ನಾನು ಅಪ್ಪು ಸರ್ ಅವರ 5 ಪರ್ಸೆಂಟ್ ನಷ್ಟೂ ಇಲ್ಲ: ತಮಿಳು ಯುವನಟ ಆರ್ಯ - Mahanayaka

ನಾನು ಅಪ್ಪು ಸರ್ ಅವರ 5 ಪರ್ಸೆಂಟ್ ನಷ್ಟೂ ಇಲ್ಲ: ತಮಿಳು ಯುವನಟ ಆರ್ಯ

puneeth arya
01/07/2022

ಚೆನ್ನೈ: ನಾನು ಅಪ್ಪು ಸರ್ ಅವರ 5 ಪರ್ಸೆಂಟ್ ನಷ್ಟೂ ಇಲ್ಲ, ಅವರ ಡಾನ್ಸ್, ಫೈಟ್, ಆಕ್ಟಿಂಗ್, ಜಿಮ್ನಾಸ್ಟಿಕ್, ಇಡೀ ಇಂಡಸ್ಟ್ರಿ ಬಳಿ ಇರುವ ಎನರ್ಜಿ ಅವರಲ್ಲಿತ್ತು ಎಂದು ತಮಿಳಿನ ಖ್ಯಾತ ಯುವನಟ ಆರ್ಯ ಹೇಳಿದ್ದಾರೆ.

ತಮಿಳಿನ ಖ್ಯಾತ ಮಾಧ್ಯಮವೊಂದು ತಮಿಳುನಟರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಂದ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದ ಆರ್ಯ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅಪ್ಪು ಸರ್ ಪದಗಳಿಗೂ ಮೀರಿದ ವ್ಯಕ್ತಿತ್ವ. ಈ ಅವಾರ್ಡ್ ಬಂದಿರೋದು ಖುಷಿಕೊಟ್ಟಿದೆ. ಈ ಅವಾರ್ಡ್ ಇಡೀ ಇಂಡಸ್ಟ್ರಿಗೆ ಸೇರಬೇಕು. ಅಶ್ವಿನಿ ಮೇಡಂ ಅವಾರ್ಡ್ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದರು.

ಮೊದಲಿಗೆ ನಾನು ಅಶ್ವಿನಿ ಮೇಡಂಗೆ ತುಂಬಾ ಧನ್ಯವಾದ ಹೇಳಬೇಕು. ಯಾಕೆಂದ್ರೆ, ನನಗೆ ತಿಳಿದ ಹಾಗೆ ಅಶ್ವಿನಿ ಮೇಡಂ ತುಂಬಾ ಸ್ಟ್ರಾಂಗ್ ಹಾಗೂ ಧೈರ್ಯವಂತ ಮಹಿಳೆ ಎಂದು ಆರ್ಯ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭಾರೀ ಮಳೆ ಹಿನ್ನೆಲೆ: ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ: ಬಸ್ ಹತ್ತುವ ವೇಳೆ ಆಯತಪ್ಪಿ ಕೆಳಗೆ ಬಿದ್ದ ವಿದ್ಯಾರ್ಥಿನಿ!

ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ!

ರೋಡು ತೋಡಾಯಿತು: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ವಿದ್ಯಾರ್ಥಿಗಳು ರಸ್ತೆ ದಾಟಿದ್ದು ಹೀಗೆ

ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿದ ಟೈಲರ್ ನ ಬರ್ಬರ ಹತ್ಯೆ!

ಇತ್ತೀಚಿನ ಸುದ್ದಿ