ಮೇಡಂ ನನಗೊಂದು ಮದುವೆ ಮಾಡಿಸಿ: ವೃದ್ಧನ ಬೇಡಿಕೆ ಕೇಳಿ ಸಚಿವೆ ಕಂಗಾಲು
ಆಂಧ್ರಪ್ರದೇಶ: ಶಾಸಕರು, ಸಚಿವರು ಬಂದಾಗ ನಮಗೆ ಮನೆ ಮಾಡಿಕೊಡಿ, ರಸ್ತೆ ಮಾಡಿಕೊಡಿ, ನೀರಿನ ಸಂಪರ್ಕ ಮಾಡಿಕೊಡಿ, ಮೂಲಭೂತ ಸೌಕರ್ಯ ಕೊಡಿ ಅಂತ ಕೇಳೋದು ಸರ್ವೇ ಸಾಮಾನ್ಯ. ಆದರೆ, ಇಲ್ಲೊಬ್ಬ ವೃದ್ಧ ಸಚಿವೆಯೊಬ್ಬರ ಬಳಿ, ನನಗೆ ಮದುವೆ ಮಾಡಿಸಿಕೊಡಿ ಎಂದು ಅಂಗಾಲಾಚಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದಲ್ಲಿ ಗಡಪದಪಾಕು ವೈಪಿಸಿ ಕಾರ್ಯಕ್ರಮದ ಭಾಗವಾಗಿ ಇಲ್ಲಿನ ಸಚಿವೆ ರೋಜಾ ಚಿತ್ತೂರಿನ ನಗರಗಳಿಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಇದೇ ವೇಳೆ ವೃದ್ಧರೊಬ್ಬರು ತಮ್ಮ ವಿಚಿತ್ರ ಬೇಡಿಕೆಯನ್ನಿಟ್ಟಿದ್ದು, ಇದರಿಂದಾಗಿ ಸಚಿವೆ ಕೆಲಕಾಲ ದಂಗಾಗಿದ್ದಾರೆ.
ನಿಮಗೆ ಸರಿಯಾಗಿ ಪಿಂಚಣಿ ಬರ್ತಿದೆಯಾ? ಎಂದು ಸಚಿವೆ ರೋಜಾ ವೃದ್ಧನ ಬಳಿಯಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವೃದ್ಧ, ಪಿಂಚಣಿ ಸರಿಯಾಗಿ ಬರ್ತಿದೆ. ಆದರೆ, ನಾನೀಗ ಒಬ್ಬಂಟಿಯಾಗಿದ್ದೇನೆ. ನನಗೊಂದು ವಧು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾನೆ.
ವೃದ್ಧನ ಈ ಬೇಡಿಕೆಗೆ ಏನು ಉತ್ತರ ನೀಡಬೇಕು ಎನ್ನುವುದು ತೋಚದ ಸಚಿವೆ, ನಗುತ್ತಾ, ಮದುವೆ ಮಾಡಿಸುವುದು ನಾವಲ್ಲ ಎಂದು ಹೇಳಿ ಸ್ಥಳದಿಂದ ತೆರಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
‘ಕೆಜಿಎಫ್ ಚಾಪ್ಟರ್ 2’ ಇನ್ನು ಅಮೆಜಾನ್ ಪ್ರೈಮ್ ನಲ್ಲಿ ಬಾಡಿಗೆಗೆ ಲಭ್ಯ
ಆಕ್ಸಿಜನ್ ಸಹಾಯವಿಲ್ಲದೆ ಎವರೆಸ್ಟ್ ಏರಿದ ಮೊದಲ ವೈದ್ಯ ದಂಪತಿಗಳು!
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ನಿವಾಸಗಳ ಮೇಲೆ ಸಿಬಿಐ ದಾಳಿ
ಕ್ವಾರಿ ದುರಂತ: ಬಂಡೆ ಉರುಳಿ ಬಿದ್ದು 3 ಮಂದಿ ಸಾವು, ಹಿಟಾಚಿಯೊಳಗೆ ಸಿಲುಕಿರುವ ಚಾಲಕ