“ನನಗೆ ಮದುವೆ ಮಾಡಿಸಿ” ಎಂದು ಟವರ್ ಏರಿ ಕುಳಿತ ಯುವಕ! - Mahanayaka

“ನನಗೆ ಮದುವೆ ಮಾಡಿಸಿ” ಎಂದು ಟವರ್ ಏರಿ ಕುಳಿತ ಯುವಕ!

hosapeta
14/06/2021

ವಿಜಯನಗರ:  ನನಗೆ ಮದುವೆ ಮಾಡಿಸಿ ಎಂದು ಯುವಕನೋರ್ವ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಸೋಮವಾರ ನಡೆದಿದೆ.

23 ವರ್ಷ ವಯಸ್ಸಿನ ಚಿರಂಜೀವಿ ಗೋಸಂಗಿ ಎಂಬಾತ ತನ್ನ ಪಕ್ಕದ ಮನೆಯ ಯುವತಿ ಉಮಾ ಅವರನ್ನು ಪ್ರೀತಿಸುತ್ತಿದ್ದು, ಇವರಿಬ್ಬರ ಮದುವೆಗೆ ಮನೆಯವರು ಕೂಡ ಒಪ್ಪಿದ್ದರು. ಆದರೆ, ಲಾಕ್ ಡೌನ್ ನಿಂದಾಗಿ ಮದುವೆ ವಿಳಂಬವಾಗಿದೆ.

ಮದುವೆ ಬೇಗನೇ ನಡೆಯಬೇಕು ಎನ್ನುವ ನಿರೀಕ್ಷೆಯಲ್ಲಿದ್ದ ಯುವಕನಿಗೆ ಮದುವೆ ವಿಳಂಬವಾಗುತ್ತಿರುವುರುವುದರಿಂದ ತೀವ್ರ ಬೇಸರವಾಗಿದ್ದು, ಹೀಗಾಗಿ ಕಂಠಮಟ್ಟ ಮದ್ಯ ಸೇವಿಸಿ ಇಲ್ಲಿನ ಹಳೆಯ ವೀರಭದ್ರೇಶ್ವರ ಟಾಕೀಸ್ ಬಳಿಯ ಏರ್ಟೆಲ್ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ.

ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಸಿಪಿಐ ವಸಂತ ವಿ ಅಸೋದೆ, ಅಪರಾಧ ವಿಭಾಗದ ಪಿಎಸ್‌ ಐ ಬಿ. ಮೀನಾಕ್ಷಿ, ಸಿಬ್ಬಂದಿ ಮತ್ತು ಸ್ಥಳೀಯರು ಬಂದು ಯುವಕನ ಮನವೊಲಿಸಲು ಯತ್ನಿಸಿದ್ದಾರೆ. ಇನ್ನೊಂದೆಡೆ ಏಳು ಜನ ಯುವಕರ ತಂಡ ಮೊಬೈಲ್ ಟವರ್ ಏರಿ ಅಮಲಿನಲ್ಲಿದ್ದ ಯುವಕನನ್ನು ಕೆಳಗಿಳಿಸಿ ಕರೆತಂದಿದ್ದಾರೆ. ಬಳಿಕ ಯುವಕನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಈ ವೇಳೆ ನೂರಾರು ಜನ ನೆರೆದಿದ್ದರು.

ಇತ್ತೀಚಿನ ಸುದ್ದಿ