ನಾಪತ್ತೆಯಾಗಿದ್ದ ಯುವಕನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದ ಚೀನಾ
ನವದೆಹಲಿ: ಕೆಲವು ದಿನಗಳ ಹಿಂದೆ ಚೀನಾದಿಂದ ಅಪಹರಿಸಲ್ಪಟ್ಟಿದ್ದ ಎನ್ನಲಾದ ಯುವಕನನ್ನು ಚೀನಾದ ಸೇನೆ ಭಾರತೀಯ ಸೇನೆಗೆ ಹಸ್ತಾಂತರ ಮಾಡಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
ಯುವಕನ ವೈದ್ಯಕೀಯ ಪರೀಕ್ಷೆ ಸೇರಿದಂತೆ ಸೂಕ್ತ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಕಿರಣ್ ರಿಜಿಜು ಸ್ಪಷ್ಟನೆ ನೀಡಿದ್ದಾರೆ. ಕಿರಣ್ ರಿಜಿಜು ನಿನ್ನೆಯಷ್ಟೇ ಚೀನಾ ಯುವಕನನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ ಎಂದು ಟ್ವೀಟ್ ಮಾಡಿದ್ದರು.
ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಯುವಕನಾದ 17 ವರ್ಷದ ಮಿರಾಮ್ ಟ್ಯಾರೋನ್ ಚೀನಾ ಸೇನೆ ಅಪಹರಿಸಿದೆ ಎಂದು ಪೂರ್ವ ಅರುಣಾಚಲ ಪ್ರದೇಶದ ಸಂಸದ ತಪಿರ್ ಗಾವೋ ಹೇಳಿದ್ದರು. ಈಗ ಆ ಯುವಕನನ್ನು ಚೀನಾ ಸೇನೆ ಭಾರತೀಯ ಸೇನೆಯ ವಶಕ್ಕೆ ನೀಡಿದೆ ಎಂದು ತಿಳಿದು ಬಂದಿದೆ.
ಜ. 21ರಂದು ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಚೀನಾ ವಿದೇಶಾಂಗ ಇಲಾಖೆ ಈ ಬಗ್ಗೆ ತನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮೊಸರಿನ ಜೊತೆ ಒಣದ್ರಾಕ್ಷಿ ಸೇವಿಸಿದರೆ ಏನಾಗುತ್ತೆ ಗೊತ್ತಾ?
ಕಳ್ಳಭಟ್ಟಿ ಸೇವಿಸಿ ಮತ್ತೆ ಐವರು ಸಾವು: ಮುಂದುವರಿದ ಸಾವಿನ ಸರಣಿ
ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿರುವ ಜಡ್ಜ್ ವಜಾಕ್ಕೆ ಶಾಸಕ ಕೆ.ಶಿವನಗೌಡ ಒತ್ತಾಯ
ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾ ಮಹಿಳೆಯ ಬಂಧನ
ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಗೆ ಗುಡ್ ಬೈ