ನನ್ನ ವರ್ಗಾವಣೆಯ ಹಿಂದೆ ಭೂಮಾಫಿಯಾ ಪಿತೂರಿ ಇದೆ | ರೋಹಿಣಿ ಸಿಂಧೂರಿ
08/06/2021
ಮೈಸೂರು: ನನ್ನ ವರ್ಗಾವಣೆಯ ಹಿಂದೆ ಭೂಮಾಫಿಯಾ ಪಿತೂರಿ ಇದೆ ಎಂದು ಮೈಸೂರಿನ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದು, ಸರ್ಕಾರಿ ಭೂಮಿ ಮತ್ತು ಕೆರೆಗಳನ್ನು ರಕ್ಷಿಸುವುದಷ್ಟೇ ನನ್ನ ಗುರಿ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಯ್ಯಜನಹುಂಡಿ ಮತ್ತು ಕೀರ್ಗಳ್ಳಿ ಕೆರೆಗಳ ಸುತ್ತಲಿನ ಒತ್ತುವರಿಯನ್ನು ತೆರವುಗೊಳಿಸಲು ನಾವು ಕ್ರಮ ಕೈಗೊಂಡಿದ್ದೇವೆ. ಕುರುಬರಹಳ್ಳಿಯಲ್ಲಿ ಸರ್ವೆ ಸಂಖ್ಯೆಯಲ್ಲಿ ಕೆಲವು ಸಮಸ್ಯೆಗಳಿದ್ದು ಅದು ಸುಪ್ರೀಂ ಕೋರ್ಟ್‌ಗೆ ಹೋಯಿತು. ಕೋರ್ಟ್ ನಲ್ಲಿ ಪ್ರಕರಣವನ್ನು ಚೆನ್ನಾಗಿ ಸಮರ್ಥಿಸಿಕೊಂಡಿದ್ದೇವೆ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ.
ನನಗೆ ಶಿಲ್ಪಾ ನಾಗ್ ಅವರ ಹತಾಶೆ, ಅಭದ್ರತೆ ಬಗ್ಗೆ ಅನುಕಂಪವಿದೆ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದರು. ಈಗ ಜನರಿಗೆ ಬೇಕಿರುವುದು ಕೋವಿಡ್ ನಿರ್ವಹಣೆ, ಅದು ಆಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದರು.