ನನ್ನನ್ನು ಜೈಲಿಗೆ ಕಳಿಸಬೇಕು ಅನ್ಕೊಂಡಿದ್ರು; ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಿಡಿ
ಮೈಸೂರು: ‘ಈಶ್ಚರಪ್ಪ ಬದಲು ಕುಮಾರಸ್ವಾಮಿಯನ್ನು ಬಂಧಿಸಬೇಕಾ’ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅಲ್ಲ ಅವ್ರು ಸುಳ್ಳಿನ ರಾಮಯ್ಯ. ಒಂದು ದಿನವಾದ್ರು ನನ್ನ ಜೈಲಿಗೆ ಕಳಿಸಬೇಕು ಅನ್ಕೊಂಡಿದ್ರು, 12 ವರ್ಷದ ಹಿಂದಿನ ಕೇಸ್ ಕೆದಕಲು ಪ್ರಯತ್ನಿಸಿದ್ರು .
ನಾನು, ಕೆ. ಎಸ್. ಈಶ್ವರಪ್ಪ ಲಾಯರ್ ಅಲ್ಲ. ಈಶ್ಚರಪ್ಪ ಬಗ್ಗೆ ಯಾವ ಸಾಫ್ಟ್ ಕಾರ್ನರ್ ಸಹ ಇಲ್ಲ. ನಾನು ದಾಖಲೆಗಳ ಬಗ್ಗೆ ಮಾತನಾಡಿದ್ದೇನೆ. ಸಂತೋಷ್ ಅವರು ವಾಟ್ಸ್‌ಅಪ್ ಮೆಸೇಜ್ ಕಳುಹಿಸಿದ್ದಾರೆ. ಸಂಪೂರ್ಣ ತನಿಖೆ ಮಾಡಲು ಒತ್ತಾಯಿಸಿದ್ದೇನೆ. ಈಶ್ವರಪ್ಪ ತಪ್ಪು ಮಾಡಿದ್ದರೆ ಅವರೇ ಕಾರಣಕರ್ತರಾಗಿದ್ದರೆ ಬಂಧಿಸಿ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಹೇಳಿದ್ದೇನೆ ಎಂದರು.
ಸಿದ್ದರಾಮಯ್ಯ ನಿಗೆ ನನ್ನ ಭಯ ಕಾಡುತ್ತಿದೆ. ಅದಕ್ಕೆ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಬಿಜೆಪಿಗಿಂತ ಎಲ್ಲಿ ನಾನು ಅಧಿಕಾರಕ್ಕೆ ಬಂದು ಬಿಡುತ್ತೇನೆ ಅನ್ನೋ ಭಯ ಇದೆ. ಇದು 2006ರಿಂದಲೂ ಸಿದ್ದರಾಮಯ್ಯಗೆ ಭಯ ಶುರುವಾಗಿದೆ. ಎರಡು ಪಕ್ಷಗಳು 150 ಸೀಟ್ ಗೆದ್ದ ಮೇಲೆ ಮೈತ್ರಿ ಹೇಗೆ ಸಾಧ್ಯ. ಇವರಿಗೆ ಬಹುಮತ ಬಂದ ಮೇಲೆ ನನ್ನ ಯಾವೂರು ದಾಸಯ್ಯ ಕೇಳುತ್ತಾನೆ?’ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನಿವೃತ್ತಿ ಘೋಷಿಸಿದ ಕೀರನ್ ಪೊಲಾರ್ಡ್
ಮನೆಯ ಮುಂದೆಯೇ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆ
ರಾತ್ರಿಯಾದರೆ ಇಲ್ಲಿ ನೀರಿನಿಂದ ಮೇಲಕ್ಕೆ ಬರುತ್ತವೆ ರಾಶಿ ರಾಶಿ ಮೀನುಗಳು: ಏನಿದರ ರಹಸ್ಯ?
ಕಲ್ಲು ಸಕ್ಕರೆ ಸೇವನೆಯಿಂದ ಈ ಅನಾರೋಗ್ಯ ಸಮಸ್ಯೆಗಳು ಮಾಯ!
ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಪರಾರಿ