ನನ್ನ ಮಗಳು ಡ್ರಗ್ಸ್ ಅಡಿಕ್ಟ್ ಆಗಿದ್ದಾಳೆ | ಬಿಜೆಪಿ ನಾಯಕಿ ಪಮೇಲಾ ಗೋಸ್ವಾಮಿ ತಂದೆ ಹೇಳಿಕೆ - Mahanayaka

ನನ್ನ ಮಗಳು ಡ್ರಗ್ಸ್ ಅಡಿಕ್ಟ್ ಆಗಿದ್ದಾಳೆ | ಬಿಜೆಪಿ ನಾಯಕಿ ಪಮೇಲಾ ಗೋಸ್ವಾಮಿ ತಂದೆ ಹೇಳಿಕೆ

21/02/2021

ನವದೆಹಲಿ:  100 ಗ್ರಾಮ್ ಕೋಕೇನ್ ನೊಂದಿಗೆ ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳ ಬಿಜೆಪಿ ಯುವ ನಾಯಕಿ ಪಮೇಲಾ ಗೋಸ್ವಾಮಿ ಡ್ರಗ್ಸ್ ಅಡಿಕ್ಟ್ ಆಗಿದ್ದಳು ಎಂದು ಆಕೆಯ ತಂದೆಯೇ ಹೇಳಿಕೆ ನೀಡಿದ್ದಾರೆ.

ಆಕೆ ಡ್ರಗ್ಸ್ ಅಡಿಕ್ಟ್ ಆಗಿದ್ದು, ಆಕೆಯ ಮೇಲೆ ಪ್ರಭಾವ ಬೀರುತ್ತಿರುವ ವ್ಯಕ್ತಿಯೊಬ್ಬನ ಕಾರಣದಿಂದಾಗಿ ಈ ರೀತಿ ಸಂಭವಿಸಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಪೊಲೀಸರು ಈಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಇದರಲ್ಲಿ ನನ್ನ ಪಾತ್ರವಿಲ್ಲ, ಕೈಲಾಸ್ ವಿಜಯವರ್ಗೀಯರ ಆಪ್ತ ರಾಕೇಶ್ ಸಿಂಗ್  ಕೈವಾಡ ಇದೆ. ನನ್ನನ್ನು ಅನಗತ್ಯವಾಗಿ ಸಿಲುಕಿಸಲಾಗಿದೆ ಎಂದು ಪಮೇಲಾ ಗೋಸ್ವಾಮಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ