ನನ್ನ ಮಗನ ಕೊಲೆಗೆ ಕಾರಣ ಏನು? | ಕಾಣದ ಕೈಗಳನ್ನು ಕಂಡು ಹಿಡಿಯಬೇಕು: ಫಾಝಿಲ್ ತಂದೆ

ಮಂಗಳೂರು: ನನ್ನ ಮಗನ ಹತ್ಯೆ ಆದ ದಿನದಂದು ಪೊಲೀಸ್ ಕಮಿಷನರ್ ಬಂದು ಹತ್ಯಾ ಆರೋಪಿಗಳನ್ನು ಹಿಡಿತಿವಿ ಅಂದಿದ್ರು. ಆರೋಪಿಗಳನ್ನು ಹಿಡಿದ್ರು. ಆದ್ರೆ ಕೊಲೆಯ ಹಿಂದಿನ ನೈಜ ಸತ್ಯ ಏನು, ಯಾರೂ ಈ ಕೊಲೆ ಮಾಡಿಸಿದ್ರು ಎಂಬುವುದನ್ನು ಬಹಿರಂಗಪಡಿಸಿಲ್ಲ ಎಂದು ಇತ್ತೀಚಿಗೆ ಹತ್ಯೆಗೀಡಾದ ಫಾಝಿಲ್ ತಂದೆ ನೋವು ತೋಡಿಕೊಂಡಿದ್ದಾರೆ.
ಸುರತ್ಕಲ್ ನಲ್ಲಿ ಫಾಝಿಲ್ ಹತ್ಯೆ ಖಂಡಿಸಿ ಮುಸ್ಲಿಂ ಐಕ್ಯತಾ ಸಂಘದಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ಮಗನ ಕೊಲೆ ಮಾಡಿದ ನೈಜ ಆರೋಪಿಗಳನ್ನು ಬಂಧಿಸಬೇಕು. ಕೊಲೆ ಹಿಂದಿರೋ ಕಾಣದ ಕೈಗಳನ್ನು ಕಂಡು ಹಿಡಿಯಬೇಕು ಎಂದ ಅವರು, ಮಗನ ಕೊಲೆ ಕೇಸನ್ನು ಉನ್ನತ ತನಿಖೆ ಮಾಡಲು ಆಗ್ರಹಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಧಾರ್ಮಿಕ ಮುಖಂಡ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಜಿಲ್ಲೆಯ ಜನ್ರಲ್ಲಿ ನಡುಕ ಹುಟ್ಟಿಸುವಂತೆ ಸರಣಿ ಮೂರು ಕೊಲೆ ನಡೆದಿದೆ. ಮಸೀದಿ ಮದ್ರಸಗಳು ತೆರೆದ ಕೇಂದ್ರವಾಗಿದೆ. ಯಾರಿಗೂ ಇಲ್ಲಿಗೆ ಬಂದು ನೋಡಬಹುದು. ಇಲ್ಲಿ ಯಾವುದೇ ಮುಚ್ಚು ಮರೆ ಇರುವುದಿಲ್ಲ. ಅನ್ಯಾಯ ಅಕ್ರಮ ಕೊಲೆಯನ್ನು ನಮ್ಮವನೆ ಮಾಡಿದ್ರೂ ಬೆಂಬಲಿಸುವುದಿಲ್ಲ. ಅಮಾಯಕರಿಗೆ ಅನ್ಯಾಯ ಆಗಬಾರದು ಎಂದರು.
ಜಿಲ್ಲೆಯಲ್ಲಿ ಮೂರು ಕೊಲೆ ನಡೆದಿದೆ ಎರಡು ನಮ್ಮ ಧರ್ಮದವರೇ. ಸರ್ಕಾರ ಇವ್ರಿಗೆ ಯಾವ ರೀತಿ ಸಾಂತ್ವಾನ ನೀಡಿದೆ ಎಂದು ಕಿಡಿಕಾರಿದ್ದಾರೆ. ಯಾಕೆ ಇಲ್ಲಿ ತಾರತಮ್ಯ ನೀತಿ, ಪರಿಹಾರ ವಿತರಣೆಯಲ್ಲಿ ತಾರತಮ್ಯ ಅನುಸರಿಸಲಾಗಿದೆ ಎಂದರು. ಜನ ಪ್ರತಿನಿಧಿಗಳು ಜನರನ್ನು ಪ್ರತಿನಿಧಿಸಬೇಕೇ ಹೊರತು ಪಾರ್ಟಿಯನ್ನಲ್ಲ. ಒಬ್ಬರ ಕೊಲೆ ಪ್ರಕರಣ ಎನ್ಐಎಗೆ, ಇನ್ನಿಬ್ಬರ ತನಿಖೆ ಸ್ಥಳೀಯ ಪೊಲೀಸರಿಂದ ನಡಿತಿದೆ. ಇಲ್ಲೂ ತಾರತಮ್ಯ ಆಗಿದೆ ಎಂದು ಕಿಡಿಕಾರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka