ನಾನು ಹಳ್ಳಿ ಹುಡ್ಗಿ, ಕೃಷಿ ಕುಟುಂಬದವಳು; ಈಗ ನನ್ನ ಜವಾಬ್ದಾರಿ ಹೆಚ್ಚಾಗಿದೆ | ಸಚಿವೆ ಶೋಭಾ ಕರಂದ್ಲಾಜೆ
ನವದೆಹಲಿ: ನಾನು ಹಳ್ಳಿ ಹುಡ್ಗಿ, ಕೃಷಿ ಕುಟುಂಬದಿಂದ ಬಂದವಳು. ಕೃಷಿ ಖಾತೆ ಸಿಕ್ಕಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ನೂತನ ಕೃಷಿ-ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಿನ್ನೆ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆದು ಪ್ರಮಾಣ ವಚನ ಸ್ವೀಕರಿಸಿದ್ದ ಕರ್ನಾಟಕದ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಸಂಸದೆ ಶೋಭಾ ಕರಂದ್ಲಾಜೆ ಅವರು, ತಮಗೆ ಸಚಿವ ಸ್ಥಾನ ದೊರಕಿರುವುದಕ್ಕೆ ಹರ್ಷ ವ್ಯಕ್ತಡಿಸಿದ್ದು, ತಾನು ರೈತರ ಸಮಸ್ಯೆಗಳತ್ತ ಗಮನ ಹರಿಸುವುದಾಗಿ ತಿಳಿಸಿದ್ದಾರೆ.
ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಪ್ರತಿ ರಾಜ್ಯದಲ್ಲೂ ಪ್ರವಾಸ ಮಾಡಿ ರೈತರ ಸಮಸ್ಯೆ ಆಲಿಸುತ್ತೇನೆ. ಕೃಷಿ ಕಾನೂನಿನ ಬಗ್ಗೆ ರೈತರಿಗೆ ಅರಿವು ಮೂಡಿಸುತ್ತೇನೆ ಎಂದರು.
ರಾಜ್ಯದ ರೈತರ ಸಮಸ್ಯೆಗಳತ್ತ ಗಮನಹರಿಸುತ್ತೇನೆ. ಕಾಫಿ, ಮೆಣಸು, ಅಡಿಕೆಗೆ ಉತ್ತಮ ಬೆಲೆ ಕೊಡಿಸಲು ಯತ್ನಿಸುತ್ತೇನೆ. ಈ ಬಗ್ಗೆ ಉಡುಪಿ-ಚಿಕ್ಕಮಗಳೂರು ಭಾಗದ ರೈತರಿಗೂ ಆಶ್ವಾಸನೆ ನೀಡುತ್ತೇನೆ ಎಂದು ಸಚಿವೆ ಶೋಭಾ ಹೇಳಿದರು.