ಫಲಿತಾಂಶ ಉಲ್ಟಾ | ರಾಜ್ಯವನ್ನೇ ಗೆದ್ದರೂ ನಂದಿಗ್ರಾಮ ಗೆಲ್ಲಲಿಲ್ಲ ಮಮತಾ ಬ್ಯಾನರ್ಜಿ
02/05/2021
ಕೋಲ್ಕತ್ತಾ: ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ ಎಂದು ವರದಿಗಳಾದ ಕೆಲವೇ ಸಮಯಗಳಲ್ಲಿ ಫಲಿತಾಂಶ ಉಲ್ಟಾ ಆಗಿದ್ದು, ಮಮತಾ ಬ್ಯಾನರ್ಜಿ ನಂದಿಗ್ರಾಮದ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯವನ್ನೇ ಗೆದ್ದರೂ ಮಮತಾ ಬ್ಯಾನರ್ಜಿ ನಂದಿ ಗ್ರಾಮದಲ್ಲಿ ಸೋಲನುಭವಿಸಿದರು. ಬಿಜೆಪಿ ಅಭ್ಯರ್ಥಿ ವಿರುದ್ಧ ಅವರು 1622 ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ತಮ್ಮ ಶಿಷ್ಯ ಸುವೆಂದು ಅಧಿಕಾರಿ ಸವಾಲು ಸ್ವೀಕರಿಸಿ ಚುನಾವಣೆಯಲ್ಲಿ ಮಮತಾ ಸ್ಪರ್ಧಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 214 ಹಾಗೂ ಬಿಜೆಪಿ 77 ಕ್ಷೇತ್ರಗಳಲ್ಲಿ ಜಯಶಾಲಿಯಾಗಿದೆ. ಆದರೆ ಸಿಎಂ ಮಮತಾ ಬ್ಯಾನರ್ಜಿ ಸೋಲಿಗೀಡಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷದ ಮತದಾರರಿಗೆ ಶಾಕ್ ನೀಡಿದೆ.