ನಂದಿನಿ ಪಾರ್ಲರ್ ಗೆ ಕೊನೆಗೂ ಬಂತು ಹೊಸ ದರದ ಹಾಲು, ಮೊಸರು, ಮಜ್ಜಿಗೆ ಪ್ಯಾಕ್ - Mahanayaka

ನಂದಿನಿ ಪಾರ್ಲರ್ ಗೆ ಕೊನೆಗೂ ಬಂತು ಹೊಸ ದರದ ಹಾಲು, ಮೊಸರು, ಮಜ್ಜಿಗೆ ಪ್ಯಾಕ್

nadhi
02/08/2023

ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಹಾಲಿನ ದರವನ್ನು ಏರಿಕೆ ಮಾಡಿತ್ತು. ಇದೀಗ ನಂದಿನಿ ಪಾರ್ಲರ್ ನಲ್ಲಿ ಮಾರಾಟ ಮಾಡುವ ಹಾಲು, ಮೊಸರು ಮಜ್ಜಿಗೆಗೆ ಹೊಸ ದರದ ಪ್ಯಾಕೆಟ್ ಗಳು ಬಂದಿವೆ.

ನಿನ್ನೆ(ಆ.1)ರಂದು ದರ ಏರಿಕೆ ಜಾರಿಯಾಗಿದ್ದರೂ, ಹೊಸ ದರದ ಪ್ಯಾಕೆಟ್ ಬಂದಿರಲಿಲ್ಲ. ಹೀಗಾಗಿ ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಕೆಲವೆಡೆಗಳಲ್ಲಿ ಪ್ಯಾಕೆಟ್ ನಲ್ಲಿ ನಮೂದಿಸಿದ್ದಕ್ಕಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡ್ತಿದ್ದೀರಾ? ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇಂದು ಬೆಳಗ್ಗಿನಿಂದಲೇ ಹೊಸ ದರದ ಪ್ಯಾಕೆಟ್ ನ ಹಾಲು, ಮೊಸರು, ಮಜ್ಜಿಗೆ ಹಾಗೂ ಲಸ್ಸಿ ಬಂದಿದೆ.

ಒಂದೆಡೆ ಮೇಲಿಂದ ಮೇಲೆ ದಿನಬಳಕೆ ವಸ್ತುಗಳ ಮೇಲೆ ಬೆಲೆ ಏರಿಕೆಯಾಗ್ತಿದೆ. ಇನ್ನೊಂದೆಡೆಯಲ್ಲಿ ಹಾಲಿನ ಬೆಲೆ ಕೂಡ ಏರಿಕೆಯಾಗಿದೆ. ಹಾಲುತ್ಪಾದಕರಿಗೆ ಹಾಲಿನ ಬೆಲೆ ಏರಿಕೆ ಒಂದೆಡೆ ಸಂತಸ ತಂದಿದ್ದರೆ, ಮತ್ತೊಂದೆಡೆ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಸಂಕಟ ತಂದಿಟ್ಟಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ