ಹೌದು ನಾನು ಕಿರುಚುವ ಬೊಬ್ಬೆ ಹೊಡೆಯುವ ‘ಕಲ್ಕಿಂಗ್ ಸ್ಟಾರ್’ | ಟೀಕಾಕಾರರಿಗೆ ದೀಪು ಶೆಟ್ಟಿಗಾರ್ ತಿರುಗೇಟು - Mahanayaka

ಹೌದು ನಾನು ಕಿರುಚುವ ಬೊಬ್ಬೆ ಹೊಡೆಯುವ ‘ಕಲ್ಕಿಂಗ್ ಸ್ಟಾರ್’ | ಟೀಕಾಕಾರರಿಗೆ ದೀಪು ಶೆಟ್ಟಿಗಾರ್ ತಿರುಗೇಟು

deepu shettygar
18/11/2021

ಮಂಗಳೂರು: ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಅವರು, ತಮ್ಮ ವಿರುದ್ಧದ ಟೀಕೆಗಳಿಗೆ, ಟ್ರೋಲ್ ಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಕಿರುಚುವ, ಬೊಬ್ಬೆ ಹೊಡೆಯುವ, ಕಲ್ಕಿಂಗ್ ಸ್ಟಾರ್(ಕಿರುಚಾಡುವ ಸ್ಟಾರ್) ಎಂದು ವ್ಯಂಗ್ಯ ಮಾಡುವ ಮೂಲಕ ದೀಪು ಶೆಟ್ಟಿಗಾರ್ ಅವರ ಹೋರಾಟಕ್ಕೆ ಹಿನ್ನಡೆ ಉಂಟು ಮಾಡಲು ಪ್ರಯತ್ನಿಸುತ್ತಿರುವದರ ವಿರುದ್ಧ ಅವರು ಹೀಗೆ ಬರೆದುಕೊಂಡಿದ್ದಾರೆ…

“ಅವತ್ತು ಸಿದ್ದರಾಮಯ್ಯನವರು ನಾಮದ ವಿಷಯ ಮಾತನಾಡಿದಾಗ ಹಿಂದೂ ಧರ್ಮದ ಪರವಾಗಿ ಅವರ ವಿರುದ್ಧ ಧ್ವನಿಯೆತ್ತಿದಲ್ಲ ನಾನು ಬೊಬ್ಬೆ ಹೊಡೆದದ್ದು “

“ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಹೋದಾಗ ಅದನ್ನು ವಿರೋಧಿಸಿ ನಾನು ಮಾತನಾಡಿದ್ದಲ್ಲ ಬೊಬ್ಬೆ ಹೊಡೆದದ್ದು”

“ಕುಮಾರಸ್ವಾಮಿಯವರು ಬುದ್ಧಿವಂತರ ಜಿಲ್ಲೆ ಅಂತ ತಮಾಷೆ ಮಾಡಿದಾಗ ಅದರ ವಿರುದ್ಧ ನಾನು ಮಾತನಾಡಿದ್ದಲ್ಲ ಬೊಬ್ಬೆ ಹೊಡೆದದ್ದು”




“ಸಮ್ಮಿಶ್ರ ಸರಕಾರವಿದ್ದಾಗ ಬಜೆಟ್ ನಲ್ಲಿ ನಮಗೇನು ನೀಡದಿದ್ದಾಗ ನಾನು ಪ್ರಶ್ನಿಸಿದ್ದ ಲ್ಲ ಬೊಬ್ಬೆ ಹೊಡೆದದ್ದು”

“ದೇವಸ್ಥಾನ ಹೊಡೆಯಲು ಹೋದವರು ವಿರುದ್ಧ ನಾನು ಎತ್ತಿದ ಧ್ವನಿ ಅದು ಕೇವಲ ಬೊಬ್ಬೆ”

“ಕಾವ್ಯ ಪೂಜಾರಿ, ಸೌಜನ್ಯ ಮುಂತಾದವರ ವಿಷಯದಲ್ಲೂ ಕೂಡ ನಾನು ಮಾತನಾಡಿದ್ದು ಅಲ್ಲ ಬೊಬ್ಬೆ ಹಾಕಿದ್ದು”

“ಕೊರೊನಾ ಬಂದು ಎಷ್ಟೋ ಮಂದಿಯನ್ನು ಕೆಲವು ಖಾಸಗಿ ಆಸ್ಪತ್ರೆಗಳ ಲೂಟಿ ದಾಗ ನಾನು ಬೊಬ್ಬೆ ಹಾಕಿದ್ದು”

“ಇಷ್ಟು ಮಾತ್ರವಲ್ಲ ಹೇಳಲು ಹೋದರೆ ಇನ್ನು ಎಷ್ಟೋ ವಿಷಯಗಳಿವೆ….”

ಯಾರು ಏನೇ ಹೇಳಲಿ ನಾನು ದೈವ ದೇವರುಗಳನ್ನು ನಂಬಿ ಇನ್ನೂ ನನ್ನ ಬೊಬ್ಬೆ ಮುಂದುವರಿಸುತ್ತಾ ಹೋಗುತ್ತೇನೆ. ನನಗೆ ಮೆಚ್ಚಿಸಲು ಇರುವುದು ದೇವರನ್ನು ಹೊರತು ಬೇರೆ ಯಾರನ್ನೂ ಅಲ್ಲ. ಸಾಮಾಜಿಕ ಕೆಲಸ ಮಾಡಲು ಪ್ರಾರಂಭ ಮಾಡಿದ ದಿನದಿಂದ ಇಲ್ಲಿಯತನಕ ಮಾತನಾಡಿದ ಯಾವುದೇ ವಿಷಯಕ್ಕೆ ಯಾರಿಂದಲೂ ಒಂದು ರೂಪಾಯಿಯನ್ನು ಪಡೆಯದೆ ಕೆಲಸ ಮಾಡುತ್ತಿದ್ದೇನೆ. ಅದು ನಾನು ನಂಬಿರುವ ದೈವ-ದೇವರುಗಳ ಮೇಲೆ ಧೈರ್ಯವಾಗಿ ಪ್ರಮಾಣ ಮಾಡಿ ಹೇಳುತ್ತೇನೆ. ಸಮಾಜಸೇವೆ ಮಾಡಲು ಪ್ರಾರಂಭ ಮಾಡಿದ ದಿನದಿಂದ ಇವತ್ತಿನವರೆಗೂ ನಡೆದುಕೊಂಡು ಬಸ್ಸಿನಲ್ಲಿ ಹೋಗುತ್ತೇನೆ ಹೊರತು ಕೋಟಿಗಟ್ಟಲೆ ಕಾರ್ ಕೋಟಿಗಟ್ಟಲೆಯ ಮನೆಯಾಗಲಿ ಇಲ್ಲ. ಸರಸ್ವತಿ ಮತ್ತು ಶಾರದೆಯ ಆಶೀರ್ವಾದ ವಿರುವ ಕೆಲಸವನ್ನು ದಿನನಿತ್ಯ ಮಾಡಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹೇಳಿ ಅದರಿಂದ ಜೀವನ ಸಾಗುತ್ತಿದ್ದೇನೆ ಹೊರತು ಯಾರು ಯಾರ ಭಿಕ್ಷೆಯಲ್ಲಿ ಬದುಕುತ್ತಿಲ್ಲ ಯಾರಲ್ಲು ನಾನು ಕೇಳಿ ಮಾತನಾಡಲು ಬಂದಿಲ್ಲ ಯಾರನ್ನು ಮೆಚ್ಚಿಸಲು ಮಾತನಾಡಲು ಬಂದಿಲ್ಲ ನನ್ನ ಧ್ವನಿ ಸಮಾಜದ ಪರವಾಗಿ ಯಾವತ್ತೂ ಇದ್ದೇ ಇರುತ್ತದೆ ನನ್ನನ್ನು ಟ್ರೋಲ್ ಮಾಡಿ ವಿಕೃತವಾಗಿ ಮೆರೆಯುತ್ತಿರುವವರಿಗೆ ನನ್ನ ಒಂದು ರೋಮವನ್ನು ಕೀಳಲು ಸಾಧ್ಯವಿಲ್ಲ…

ಸಾಮಾಜಿಕ ಹೋರಾಟದ ವಿಚಾರ ಬಂದರೆ, ಧರ್ಮ, ಜಾತಿ, ಪಕ್ಷಗಳನ್ನು ನೋಡದೇ ಮುಂಚೂಣಿಯಲ್ಲಿ ನಿಲ್ಲುವ ದೀಪು ಶೆಟ್ಟಿಗಾರ್ ಅವರು, ಅನ್ಯಾಯದ ವಿರುದ್ಧ ತಮ್ಮ ವಿಶಿಷ್ಟ ಮಾತಿನ ಶೈಲಿಯ ಮೂಲಕ ತರಾಟೆಗೆತ್ತಿಕೊಳ್ಳುತ್ತಾರೆ. ಆದರೆ, ಅವರ ಹೋರಾಟಕ್ಕೆ ಹಿನ್ನಡೆ ಮಾಡಲು ಪ್ರತಿ ಬಾರಿಯೂ ಅವರನ್ನು ಹೀಯಾಳಿಸುವ ಮೂಲಕ ವ್ಯಂಗ್ಯ ಮಾಡಲಾಗುತ್ತಿದೆ ಎನ್ನುವ ಮಾತುಗಳು ಇದೀಗ ಮಂಗಳೂರಿನಾದ್ಯಂತ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉಪ್ಪಿಟ್ಟಿನಲ್ಲಿ ಹಾವಿನ ಮರಿ?: 50ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

ಸಿಎಂ ಎದುರಲ್ಲೇ ನೊಂದವರನ್ನು ಎಳೆದು ಹಾಕಲು ಮುಂದಾದ ಪೊಲೀಸರು

ಏಷ್ಯಾ ಪೆಸಿಫಿಕ್‌ ರಾಷ್ಟ್ರಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಡಿಜಿಟಲ್ ಬ್ರಾಂಡ್‌ ಗಳಲ್ಲಿ ಪ್ರಮುಖ ಸ್ಥಾನ ಪಡೆದ ‘ಕೂ’ ಅಪ್ಲಿಕೇಶನ್

ಮನೆ ಕೆಲಸದವರನ್ನು ಕೊಂದು 95 ಲಕ್ಷ ರೂ. ದೋಚಿದ ಐವರು ದರೋಡೆಕೋರರು ಅರೆಸ್ಟ್

ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಗೆ ಕೋಲಾರ ಪ್ರವೇಶಕ್ಕೆ ನಿರ್ಬಂಧ!

ದ್ವಿತೀಯ ಪಿಯು ಮಧ್ಯ ವಾರ್ಷಿಕ ಪರೀಕ್ಷೆ ಮುಂದೂಡಿಕೆಯಾಗುವ ಸಾಧ್ಯತೆ!

ಇತ್ತೀಚಿನ ಸುದ್ದಿ