ಕೃತಿ ಉಳಿವಿಗೆ ಅನೇಕ ವಿಧದ ಹೋರಾಟಗಳನ್ನು ಮಾಡುತ್ತಿದೆ. ತುಳುವೆರೆ ಪಕ್ಷದಿಂದ ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲವಿದೆ.    ಹಾಗೂ ತುಳುವೆರೆ ಪಕ್ಷದ ಕಡೆಯಿಂದ 10 ಸಾವಿರ ಕಾರ್ಡುಗಳನ್ನು ಬೆಳ್ತಂಗಡಿ ವಲಯದಲ್ಲಿ ಬರೆಯಿಸಿ ಪ್ರಧಾನಿ ಮೋದಿಯವರಿಗೆ ಕಳುಹಿಸುವ ಮೂಲಕ ನಮ್ಮ ಪಕ್ಷದಿಂದ ಬೆಂಬಲವನ್ನು ನೀಡಲಾಗುವುದು.

-ಶೈಲೇಶ್ ಆರ್.ಜೆ.

ಅಧ್ಯಕ್ಷರು, ತುಳುವೆರೆ ಪಕ್ಷ

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ