ನಾನೀಗ ಸಚಿವ ಸ್ಥಾನಕ್ಕಿಂತಲೂ ಮೇಲಿದ್ದೇನೆ ಎಂದ ರಮೇಶ್ ಜಾರಕಿಹೊಳಿ! - Mahanayaka
12:59 AM Wednesday 11 - December 2024

ನಾನೀಗ ಸಚಿವ ಸ್ಥಾನಕ್ಕಿಂತಲೂ ಮೇಲಿದ್ದೇನೆ ಎಂದ ರಮೇಶ್ ಜಾರಕಿಹೊಳಿ!

ramesh jarakiholi
14/08/2021

ಬೆಳಗಾವಿ:  ನನಗೆ ಸಚಿವ ಸ್ಥಾನ ಸಿಗಲಿ, ಬಿಡಲಿ ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ತೆಗೆದ ಖುಷಿ ನನಗಿದೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದು, ನಾನೀಗ ಸಚಿವ ಸ್ಥಾನಕ್ಕಿಂತಲೂ ಮೇಲಿದ್ದೇನೆ ಎಂದು ಅವರು ಅವರು ಹೇಳಿದ್ದಾರೆ.

ಬೆಳಗಾವಿಯಲ್ಲಿ ಆರೆಸ್ಸೆಸ್ ಮುಖಂಡರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು,  ಮೈತ್ರಿ ಸರ್ಕಾರ ತೆಗೆಯದಿದ್ದರೆ, ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿತ್ತು. ಸಚಿವರಾಗಬೇಕು ಎಂಬ ಆಸೆ ಜಾರಕಿಹೊಳಿ ಕುಟುಂಬಕ್ಕಿಲ್ಲ, ನಾನು ಸಚಿವನಾಗುತ್ತೇನೋ, ಇಲ್ಲವೋ,  ಅದು ಬೇರೆ ಪ್ರಶ್ನೆ. ಆದರೆ, ನಾನೀಗ ಸಚಿವ ಸ್ಥಾನಕ್ಕಿಂತಲೂ ಮೇಲಿದ್ದೇನೆ ಎಂದು ಅವರು ಹೇಳಿದರು.

ಲಕ್ಷ್ಮಣ್ ಸವದಿ ಅವರನ್ನು ಸಂಪುಟದಿಂದ ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸವದಿ ಅವರಿಗೆ ಡಿಸಿಎಂ ಹುದ್ದೆ ನೀಡಿದಾಗಲೂ ಏಕೆ ಎಂದು ಕೇಳಿಲ್ಲ. ಈಗ ಸಂಪುಟದಿಂದ ಕೈಬಿಟ್ಟಾಗಲೂ ನಾನು ಕೇಳಲ್ಲ. ಬಿಜೆಪಿ ಹೈಕಮಾಂಡ್ ನಿರ್ಧಾರಗಳಿಗೆ ನಾವೆಲ್ಲರೂ ಬದ್ಧ ಎಂದರು.

ನಾವೆಲ್ಲರೂ  2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಬರಲಿ ಎಂಬ ಉದ್ದೇಶದಿಂದ ತ್ಯಾಗ ಮನೋಭಾವದಿಂದ ಕೆಲಸ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಇನ್ನಷ್ಟು ಸುದ್ದಿಗಳು…

ಮನೆಯೊಳಗೆ ಒಂಟಿ ಮಹಿಳೆಯನ್ನು ಕೂಡಿ ಹಾಕಿ ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ!

ಮಕ್ಕಳಾಗುತ್ತಿಲ್ಲ, ಪರಿಹಾರ ತಿಳಿಸಿ ಎಂದು ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಮಾಟಗಾರ!

ಕಾರ್ಯಕ್ರಮದ ವೇದಿಕೆಯಲ್ಲಿಯೇ ಬೈದಾಡಿಕೊಂಡು ಹೊಡೆದಾಟಕ್ಕೆ ನಿಂತ ಶಾಸಕ-ಸಂಸದ!

ವಾಜಪೇಯಿ ಮದ್ಯ, ಮಾಂಸ ಪ್ರಿಯರು, ಸಾರ್ವರ್ಕರ್ ಬಾರ್ ಎಂದು ಹೆಸರಿಡುತ್ತಾರೆಯೇ? | ಸಿ.ಟಿ.ರವಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬಿಗ್ ಬಾಸ್ ಸೀಸನ್ 8 ಮುಗಿದ ಬೆನ್ನಲ್ಲೇ ಮತ್ತೆ 7 ದಿನಗಳವರೆಗೆ ನಡೆಯಲಿದೆ ಬಿಗ್ ಬಾಸ್ ಕಾರ್ಯಕ್ರಮ!

ಜಿಯೋ ಫೋನ್ ಸ್ಫೋಟ: ಪ್ಯಾಂಟ್ ನ ಜೇಬಿನಲ್ಲಿದ್ದಾಗಲೇ ಏಕಾಏಕಿ ಸಿಡಿದ ಮೊಬೈಲ್

ಇತ್ತೀಚಿನ ಸುದ್ದಿ