ನಾನು ಮಾಂಸಾಹಾರಿ, ಅದು ನನ್ನ ಹವ್ಯಾಸ: ಮಾಂಸಾಹಾರಿ ವಿರೋಧಿಗಳಿಗೆ ಸಿದ್ದು ತಿರುಗೇಟು
ಬೆಂಗಳೂರು: ಮಾಂಸ ತಿನ್ನುವುದು ಅವರವರ ಅಭ್ಯಾಸ. ನಾನು ಮಾಂಸಾಹಾರಿ ಅದು ನನ್ನ ಹವ್ಯಾಸ ಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಂಸಾಹಾರಿ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ದೇವಸ್ಥಾನಗಳಿಗೆ ಹೋಗುತ್ತೇನೆ . ನಮ್ಮೂರು ದೇವಸ್ಥಾನದಲ್ಲಿ ನಾನು ಕುಣಿಯಲಿಲ್ವೇ? ತಿರುಪತಿ,ಚಾಮುಂಡಿ,ನಂಜನಗೂಡಿಗೆ ಹೋಗಿದ್ದೇನೆ ಎಷ್ಟೋ ದೇವರಿಗೆ ಮಾಂಸದ ಎಡೆ ಇಡುತ್ತಾರೆ ಎಂದರು.
ಮಡಿಕೇರಿ ಚಲೋ ಕಾಂಗ್ರೆಸ್ ಪಾದಯಾತ್ರೆ ಸರಿಯಲ್ಲ ಎಂಬ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿಯವರಾದ ಯಡಿಯೂರಪ್ಪ ಪಾದಯಾತ್ರೆ ಸರಿಯಲ್ಲ ಅಂತಾ ಹೇಳಲೇಬೇಕಲ್ಲ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka