ನನ್ನ ಬಟ್ಟೆ ನನ್ನ ಆಯ್ಕೆ, ನೀವ್ಯಾಕೆ ಕೇಳ್ತೀರಿ? | ನಿವೇದಿತಾ ಗೌಡ
ಸದ್ಯ ಮೈತುಂಬಾ ಬಟ್ಟೆ ಹಾಕಿಕೊಂಡರೂ ತಪ್ಪು, ದೇಹದ ಅಂಗಾಗ ಕಾಣಿಸುವಂತ ಫ್ಯಾಷನ್ ಬಟ್ಟೆ ಧರಿಸಿದರೂ ತಪ್ಪು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಂತರೆ ಕೇಳುವರು ನೀನೇಕೆ ನಿಂತೆ, ಮಲಗಿದರೆ ಗೊಣಗುವರು ಇವಗಿಲ್ಲ ಚಿಂತೆ, ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ, ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ಎಂಬ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕವನದಂತೆ ಇವರಿಗೆ ಇಷ್ಟವಾಗುವಂತೆ ಹೇಗೆ ಬದುಕುವುದು ಎನ್ನುವುದು ತಿಳಿಯದಂತಾಗಿದೆ.
ಹೌದು…! ನಾವು ಮೈತುಂಬಾ ಬಟ್ಟೆ ಹಾಕಿಕೊಳ್ಳುತ್ತೇವೆ ಎಂದರೆ, ಅದಕ್ಕೂ ವಿರೋಧ, ಆಧುನಿಕ ಫ್ಯಾಷನ್ ನಂತೆ ದೇಹದ ಅಂಗಾಂಗ ಕಾಣುವಂತೆ ಬಟ್ಟೆ ಧರಿಸಿದರೂ ಅದಕ್ಕೂ ಕಮೆಂಟ್, ಅಂತೂ ನಮ್ಮ ಸಮಾಜದಲ್ಲಿ ಕಂಡವರನ್ನು ಕೇಳಿ ಉಡುಗೆ ತೊಡುವ ಪರಿಸ್ಥಿತಿ ಸದ್ಯ ಸೃಷ್ಟಿಯಾಗುತ್ತಿದೆ.
ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದ ನಿವೇದಿತಾ ಗೌಡ ಅವರ ಬಟ್ಟೆಯ ಬಗ್ಗೆ ಒಬ್ಬ ಕಮೆಂಟ್ ಮಾಡಿದ್ದು, ಅದಕ್ಕೆ ಅವರು ತಕ್ಕ ತಿರುಗೇಟು ಕೂಡ ನೀಡಿದ್ದಾರೆ. ಯೂಟ್ಯೂಬ್ ಚಾನೆಲ್ ನಲ್ಲಿ ನಿವೇದಿತಾ ಅವರ ಬಟ್ಟೆಯ ಬಗ್ಗೆ ಕೆಟ್ಟದಾಗಿ ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದು, ಇಂತಹ ಬಟ್ಟೆ ಯಾಕೆ ಧರಿಸೋದು ಎಂದು ಪ್ರವಚನ ಮಾಡಿದ್ದಾನೆ. ಇದಕ್ಕೆ ಅಷ್ಟೇ ಖಾರವಾಗಿ ನಿವೇದಿತಾ ಉತ್ತರ ನೀಡಿದ್ದಾರೆ.
“ಇಷ್ಟೆಲ್ಲ ತೊಗೊಳೊಕಿಂತ ನೀವು ಮೈತುಂಬಾ ಮೈಮುಚ್ಚೋ ಒಳ್ಳೆ ಚೂಡಿದಾರನೋ ಅಥವಾ ಒಳ್ಳೆ ಕುರ್ಥಾ ನೋ ಅಥವಾ ಒಳ್ಳೆಯ ಸೀರೆ ನೋ ತಗೊಂಡಿದ್ರೆ, ನನಗೆ ಮಾತ್ರವಲ್ಲ ಕರ್ನಾಟಕದ ಜನತೆಗೆ ಖುಷಿ ಆಗುತ್ತಿತ್ತು. ಅದು ಬಿಟ್ಟು ಈ ಥರಾ ತೊಡೆ ಎಲ್ಲ ಕಾಣೋ ಬಟ್ಟೆ ತಗೊಂಡು ಹಾಕೋ ಬಿಟ್ಟು ನಾನು ಹೇಗ್… “ಎಂಬಂತೆ ಇನ್ನೂ ಏನೇನೋ ಪ್ರವಚನ ನೀಡಿದ್ದಾನೆ.
ಕುಶಾಲ ಕುಶಾಲ ಎಂಬ ಅಕೌಂಟ್ ನಿಂದ ಈ ರೀತಿಯಾಗಿ ವ್ಯಕ್ತಿ ಕಮೆಂಟ್ ಮಾಡಿದ್ದಾನೆ. ಈತ ತನ್ನ ಪತ್ನಿ ಮಕ್ಕಳಿಗೋ, ತನ್ನ ಸಹೋದರಿಯರಿಗೋ ಒಂದು ಜೊತೆ ಬಟ್ಟೆ ತೆಗೆಸಿಕೊಟ್ಟಿದ್ದಾನೋ ಇಲ್ಲವೋ ಗೊತ್ತಿಲ್ಲ ಆದ್ರೆ, ಊರಿನ ಹೆಂಗಸರಿಗೆ ಬುದ್ಧಿವಾದ ಹೇಳೋದಕ್ಕೆ ಮಾತ್ರ, ತಾನು ಮುಂದೆ ಎಂಬಂತೆ ಈ ಕಮೆಂಟ್ ಮಾಡಿದ್ದಾನೆ.
ಈ ಕಮೆಂಟ್ ಗೆ ಉತ್ತರಿಸಿದ ನಿವೇದಿತಾ, “ಯಾರು ಏನು ಬಟ್ಟೆ ಹಾಕಿಕೊಳ್ತಾರೆ ಅದನ್ನು ಪ್ರಶ್ನೆ ಮಾಡೋಕೆ, ಜಡ್ಜ್ ಮಾಡಲು ಯಾರಿಗೂ ಹಕ್ಕಿಲ್ಲ, ನನ್ನ ಬಟ್ಟೆ ನನ್ನ ಆಯ್ಕೆ, ನಿಮ್ಮ ಬಟ್ಟೆ ನಿಮ್ಮ ಹಕ್ಕು. ನಾನು ಬಂದು ಕೇಳ್ತೀನಾ ನೀವ್ಯಾಕೆ ಇಂತಹ ಬಟ್ಟೆ ಹಾಕಿಕೊಂಡಿದ್ದೀರಿ ಅಂತಾ? ಬಟ್ಟೆಗಳನ್ನು ನೀವು ನೋಡುವ ದೃಷ್ಟಿಯಲ್ಲಿರುತ್ತದೆ. ನೀವು ಒಬ್ಬರನ್ನು ಒಳ್ಳೆಯ ದೃಷ್ಟಿಯಿಂದ ನೋಡಿದ್ರೆ, ಚೆನ್ನಾಗಿ ಕಾಣಿಸುತ್ತೆ, ಕೆಟ್ಟ ದೃಷ್ಟಿಯಿಂದ ನೋಡಿದ್ರೆ, ಕೆಟ್ಟ ದೃಷ್ಟಿಯಿಂದ ನೋಡಿದ್ರೆ ಕೆಟ್ಟದಾಗಿ ಕಾಣಿಸುತ್ತದೆ ಎಂದು ಉತ್ತರಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹಿಜಾಬ್ ವಿವಾದ: ಜನರಿಗೆ ತಮ್ಮಿಷ್ಟದ ಉಡುಗೆ ತೊಡುವ ಸ್ವಾತಂತ್ರ್ಯ ಡಾ.ಅಂಬೇಡ್ಕರ್ ನೀಡಿದ್ದಾರೆ | ಶಾಸಕಿ ಕನೀಝ್ ಫಾತಿಮಾ
ಒಂದೇ ಕುಟುಂಬದ ಐವರ ಬರ್ಬರ ಹತ್ಯೆ: ಮಕ್ಕಳು ಎಂದೂ ನೋಡದ ಕೊಚ್ಚಿ ಹಾಕಿದರು!
ಪತ್ನಿಯ ಅಧಿಕಾರ ಚಲಾಯಿಸುತ್ತಿರುವ ಗಂಡ: ಗ್ರಾ.ಪಂ. ಅಧ್ಯಕ್ಷೆ ವಿರುದ್ಧ ಆಕ್ರೋಶ
ಗಾನಕೋಗಿಲೆ ಲತಾ ಮಂಗೇಶ್ಕರ್ ಇನ್ನಿಲ್ಲ
ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ | ತಾಲೂಕು ಅಭ್ಯಾಸ ವರ್ಗ-2022