ನಾಪತ್ತೆಯಾಗಿದ್ದ ಯುವಕನ ಮೃತದೇಹ ಆಳ ಸಮುದ್ರದಲ್ಲಿ ಪತ್ತೆ!
ಮಂಗಳೂರಿನ ಸೋಮೇಶ್ವರ ಕಡಲ ಕಿನಾರೆಯಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿರೋ ಘಟನೆ ಕಾಸರಗೋಡು ಜಿಲ್ಲೆಯ ಕುಂಬ್ಳೆ ಸಮುದ್ರದಲ್ಲಿ ನಡೆದಿದೆ.
ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲಾರು ದಾರಂದ ಬಾಗಿಲು ನಿವಾಸಿ ಝಾಕಿರ್ (36) ಮೃತರು ಎಂದು ಗುರುತಿಸಲಾಗಿದೆ.
ವಿವಾಹಿತರಾಗಿರುವ ಝಾಕಿರ್ ಈ ಹಿಂದೆ ಮಂಗಳೂರಿನ ಧಕ್ಕೆಯಲ್ಲಿ ಸಹೋದರರ ಜೊತೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದರು. ಝಾಕಿರ್ ಸೆ.26ರಂದು ನಾಪತ್ತೆಯಾಗಿದ್ದರು.
ಸೆ.28ರಂದು ಕುಂಬ್ಳೆಯ ಆಳ ಸಮುದ್ರದಲ್ಲಿ ಝಾಕಿರ್ ಮೃತದೇಹ ಮೀನುಗಾರರಿಗೆ ದೊರಕಿದ್ದು, ಕೋಸ್ಟ್ ಗಾರ್ಡ್ ಪೊಲೀಸರು ಕೇಸು ದಾಖಲಿಸಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕೊಳೆತಿದ್ದ ಮೃತದೇಹದ ಗುರುತು ಪರಿಚಯ ಸಿಗದ ಕಾರಣ ಮೂರು ದಿವಸಗಳ ನಂತರ ಮೃತದೇಹವನ್ನು ಅಧಿಕಾರಿಗಳು ದಫನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka