ನನ್ನನ್ನು ಎಳೆದುತಂದು ದುರುಪಯೋಗಪಡಿಸಿಕೊಳ್ಳಲಾಗಿದೆ | ಉಮಾಪತಿ ವಿರುದ್ಧ ಕಿಡಿಕಾರಿದ ಅರುಣ ಕುಮಾರಿ
ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 25 ಕೋಟ. ರೂಪಾಯಿ ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅರುಣ ಕುಮಾರಿ ನಿರ್ಮಾಪಕ ಉಮಾಪತಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಈ ಪ್ರಕರಣದಲ್ಲಿ ನನ್ನನ್ನು ಎಳೆದುತಂದು ದುರುಪಯೋಗಪಡಿಸಿಕೊಳ್ಳಲಾಗಿದೆ. ನಿರ್ಮಾಪಕ ಉಮಾಪತಿಯವರು ಮಾಡಿದ್ದು ತಪ್ಪು, ನನ್ನನ್ನು ಬಳಸಿಕೊಂಡು ಹೆಣ್ಣು ಸಮಾಜದ ಮುಂದೆ ತಲೆಯೆತ್ತಿ ಬದುಕದಂತೆ ಮಾಡಿದ್ದೀರಿ, ಇಂದು ನಾನು ಹೊರಗೆ ಹೇಗೆ ಜನರ ಮುಂದೆ ಮುಖ ತೋರಿಸಿ ಹೇಗೆ ಬದುಕಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.
ಉಮಾಪತಿಯವರ ಜೊತೆ ವಾಟ್ಸಾಪ್ ಚಾಟಿಂಗ್ 32 ಪೇಜ್ ಇದೆ ಎನ್ನುವುದು ಸುಳ್ಳು. ಅವರೊಂದಿಗೆ ಕಳೆದ ಮಾರ್ಚ್ 30ರಿಂದ ಸಂಪರ್ಕದಲ್ಲಿದ್ದೆ, ಇದರಿಂದ ಉಮಾಪತಿ ಅವರಿಗೆ ಲಾಭನೋ ನಷ್ಟಾನೋ ಗೊತ್ತಿಲ್ಲ. ನೇರವಾಗಿ ದರ್ಶನ್ ಸರ್ ಅವರಿಗೆ ಹೇಳಬಹುದಿತ್ತು. ಇದು ಸಣ್ಣ ವಿಷಯ. ಅವರು ದೊಡ್ಡ ವ್ಯಕ್ತಿಗಳು, ಅವರ ಮಧ್ಯೆಯೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಸುಮ್ಮನೆ ಹೊರಗೆ ಎಳೆದುತಂದು ದೊಡ್ಡ ವಿಷಯ ಮಾಡಲಾಗಿದೆ ಎಂದರು.
ನನ್ನನ್ನು ಬಳಸಿಕೊಂಡು ಈ ರೀತಿ ಮಾಡುತ್ತಿರುವುದು ತಪ್ಪು, ನನ್ನನ್ನು ಇದರಿಂದ ದಯವಿಟ್ಟು ಹೊರಗೆ ತನ್ನಿ, ನನ್ನ ಪರಿಸ್ಥಿತಿ ಶೋಚನೀಯವಾಗಿದೆ, ನಾನು ಖಿನ್ನತೆಗೆ ಹೋಗಿದ್ದೇನೆ, ನನ್ನ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ ಎಂದು ಹೇಳಿಕೊಂಡರು.
ಈ ಪ್ರಕರಣದಲ್ಲಿ ಉಮಾಪತಿಗೆ ಲಾಭ ಏನು? ನನ್ನನ್ನು ಉಪಯೋಗಿಸಿದ್ದು ತಪ್ಪು. ಅವರ ಜೊತೆಗೆ ಚಾಟಿಂಗ್ ಮಾಡುವಾಗ ಹಾರ್ಟ್ ಸಿಂಬಲ್ ಕಳುಹಿಸಿದ್ದರಲ್ಲ ಏನು ತಪ್ಪಿದೆ, ಅಪ್ಪ ಮಕ್ಕಳಿಗೆ ಕಳುಹಿಸಲ್ವಾ? ಅಣ್ಣ ತಂಗಿಗೆ ಕಳುಹಿಸಲ್ವಾ? ನನ್ನ ಗಂಡ ನೀಡಿದ ಫೋಟೋಗಳು ಈಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ನನ್ನ ಪತಿ ಸಾಚಾ ಅಲ್ಲ. ನನಗೆ ಆತನನ್ನು ಗಂಡ ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತಿದೆ. ಈಗ ಬಂದಿರುವುದು ಎಲ್ಲ ಸತ್ಯವಲ್ಲ. ಪೊಲೀಸರ ತನಿಖೆಯಲ್ಲಿ ಎಲ್ಲದ್ದಕ್ಕೂ ಉತ್ತರ ಸಿಗಲಿದೆ. ನನಗೆ ಪೊಲೀಸರಿಂದ ನ್ಯಾಯ ಸಿಗುವ ನಂಬಿಕೆಯಿದೆ ಎಂದರು.
ಇನ್ನಷ್ಟು ಸುದ್ದಿಗಳು:
“ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ” ಎಂದು ದರ್ಶನ್ ಪ್ರಕರಣದಲ್ಲಿ ಉಮಾಪತಿ ಹೀಗೆ ಹೇಳಿದ್ದೇಕೆ?
ನಟ ದರ್ಶನ್ ಗೆ 25 ಕೋಟಿ ರೂಪಾಯಿ ವಂಚಿಸಲು ಯತ್ನ!
ಬಾಡಿಗೆ ಬೇಡ, ಆಸೆ ಪೂರೈಸು ಎಂದು ಮನೆ ಮಾಲಿಕನಿಂದ ಮಹಿಳೆಗೆ ಕಿರುಕುಳ
“ಅಪಘಾತ ಹೇಗಾಯ್ತು?” ಎಂದು ಕೇಳಿದಕ್ಕೆ “ಟಿಶ್ಕ್ಯಾವ್” ಅಂತ ಆಯ್ತು ಎಂದ ಜಗ್ಗೇಶ್ ಪುತ್ರ!