ನನ್ನದು ಸ್ವಂತ ದುಡಿಮೆಯ ದುಡ್ಡು, ಹಾಗಾಗಿ ಇಡಿ ಅಧಿಕಾರಿಗಳು ವಾಪಸ್ ಹೋಗಿದ್ದಾರೆ | ಜಮೀರ್ ಅಹ್ಮದ್
ಬೆಂಗಳೂರು: ಸ್ವಂತ ದುಡಿಮೆಯ ದುಡ್ಡು ಹಾಗೂ ನಾನು ನೀಡಿದ ದಾಖಲೆಗಳು ಸರಿ ಇದ್ದ ಕಾರಣ ಇಡಿ ಅಧಿಕಾರಿಗಳು ವಾಪಸ್ ಹೋಗಿದ್ದಾರೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ನಿನ್ನೆ ಬೆಳಗ್ಗೆ ಜಮೀರ್ ಅಹ್ಮದ್ ಮನೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆರಂಭದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ಇಡಿ ದಾಳಿ ನಡೆಸಿದೆ ಎಂದು ಸ್ಪಷ್ಟವಾಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ಜಮೀರ್ ಇಡಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನನ್ನ ಮನೆಯ ವಿಚಾರವಾಗಿ ಯಾರೋ ದೂರು ಕೊಟ್ಟಿದ್ದಾರಂತೆ, ಹಾಗಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆ ದೂರುದಾರರಿಗೆ ದೇವರೇ ಉತ್ತರ ಕೊಡುತ್ತಾನೆ. ಕಳ್ಳತನ, ಲೂಟಿ ಮಾಡಿದ್ರೆ ತಪ್ಪು. ಆದ್ರೆ ಸ್ವಂತ ಹಣದಲ್ಲಿ ಸಂಪಾದಿಸಿದ ದುಡ್ಡು ನನ್ನದು. ಹಾಗಾಗಿ ನಾನು ನೀಡಿದ ದಾಖಲೆಗಳು ಸರಿಯಾಗಿತ್ತು. ನಾವು ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದೇವೆ. ಇಡಿ ಅಧಿಕಾರಿಗಳು ಅಲ್ಲಿಗೂ ದಾಳಿ ನಡೆಸಿದ್ದಾರೆ. ಆದರೆ ಅವರಿಗೇನೂ ಸಿಕ್ಕಿಲ್ಲ ಎಂದು ಜಮೀರ್ ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಕೊನೆಗೂ ಕಮಲ ಮುಡಿದ ಕೊಳ್ಳೇಗಾಲ ಶಾಸಕ ಎನ್.ಮಹೇಶ್! | ಮಾಜಿ, ಹಾಲಿ ಸಿಎಂ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ
“ಬಡ ಮಕ್ಕಳ ಮೊಟ್ಟೆ ತಿಂದ ಜೊಲ್ಲೆಗೆ ಝೀರೋ ಟ್ರಾಫಿಕ್ ರಾಜಮರ್ಯಾದೆ!”
ತನ್ನ ವಿರುದ್ಧದ ವರದಿ ಪ್ರಕಟಿಸದಂತೆ ನ್ಯೂಸ್ ಫಸ್ಟ್ ಗೆ ತಡೆಯಾಜ್ಞೆ ತಂದ ಸಚಿವೆ ಜೊಲ್ಲೆ
ಲಾಬಿ ಮಾಡುತ್ತಿದ್ದರೆ ನಾನೂ ಮಂತ್ರಿಯಾಗುತ್ತಿದ್ದೆ | ಗದ್ಗದಿತರಾದ ಶಾಸಕ ರೇಣುಕಾಚಾರ್ಯ
“ಓ ಲಾರ್ಡ್ ಜೀಸಸ್, ಪ್ಲೀಸ್ ಹೆಲ್ಪ್ ಮೀ” ಎಂದು ಎನ್.ಮಹೇಶ್ ಬೇಡುತ್ತಿರುವ ವಿಡಿಯೋ ವೈರಲ್